×
Ad

ಬೌದ್ಧಧರ್ಮಕ್ಕೆ ಮತಾಂತರಗೊಂಡ ಮದ್ಯದಂಗಡಿ ವಿರೋಧಿ ದಲಿತರು

Update: 2016-04-21 23:26 IST

ಜೋಧಪುರ,ಎ.21: ಜೋಧಪುರದ ಭಡಾಸಿಯಾ ಉಪನಗರದಲ್ಲಿಯ ಸಂತ ರವೀಂದ್ರ ಕಾಲನಿಯಲ್ಲಿ ಹೊಸದಾಗಿ ಮದ್ಯದಂಗಡಿಯ ಆರಂಭವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿರುವ ಅಲ್ಲಿಯ ದಲಿತರ ಗುಂಪೊಂದು ರಾಜ್ಯ ಸರಕಾರವು ತಮ್ಮ ಬೇಡಿಕೆಯನ್ನು ಕಡೆಗಣಿಸಿರುವುದರಿಂದ ತಾವು ಬೌದ್ಧಧರ್ಮಕ್ಕೆ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ.

ಕಳೆದ ಮೂರು ವಾರಗಳಿಂದಲೂ ಪ್ರತಿಭಟನೆಯಲ್ಲಿ ತೊಡಗಿರುವ ಇಲ್ಲಿಯ ನಿವಾಸಿಗಳ ಪೈಕಿ ಕೆಲವರು ತಮ್ಮ ತಲೆಗಳನ್ನು ಬೋಳಿಸಿಕೊಂಡಿದ್ದಾರೆ.
ಏನೇ ಅಡ್ಡಿ ಎದುರಾದರೂ ಸರಿ, ಮದ್ಯದಂಗಡಿಯ ವಿರುದ್ಧ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ನಾವು ಹಿಂದು ಧರ್ಮವನ್ನು ತೊರೆಯುವುದಾಗಿ ಎಚ್ಚರಿಕೆ ನೀಡಿದ್ದೆವು. ನಾವು ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳಾಗಿರುವುದರಿಂದ ಅವರಂತೆ ಬೌದ್ಧಧರ್ಮಕ್ಕೆ ಮತಾಂತರಗೊಂಡಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ನಾವು ಈ ಬೇಡಿಕೆಯನ್ನು ಪರಿಶೀಲಿಸುತ್ತಿದ್ದು ಶೀಘ್ರವೇ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ವಿಷ್ಣುಚರಣ ಮಲಿಕ್ ತಿಳಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News