ನನ್ನಿಂದಾಗಲ್ಲಪ್ಪ, ಪ್ರಿಯಾಂಕಾರನ್ನು ರಾಜಕೀಯಕ್ಕೆ ನೀವೆ ಒಪ್ಪಿಸಿ ಎಂದು ಕಾರ್ಯಕರ್ತರಿಗೆ ಹೇಳಿದ ರಾಹುಲ್ ಗಾಂಧಿ

Update: 2016-04-22 06:02 GMT

ಅಮೇಠಿ,ಎಪ್ರಿಲ್ 22: ಪ್ರಿಯಾಂಕಾ ಗಾಂಧಿಯನ್ನು ಸಕ್ರಿಯ ರಾಜಕೀಯ ಕರೆತರುವ ಚರ್ಚೆಗಳ ನಡುವೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಪ್ರತಿಕ್ರಿಯೆ ನೀಡಿ ಪ್ರಿಯಾಂಕಾರನ್ನು ಒಪ್ಪಿಸುವ ಕೆಲಸ ಈಗ ಕಾರ್ಯಕರ್ತರ ಕೈಯಲ್ಲಿದೆ. ಅವರು ತನ್ನ ಸಂಸದೀಯ ಕ್ಷೇತ್ರದಲ್ಲಿ ಎರಡು ದಿವಸಗಳ ಭೇಟಿ ಕಾರ್ಯಕ್ರಮದ ಕೊನೆಯ ದಿನವಾದ ನಿನ್ನೆ ಅವರು ಈ ವಿಷಯವನ್ನು ಕಾರ್ಯಕರ್ತರ ಮುಂದಿಟ್ಟರು ಎಂದು ವರದಿಯಾಗಿದೆ. ಚೌಪಾಲ್‌ನಲ್ಲಿ ಜನರು ಪ್ರಿಯಾಂಕಾರನ್ನು ರಾಜಕೀಯಕ್ಕೆ ಕರೆತರುವ ಬೇಡಿಕೆ ಮುಂದಿಟ್ಟಾಗ ರಾಹುಲ್ ಗಾಂಧಿ ತಾನಂತೂ ಪ್ರಿಯಾಂಕಾರಲ್ಲಿ ಹೇಳಿ ಹೇಳಿ ಸುಸ್ತಾಗಿದ್ದೇನೆ. ಹೇಳುತ್ತಲೇ ಇದ್ದೇನೆ. ಆದರೆ ಅವರೇ ಸ್ವಯಂ ರಾಜಕೀಯಕ್ಕೆ ಬರಲು ಇಚ್ಛಿಸುತ್ತಿಲ್ಲ. ಈಗ ನೀವು ಅವರನ್ನು ಸಕ್ರಿಯ ರಾಜಕೀಯಕ್ಕೆ ಬರಲು ಒಪ್ಪಿಸಿ ಎಂದು ಜನರಿಗೆ ಹೇಳಿದ್ದಾರೆ. ರಾಹುಲ್ ಗಾಂಧಿ ಆರೆಸ್ಸೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದು ನಾನು ಸಂಸತ್ತಿನಲ್ಲಿ ಮಾತಾಡುವಾಗ ಆರೆಸ್ಸೆಸ್ ಮಂದಿ ಕೋಪಗೊಳ್ಳುತ್ತಾರೆ. ಮೋದಿ ಮೈಮೇಲೆ ಬಿದ್ದವರಂತೆ ಆಡುತ್ತಾರೆ. ಕೋಪದಿಂದ ಕುದಿಯುತ್ತಾರೆ. ನೀವೆ ಹೇಳಿ ನಾನು ಲೋಕಸಭೆಯಲ್ಲಿ ಯಾವ ವಿಷಯವನ್ನು ಎತ್ತಬೇಕು ಎಂದರಲ್ಲದೆ ವಿಧಾನಸಭಾ ಚುನಾವಣೆಗೆ ಸಿದ್ಧರಾಗುವಂತೆ ಕಾರ್ಯಕರ್ತರಿಗೆ ಕರೆನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News