×
Ad

ಬಿಹಾರದಲ್ಲಿ 200 ಗುಡಿಸಲು ಭಸ್ಮ

Update: 2016-04-22 23:17 IST

ಜೆಹನಾಬಾದ್, ಎ.22: ಬಿಹಾರದ ಜೆಹನಾಬಾದ್ ಜಿಲ್ಲೆಯಲ್ಲಿ ಗುರುವಾರ 200 ಗುಡಿಸಲುಗಳು ಭಸ್ಮವಾಗಿವೆ.

ಹೃದಯಚಾಕ್ ಗ್ರಾಮದಲ್ಲಿ ದಲಿತರಿಗೆ ಸೇರಿದ್ದ, ಹುಲ್ಲು ಛಾವಣಿಯ ಗುಡಿಸಲುಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಪಡೆಗಳು ಬೆಂಕಿ ನಿಯಂತ್ರಿಸಲು ಹಲವು ತಾಸುಗಳ ಹೋರಾಡಿವೆ.
ಪ್ರದೇಶದಲ್ಲಿ ತೀವ್ರ ಉಷ್ಣತೆಯ ಬೆಂಕಿಗೆ ಕಾರಣವಿರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ. ಜೆಹನಾಬಾದ್‌ನಲ್ಲಿ ಗುರುವಾರ ಉಷ್ಣತೆಯ 42 ಡಿಗ್ರಿ ಸೆಂಟಿಗ್ರೇಡ್‌ಗೇರಿತ್ತು.
ಹೃದಯಚಾಕ್ ಗ್ರಾಮ ಸಂಪೂರ್ಣ ಬೂದಿಯಾಗಿದೆ. ಬಿಹಾರದಲ್ಲಿ ಕೆಲವು ದಿನಗಳಿಂದ ಬೆಂಕಿ ಅಪಘಾತದ ಪ್ರಕರಣಗಳು ನಡೆದಿವೆಯೆಂದು ಹೇಳಿರುವ ಅಧಿಕಾರಿಗಳು, ಅನೇಕ ಪ್ರಕರಣಗಳಲ್ಲಿ ಏರುತ್ತಿರುವ ಉಷ್ಣತೆಯೇ ಅದಕ್ಕೆ ಕಾರಣವೆಂದಿದ್ದಾರೆ.
ಬೆಂಕಿಯ ಕಾರಣ ತಿಳಿಯಲು ಔಪಚಾರಿಕ ತನಿಖೆಯೊಂದನ್ನೂ ನಡೆಸಲಾಗುತ್ತಿದೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News