ಕನಿಷ್ಠ 16 ಕಾರ್ಮಿಕರು ಬಲಿ
ಇಟಾನಗರ್, ಎ.22: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿಂದು ಧಾರಾಕಾರ ಮಳೆಯಿಂದಾಗಿ ಕಾರ್ಮಿಕರ ಶಿಬಿರವೊಂದರ ಮೇಲೆ ಭಾರೀ ಭೂಕುಸಿತ ಉಂಟಾಗಿ ಕನಿಷ್ಠ 16 ಮಂದಿ ಸಾವಿಗೀಡಾಗಿದ್ದಾರೆ.
ಫಮ್ಲಾ ಗ್ರಾಮದ ಶಿಬಿರವೊಂದರಲ್ಲಿ 19 ಮಂದಿ ನಿರ್ಮಾಣ ಕಾರ್ಮಿಕರಿದ್ದ ವೇಳೆ ನಸುಕಿನ 3 ಗಂಟೆಯ ವೇಳೆ ಈ ದುರಂತ ಸಂಭವಿಸಿದೆಯೆಂದು ಪೊಲೀಸ್ ಅಧೀಕ್ಷಕ ಆ್ಯಂಟೊ ಅಲ್ಫೋನ್ಸ್ ತಿಳಿಸಿದ್ದಾರೆ.
ಮಣ್ಣಿನೆಡೆಯಿಂದ ಒಟ್ಟು 16 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಗಂಭೀರ ಗಾಯಗೊಂಡಿದ್ದ ಒಬ್ಬನನ್ನು ಅಸ್ಸಾಂನ ತೇಜಪುರ ಆಸ್ಪತ್ರೆಗೆ ದಾಖಲಿಸಲಾಗಿದೆ ಇಬ್ಬರು ಕಾರ್ಮಿಕರು ಸುರಕ್ಷಿತವಾಗಿದ್ದಾರೆಂದು ಅವರು ಹೇಳಿದ್ದಾರೆ.
ಸೇನೆ, ನಗರಾಡಳಿತ, ಪೊಲೀಸ್ ಹಾಗೂ ಗ್ರಾಮಸ್ಥರ ಜಂಟಿ ಕಾರ್ಯಾಚರಣೆಯಿಂದ ಎಲ್ಲ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಒಂದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗಡಿ ಜಿಲ್ಲೆಯ ಹಲವೆಡೆ ಭೂ ಕುಸಿತಗಳ ಸಂಭವಿಸಿವೆಯೆಂದು ಅಲ್ಫೋನ್ಸ್ ತಿಳಿಸಿದ್ದಾರೆ.
ಕಾರ್ಮಿಕರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಂದೇಶವೊಂದರ ಮೂಲಕ ಸಾಂತ್ವನ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ದುರಂತಕ್ಕೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಂದೇಶವೊಂದರ ಮೂಲಕ ಸಾಂತ್ವನ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ದುರಂತದ ಕುರಿತು ಆಘಾತ ವ್ಯಕ್ತಪಡಿಸಿದ್ದು, ಪರಿಹಾರ ಕಾರ್ಯದಲ್ಲಿ ಕೈಜೋಡಿಸುವಂತೆ ಕಾಂಗ್ರೆಸ್ ಶಾಸಕರು, ಪಿಸಿಸಿ ಹಾಗೂ ಮುಂಚೂಣಿ ಸಂಘಟನೆಗಳು ಸೂಚಿಸಿದ್ದಾರೆ