×
Ad

ವಿಮೆಯ ಹಣವನ್ನು ದೋಚಲು ತಮ್ಮನನ್ನು ಕರೆಂಟು ಕೊಟ್ಟು ಕೊಂದ ಅಣ್ಣ!

Update: 2016-04-23 11:29 IST

ಹೊಸದಿಲ್ಲಿ, ಎಪ್ರಿಲ್ 23: ಹಣದ ದುರಾಸೆಯಿಂದ ಮನುಷ್ಯ ಎಷ್ಟು ಕೀಳ್ಮಟ್ಟಕ್ಕಿಳಿಯ ಬಲ್ಲ ಎಂಬುದಕ್ಕೆ ಈ ಘಟನೆ ಒಂದು ಸಾಕ್ಷಿಯಾಗಿದೆ. ಗುಜರಾತ್‌ನ ಅಹ್ಮದಾಬಾದ್‌ನ ವ್ಯಕ್ತಿಯೊಬ್ಬ ರೋಗಿ ಸಹೋದರನ ವಿಮೆ ಹಣವನ್ನು ದೋಚಲಿಕ್ಕಾಗಿ ವಿದ್ಯುತ್ ಹರಿಸಿ ಕೊಂದಿರುವ ಘಟನೆ ವರದಿಯಾಗಿದೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

   ಟೈಮ್ಸ್ ಆಫ್ ಇಂಡಿಯ ವರದಿ ಪ್ರಕಾರ ಆರೋಪಿ ಆರು ತಿಂಗಳು ಮೊದಲು ಟಿಬಿರೋಗಿ ತಮ್ಮನ 2.91ಕೋಟಿ ರೂಪಾಯಿ ವಿಮೆ ಮಾಡಿಸಿದ್ದ. ಆನಂತರ ವಿದ್ಯುತ್ ಹರಿಸಿ ಕೊಂದು ಹಾಕಿದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ನಂತರ ಪೊಲೀಸರು ಮೃತದೇಹದ ಪೋಸ್ಟ್‌ಮಾರ್ಟಂ ನಡೆಸಿದಾಗ ಸಂಚು ಬಹಿರಂಗವಾಗಿತ್ತು. ವೈದ್ಯರು ಸಹಜ ರೀತಿಯಲ್ಲಿ ವಿದ್ಯುತ್ ಹರಿದಿಲ್ಲ ಬದಲಾಗಿ ವಿದ್ಯುತ್ ಹರಿಸಲಾಗಿದೆ ಎಂದು ತಿಳಿಸಿದ್ದರು. ಮನೆಯವರ ದೂರಿನ ಪ್ರಕಾರ ವಿದ್ಯುತ್ ಅವಘಡದಿಂದ ಸಾವು ಸಂಭವಿಸಿದೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ನಂತರ ವೈದ್ಯರ ಹೇಳಿಕೆ ಪ್ರಕಾರ ಉದ್ದೇಶಪೂರ್ವಕವಾಗಿ ಕೊಂದ ವಿಷಯ ಬಹಿರಂಗಗೊಂಡ ಮೇಲೆ ವಂಚನೆ ಮತ್ತು ಹತ್ಯೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಿಮಾ ಕಂಪೆನಿ ಇದೊಂದು ವಿದ್ಯುತ್ ಆಘಾತದಿಂದಾದ ದುರ್ಘಟನೆ ಎಂದು ನಂಬಿ ಹದಿನೈದು ಲಕ್ಷ ರೂಪಾಯಿಯನ್ನೂ ಪಾವತಿಸಿತ್ತು ಎನ್ನಲಾಗಿದೆ. ಕೆಲವು ಸಮಯ ಮೊದಲು ಇನ್ನೊಂದು ಗ್ರಾಮದಲ್ಲಿ ಕೂಡಾ ಇಂತಹ ಘಟನೆ ನಡೆದಿದ್ದು ಇದರ ಕುರಿತು ವಿಮೆ ಕಂಪೆನಿಗಳಿಗೆ ಸಂದೇಹವುಂಟಾಗಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News