ನಿತೀಶ್‌ರಂತಹ ಕಲಾಕಾರರು ಜಗತ್ತಿನಲ್ಲೇ ಇಲ್ಲ!: ಪಾಸ್ವಾನ್
ಪಾಟ್ನಾ, ಎಪ್ರಿಲ್ 25: ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರ ಸಂಘಮುಕ್ತ ಭಾರತ ಕರೆಗೆ ಮತ್ತು ಬಿಹಾರದಲ್ಲಿ ಸಂಪೂರ್ಣ ಪಾನನಿರೋಧಕ್ಕಾಗಿ ದೇಶದ ಇತರ ಕಡೆಗಳಲ್ಲಿ ಸೃಷ್ಟಿಯಾದ ನಾಗರಿಕ ಅಭಿಯಾನಗಳಲ್ಲಿ ಭಾಗಿಯಾಗುವ ಅವರ ಘೋಷಣೆಯನ್ನು ಟೀಕಿಸುತ್ತಾ ನಿತೀಶ್‌ರಂತಹ ಕಲಾಕಾರರು ಜಗತ್ತಿನಲ್ಲೇ ನೋಡಿಲ್ಲ. ಕಲೆಯನ್ನು ಕಲಿಯುವುದಿದ್ದರೆ ಅವರಿಂದ ಕಲಿಯಬೇಕು ಎಂದು ಹೇಳಿರುವುದಾಗಿ ವರದಿಯಾಗಿದೆ.
ಪತ್ರಕರ್ತರೊಂದಿಗೆ ಮಾತಾಡುತ್ತಾ ಪಾಸ್ವಾನ್ ಹದಿನೇಳು ವರ್ಷ ಬಿಜೆಪಿ ಮತ್ತು ಆರೆಸ್ಸೆಸ್‌ಮಡಿಲಲ್ಲಿದ್ದ ಅವರು ಈಗ ಸಂಘಮುಕ್ತ ಭಾರತವನ್ನು ಕನವರಿಸಿಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಮುಂದಿಟ್ಟು ಅವರು ನೆಟ್ಟಗೆ ನಿಲ್ಲಲು ಹವಣಿಕೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಹತ್ತುವರ್ಷಗಳಲ್ಲಿ ನಿತೀಶ್‌ರ ಪಾರ್ಟಿ ಬಿಹಾರದಲ್ಲಿ ಶರಾಬು ಕುಡಿಸಿತ್ತು. ಈಗ ಅದು ಪಾನ ನಿರೋಧದ ಮಾದರಿಯನ್ನಿಟ್ಟುಕೊಂಡು ಇಡೀ ಭಾರತದಲ್ಲಿ ತಿರುಗಾಡಲಿದ್ದೇನೆ ಎನ್ನುತ್ತಿದ್ದಾರೆ. ಇದು ನವಿಲಿನಂತೆ ಇರುವ ಅಭ್ಯಾಸವಾಗಿದೆ ಎಂದು ಪಾಸ್ವಾನ್ ಟೀಕಿಸಿರುವುದಾಗಿ ವರದಿಗಳು ತಿಳಿಸಿವೆ. ನವಿಲು ನೃತ್ಯಮಾಡಲು ತೊಡಗಿದರೆ ಬಹಳ ನೃತ್ಯಮಾಡುತ್ತಲೇ ಇರುತ್ತದೆ. ಅದು ತನ್ನ ಕಾಲನ್ನು ನೋಡಿದ ಕೂಡಲೇ ನೃತ್ಯವನ್ನು ನಿಲ್ಲಿಸುತ್ತಿದೆ ಎಂದು ಪಾಸ್ವಾನ್ ಹೇಳಿದ್ದಾರೆ.