×
Ad

ದೇಶದಲ್ಲಿ ಚಿಟ್‌ಫಂಡ್ ಮೋಸ ಎಷ್ಟು ಗೋತ್ತೇ? ಸಿಬಿಐ ಪ್ರಕಾರ 80,000ಕೋ. ರೂ.!

Update: 2016-04-25 12:06 IST

ಹೊಸದಿಲ್ಲಿ, ಎಪ್ರಿಲ್ 25: ಚಿಟ್‌ಫಂಡ್ ಕಂಪೆನಿಗಳು ಜನರ ಎಷ್ಟು ಹಣವನ್ನು ಮುಕ್ಕಿವೆ ಎಂಬ ವಿಷಯ ತಿಳಿದರೆ ನೀವೂ ಆಶ್ಚರ್ಯಪಡುವಿರಿ. ಸಿಬಿಐ ಪ್ರಕಾರ ಇಂತಹ ಕಂಪೆನಿಗಳು ಠೇವಣಿದಾರರಿಗೆ ಕನಿಷ್ಠ 80,000 ಕೋಟಿ ರೂಪಾಯಿ ಪಂಗನಾಮ ಹಾಕಿವೆ. ಈ ಅಂಕಿ ಸಂಖ್ಯೆ ತನಿಖಿತ ಅಪರಾಧಿ ಪ್ರಕರಣಗಳದ್ದು ಮತ್ತು ಈ ಅಂಕಿ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಕೆಲವರು ತಾವು ಮೋಸಹೋದರೆ ಕೇಸುದಾಖಲಿಸಲು ಹೋಗುವುದಿಲ್ಲ.

ದೇಶಾದ್ಯಂತ ನಡೆಯುತ್ತಿರುವ ಇಂತಹ ಕಂಪೆನಿಗಳು ಆಕರ್ಷಕ ಬಡ್ಡಿ ಪಾವತಿ ಘೋಷಿಸಿ ಹಣಹೂಡಿಕೆ ನಡೆಸಲು ಬಲೆ ಹರಡುತ್ತವೆ. ಮತ್ತೆ ಮೋಸಮಾಡುತ್ತವೆ. ಮೂಲಗಳು ತಿಳಿಸಿದ ಪ್ರಕಾರ ಪಶ್ಚಿಮ ಬಂಗಾಳ, ಅಸ್ಸಾಮ್,ಒಡಿಸ್ಸಾ, ಮತ್ತು ತ್ರಿಪುರಗಳಲ್ಲಿ ಚಿಟ್‌ಫಂಡ್ ಕಂಪೆನಿಗಳು ಸಣ್ಣ ಠೇವಣಿದಾರರಿಗೆ ಸುಮಾರು 30,000ಕೋಟಿ ರೂಪಾಯಿ ಒಟ್ಟುಗೂಡಿಸಿತು. ಪಂಜಾಬ್ ಮತ್ತು ಇತರ ಭಾರತೀಯ ರಾಜ್ಯಗಳಲ್ಲಿ ಪ್ಲಸ್ ಸಮೂಹವು ಠೇವಣಿದಾರರಿಗೆ 51,000 ಕೋಟಿ ರೂಪಾಯಿಯ ಪಂಗನಾಮ ಹಾಕಿದೆ. ಇವು ಈ ಹಣವನ್ನು ಮಾಧ್ಯಮ ಸಂಸ್ಥೆಗಳನ್ನು ತೆರೆಯಲು, ಹೊಟೇಲ್ ಮತ್ತು ಇತರ ವ್ಯವಹಾರಗಳಿಗೆ ಬಳಸಿದೆ. ಠೇವಣಿದಾರರಿಗೆ ಲಾಭವನ್ನು ನೀಡಲಿಲ್ಲ.

ಮೂಲಗಳ ಪ್ರಕಾರ 80,000 ಕೋಟಿ ರೂಪಾಯಿ ಮೋಸ ತನಿಖೆಯ ಆಧಾರದಲ್ಲಿ ಹೇಳಲಾಗಿದೆ. ಠೇವಣಿದಾರರಿಂದ ಸಂಗ್ರಹಿಸಿದ ಹಣದ ಕುರಿತು ಈಗಲೂ ತನಿಖೆ ನಡೆಯುತ್ತಿದೆ. ನಾಲ್ಕು ರಾಜ್ಯಗಳಲ್ಲಿ 253 ಪ್ರಾಥಮಿಕ ತನಿಖೆ ಆಧಾರದಲ್ಲಿ ಸಿಬಿಐ 76 ಪ್ರಕರಣಗಳನ್ನು ದಾಖಲಿಸಿದೆ. ಸಂಸ್ಥೆಗಳ ಹಗರಣ ವಿಚಾರದಲ್ಲಿ 31 ಆರೋಪ ಪಟ್ಟಿಯನ್ನು ದಾಖಲಿಸಿದೆ ಎಂದು ವರದಿಗಳು ತಿಳಿಸಿವೆ.

ರೋಜ್ ವ್ಯಾಲಿ ಸಮೂಹ ವಿರುದ್ಧ ಮೂರು ವಂಚನೆ ಪ್ರಕರಣ, ಶಾರದಾ ಸಮೂಹದ ವಿರುದ್ಧ ಏಳು ವಂಚನೆ ಪ್ರಕರಣ ದಾಖಲಿಸಿದೆ. ಈ ರೀತಿ ಅನೇಕ ಕಂಪೆನಿಗಳು ಚಿಟ್‌ಫಂಡ್ ಮೋಸ ನಡೆಸುತ್ತಿವೆ. ಕಳೆದ ಇಪ್ಪತ್ತು ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದ ಪರ್ಲ್ಸ್ ಸಮೂಹ ಕೂಡಾ ಠೇವಣಿದಾರರನ್ನು ವಂಚಿಸಿದೆ. ಹೀಗೆಲ್ಲ ಇದ್ದರೂ ಈ ಹಗರಣದ ತನಿಖೆ ಸಿಬಿಐಗೆ ಅಷ್ಟು ಸುಲಭವಾಗಿಲ್ಲ. ಯಾಕೆಂದರೆ ಕೇಂದ್ರ ಸಚಿವರು, ಪ್ರಾದೇಶಿಕ ಸಚಿವರೋ, ಒಬ್ಬಸಂಸದನೋ ರಾಜಕಾರಣಿಯೋ ಮಾಜಿ ಪತ್ರಕರ್ತನೋ ಇಂತಹ ಕಂಪೆನಿಯ ಸಂಚಾಲಕರಲ್ಲಿ ಸೇರಿರುತ್ತಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News