ಕಾಂಗ್ರೆಸ್ ಎಡವಟ್ಟಿನಿಂದ ಬಿಕ್ಕಟ್ಟು ಸೃಷ್ಟಿ: ರಾಜ್‌ನಾಥ್ ಸಿಂಗ್
Update: 2016-04-25 13:01 IST
ಹೊಸದಿಲ್ಲಿ, ಎ. 25: ಕಾಂಗ್ರೆಸ್‌ನ ಎಡವಟ್ಟುಗಳಿಂದ ಉತ್ತರಾಖಂಡದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಸಂವಿಧಾನತ್ಮವಾಗಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ ವಿನಾಕಾರಣ ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದೆ ಎಂದು ಕಿಡಿಗಾರಿದರು.
ಲೋಕಸಭೆ ಅಧಿವೇಶನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ ತೀವ್ರಗೊಂಡಿದ್ದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್, ಅಧಿವೇಶನವನ್ನು 2 ಗಂಟೆಯವರೆಗೆ ಮುಂದೂಡಿದರು.