×
Ad

ಜೈಲು ಸೇರಿದ ಬಳಿಕ ಮಹಾರಾಷ್ಟ್ರದ ಸ್ಟ್ರಾಂಗ್ ಮ್ಯಾನ್ ಛಗನ್ ಭುಜಬಲ್ ಹೇಗಾದರು ನೋಡಿ

Update: 2016-04-25 13:11 IST

ಮುಂಬೈ, ಎ. 25: ಅಕ್ರಮ ಹಣ ವರ್ಗಾವಣೆ ಸಂಬಂಧ ಮಾರ್ಚ್ ತಿಂಗಳಲ್ಲಿ ಬಂಧಿಸಲ್ಪಟ್ಟಿದ್ದ ಹಿರಿಯ ಎನ್‌ಸಿಪಿ ನಾಯಕ ಹಾಗೂ ಇತರ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ ಛಗನ್ ಭುಜಬಲ್ ಈಗ ಗುರುತು ಸಿಗದಷ್ಟು ಬದಲಾಗಿ ಬಿಟ್ಟಿದ್ದಾರೆ.

ತಮ್ಮ ಬಂಧನವಾದಂದಿನಿಂದ 10 ಕೆಜಿ ತೂಕ ಕಳೆದುಕೊಂಡಿರುವ ಭುಜಬಲ್ ಈಗ ಬಿಳಿ ಗಡ್ಡಧಾರಿಯಾಗಿದ್ದು ಆಸ್ಪತ್ರೆಯಲ್ಲಿರುವ ಅವರ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿವೆ. ಜಗನ್ ಅವರು ನಡೆಸಿದ್ದಾರೆನ್ನಲಾದ ಆರ್ಥಿಕ ಅವ್ಯವಹಾರಗಳಿಂದ ರಾಜ್ಯ ಬೊಕ್ಕಸಕ್ಕೆ ರೂ 870 ಕೋಟಿ ನಷ್ಟವಾಗಿದೆಯೆಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಇದೀಗ ಸೈಂಟ್ ಜಾರ್ಜ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದರೆ ಅದರ ಸುತ್ತವೂ ವಿವಾದ ಹುಟ್ಟಿಕೊಂಡಿದೆ. ಅವರು ಹಲ್ಲು ನೋವೆಂದುದಕ್ಕೆ ದಂತ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಸೈಂಟ್ ಜಾರ್ಜ್ ಆಸ್ಪತ್ರೆಗೆ ಏಕೆ ದಾಖಲಿಸಲಾಗಿತ್ತು ಎಂದು ಹಲವರು ಪ್ರಶ್ನಿಸಿದ್ದರೆ ಅಧಿಕಾರಿಗಳ ಪ್ರಕಾರ ಡಯಾಬಿಟೀಸ್ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಭುಜಬಲ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ.

ಬಂಧನವಾದಂದಿನಿಂದ ಅವರನ್ನು ಆರ್ಥರ್ ರೋಡ್ ಜೈಲಿನ ಅಂಡಾ ಸೆಲ್ಲಿನಲ್ಲಿರಿಸಲಾಗಿತ್ತು. ಈ ಸೆಲ್ ಭುಜಬಲ್ ಲೋಕೋಪಯೋಗಿ ಸಚಿವರಾಗಿದ್ದಾಗ ನಿರ್ಮಿತವಾಗಿತ್ತು.
ಅವರಿರುವ ಸೆಲ್ ನಲ್ಲಿ ಪೀಟರ್ ಮುಖರ್ಜಿ ಹಾಗೂ ಎನ್‌ಸಿಪಿ ನಾಯಕ ರಮೇಶ್ ಕದಮ್ ಅವರ ಸಹ ಕೈದಿಗಳಾಗಿದ್ದಾರೆ. ಜೈಲಿನ ಮಧ್ಯಾಹ್ನದ ಹಾಗೂ ರಾತ್ರಿಯ ಊಟದ ಸಮಯ ಭಿನ್ನವಾಗಿರುವುದರಿಂದ ಭುಜಬಲ್ ಹೆಚ್ಚು ಆಹಾರ ಸೇವಿಸುತ್ತಿಲ್ಲವೆನ್ನಲಾಗಿದ್ದು ಇದರಿಂದ ಆವರ ದೇಹ ತೂಕ ಇಳಿದಿದೆಯೆಂದು ಹೇಳಲಾಗುತ್ತಿದೆ. ಇದಕ್ಕೂ ಹಿಂದೆ ಅವರಿಗೆ ಮನೆಯಿಂದ ತರಿಸಲಾದ ಊಟ ನೀಡಲು ಅನುಮತಿಯಿಲ್ಲದಿದ್ದಾಗ ಅವರು ಪೀರ್ ಮುಖರ್ಜಿಯೊಂದಿಗೆ ಆಹಾರ ಹಂಚಿ ತಿನ್ನುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News