×
Ad

ಭಾರತ ಯೂ ಟರ್ನ್: ಉಯಿಗರ್ ನಾಯಕ ಡೋಲ್ಕನ್ ಈಸಾರಿಗೆ ವೀಸಾ ಇಲ್ಲ!

Update: 2016-04-25 15:33 IST

ಹೊಸದಿಲ್ಲಿ, ಎಪ್ರಿಲ್ 25: ಚೀನಾದ ಭಾರೀ ವಿರೋಧದ ಹಿನ್ನೆಲೆಯಲ್ಲಿ ಭಾರತ ಉಯಿಗುರ್ ನಾಯಕ ಡೋಲ್ಕನ್ ಈಸಾರಿಗೆ ವೀಸಾವನ್ನು ನಿರಾಕರಿಸಿದೆ. ಭಾರತವು ಅವರ ವಿರುದ್ಧ ಜಾರಿಯಾಗಿರುವ ರೆಡ್‌ಕಾರ್ನರ್ ನೋಟಿಸ್ ಹಿನ್ನೆಲೆಯಲ್ಲಿ ವೀಸಾ ನೀಡಲು ಸಾಧ್ಯವಿಲ್ಲ ಎಂದಿದೆ ಎಂದು ವರದಿಯಾಗಿದೆ. ಜರ್ಮನಿಯಲ್ಲಿ ವಾಸಿಸುತ್ತಿರುವ ವಿಶ್ವ ಉಯಿಗುರ್ ಕಾಂಗ್ರೆಸ್(ಡಬ್ಲ್ಯೂ ಯು ಸಿ) ನಾಯಕರಿಗೆ ಅಮೆರಿಕನ್ ಮೂಲದ ಕಂಪೆನಿ ಇನ್‌ಸಿಟಿಯೇಟಿವ್ಸ್ ಫಾರ್ ಚೈನಾ ಎಂಬ ಧರ್ಮಶಾಲಾದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಆಮಂತ್ರಿಸಿತ್ತು. ಈ ಸಂದರ್ಭದಲ್ಲಿ ಟಿಬೆಟಿಯನ್ ಧರ್ಮಗುರು ದಲಾಯಿಲಾಮರೊಂದಿಗೂ ಈಸಾ ಭೇಟಿಯಾಗಲಿದ್ದರು. ಆದರೆ ಈಗ ಭಾರತ ವೀಸಾ ನಿರಾಕರಿಸಿದ್ದು ಧರ್ಮಶಾಲಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರಿಗೆ ಭಾಗವಹಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಈಸಾರಿಗೆ ವೀಸಾ ನೀಡಲು ವಿಶ್ವಸಂಸ್ಥೆಯಲ್ಲಿ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂಬ ಭಾರತದ ಮನವಿಯ ವಿರುದ್ಧ ವೀಟೊ ಚಲಾಯಿಸಿದ್ದಕ್ಕೆ ಪ್ರತಿಯಾಗಿ ಭಾರತ ನಿರ್ಧರಿಸಿತ್ತು. ಆದರೆ ಈಗ ಭಾರತ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ ಎಂದು ವರದಿಗಳು ತಿಳಿಸಿವೆ. ಡಬ್ಲ್ಯೂಯುಸಿಯ ಚೀನಾ ಭಯೋತ್ಪಾದಕರೆಂದು ಹೆಸರಿಸಿದ ನಾಯಕರಿಗೆ ಭಾರತ ವೀಸಾ ನೀಡಲು ಹೊರಟಿತ್ತು. ಡಬ್ಲ್ಯೂಯುಸಿ ನಾಯಕ ಡೋಲ್ಕನ್ ಈಸಾರ ವಿರುದ್ಧ ಚೀನದ ಮುಸ್ಲಿಮ್ ಬಹುಸಂಖ್ಯಾತ ಶಿನಿಜಿಯಾಂಗ್ ಪ್ರಾಂತದಲ್ಲಿ ಭಯೋತ್ಪಾದನೆ ಹರಡಲು ಯತ್ನಿಸಿದ ಆರೋಪವನ್ನು ಚೀನಾ ಹೊರಿಸಿ ಇಂಟರ್‌ಪೋಲ್ ಮೂಲಕ ರೆಡ್‌ಕಾರ್ನರ್ ನೋಟಿಸು ಜಾರಿ ಮಾಡಿತ್ತು. ಈ ಕುರಿತು ವಿದೇಶ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್‌ರನ್ನು ಪ್ರಶ್ನಿಸಿದಾಗ ವಿವರ ಮಾಧ್ಯಮಗಳ ಮೂಲಕ ತಿಳಿದಿದೆ ಈ ಕುರಿತು ಮಾಹಿತಿ ಇನ್ನಷ್ಟೇ ಕಲೆಹಾಕಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಚೀನಾದ ಶಿನಿಜಿಯಾಂಗ್ ಪ್ರಾಂತದ ಉಯಿಗುರ್‌ನ ಜನಸಂಖ್ಯೆ ಒಂದು ಕೋಟಿಗಿಂತಲೂ ಅಧಿಕವಾಗಿದೆ. ಇವರೆಲ್ಲ ಮೂಲತಃ ಟರ್ಕಿ ಮುಸ್ಲಿಮರಾಗಿದ್ದಾರೆ. ಚೀನಾದ ಶಿನ್‌ಜಿಯಾಂಗ್ ಪ್ರದೇಶದಲ್ಲಿ ಬಂದು ನೆಲೆಸಿದ್ದು ನಂತರ ಉಯಿಗುರ್ ಎಂಬ ಹೆಸರಿನಿಂದ ಈ ಪ್ರದೇಶವನ್ನು ಕರೆಯಲಾಯಿತು. ಶಿನ್‌ಜಿಯಾಂಗ್ ಪ್ರಾಂತದಲ್ಲಿ ಉಯಿಗುರ್ ಆಗಾಗ ವಿರೋಧ ಪ್ರತಿಭಟನೆ ನಡೆಯುತ್ತಿರುತ್ತದೆ. ಚೀನಾದಲ್ಲಿ ಉಯಿಗುರ್ ನಿವಾಸಿಗಳಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News