×
Ad

ಕೇರಳ: ನಿರ್ಮಾಪಕ ಅಜಯ್‌ಕೃಷ್ಣನ್ ಸಾವು

Update: 2016-04-25 15:33 IST

ಕೇರಳ: ಚಲನಚಿತ್ರ ನಿರ್ಮಾಪಕ, ನಟ ಕೇರಳದ ಕೊಲ್ಲಂ ನಿವಾಸಿ ಅಜಯ್ ಕೃಷ್ಣನ್ (28) ತನ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
 ಎರ್ನಾಕುಳಂನಿಂದ ಶನಿವಾರ ರಾತ್ರಿ ಕೊಲ್ಲಂನಲ್ಲಿರುವ ಮನೆಗೆ ಬಂದ ಅಜಯ್ ಕೃಷ್ಣನ್ ಮೊದಲನೆ ಮಹಡಿಯ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇವರು ರಾಧಾಕೃಷ್ಣನ್ ಪಿಳ್ಳ ಹಾಗೂ ಜಯಕುಮಾರಿ ದಂಪತಿಯ ಪುತ್ರ.
ಅಜಯ್, ಮೆಮರೀಸ್, ಸೀನ್ ಒನ್ನ್, ನಮ್ಮುಡೆ ವೀಡ್ ಮುಂತಾದ ಸಿನೆಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ.
‘ಅವರುಡೆ ರಾವುಗಳ್’ ಚಿತ್ರದ ಚಿತ್ರೀಕರಣದ ಬಳಿಕ ಅಜಯ್‌ಕೃಷ್ಣನ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News