ಡ್ಯಾನ್ಸ್‌ಬಾರ್ ಗೆ ಲೈಸನ್ಸ್ ನಿರಾಕರಣೆ :ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ತಪರಾಕಿ
ಹೊಸದಿಲ್ಲಿ, ಎಪ್ರಿಲ್ 25: ಡ್ಯಾನ್ಸ್ ಬಾರ್‌ಗಳಿಗೆ ಲೈಸನ್ಸ್ ನಿರಾಕರಿಸಿದ ಮಹಾರಾಷ್ಟ್ರ ಸರಕಾರದ ಕ್ರಮದ ವಿರುದ್ಧ ಸುಪ್ರೀಂಕೊರ್ಟ್ ಪ್ರಹಾರ ನಡೆಸಿದೆ. ಸರಕಾರ ಅಧಿಕಾರದುರುಪಯೋಗಿಸಿ ನ್ಯಾಯಾಲಯದ ಆದೇಶಕ್ಕೆ ಸವಾಲೆಸೆಯಬಾರದೆಂದು ಸರಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆಯೆಂದು ವರದಿಯಾಗಿದೆ. ವಿದ್ಯಾಭ್ಯಾಸ ಸಂಸ್ಥೆಗಳ ಒಂದು ಕಿ.ಮೀ.ಸುತ್ತಳತೆಯಲ್ಲಿ ಡ್ಯಾನ್ಸ್ ಬಾರ್ ಆರಂಭಿಸಬಾರದೆಂದು ತಡೆದ ಸರಕಾರವನ್ನು ಕೋರ್ಟ್ ಟೀಕಿಸಿದೆ. ನೃತ್ಯವೊಂದು ಉದ್ಯೋಗವಾಗಿದೆ. ಅದು ಅಶ್ಲೀಲವಾದರೆ ಕಾನೂನಾತ್ಮಕ ನಷ್ಟವೂಆಗಿದೆ. ಆದರೆ ಸರಕಾರ ವ್ಯವಸ್ಥೆ ಇದನ್ನು ನಿಷೇಧಿಸವುದಲ್ಲ ನಿಯಂತ್ರಿಸಬೇಕಾಗಿದೆ ಎಂದು ಕೋರ್ಟ್ ಹೇಳಿದೆ.
ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕಿಂತ, ಬೀದಿಯಲ್ಲಿ ಭಿಕ್ಷೆ ಬೇಡುವುದಕ್ಕಿಂತ ಒಳ್ಳೆಯದು ಮಹಿಳೆಯರು ಬಾರ್‌ಗಳಲ್ಲಿ ಡ್ಯಾನ್ಸ್ ಮಾಡುವುದು ಎಂದು ಕೋರ್ಟ್ ಬೆಟ್ಟು ಮಾಡಿದೆ. ಎಪ್ರಿಲ್ ಹನ್ನೆರಡಕ್ಕೆ ಡ್ಯಾನ್ಸ್ ಬಾರ್ ರೆಗ್ಯುಲೇಶನ್ ಮಸೂದೆಯನ್ನು ರಾಜ್ಯಸರಕಾರ ಒಮ್ಮತದಿಂದ ಪಾಸು ಮಾಡಿತ್ತು. ಮಸೂದೆ ಪ್ರಕಾರ ಕಾನೂನು ಉಲ್ಲಂಘಿಸಿದರೆ, ಮಹಿಳಾ ಕೆಲಸಗಾರರನ್ನು ಶೋಷಣೆಗೆ ಒಳಪಡಿಸಿದರೆ ಬಾರ್ ಮಾಲಕನಿಗೆ ಐದು ವರ್ಷ ಜೈಲು, 25,000 ರೂ ದಂಡ ವಿಧಿಸಲಾಗುವುದು ಎಂದು ವರದಿಗಳು ತಿಳಿಸಿದೆ.