ಹೆಲಿಕಾಪ್ಟರ್ ಖರೀದಿ ಅವ್ಯವಹಾರ ಸಾಬೀತು: ಇಟಲಿ ನ್ಯಾಯಾಲಯ
ಹೊಸದಿಲ್ಲಿ, ಎ.26: ಭಾರತೀಯ ವಾಯು ಪಡೆಯ ಮಾಜಿ ದಂಡನಾಯಕ ಎಸ್.ಪಿ.ತ್ಯಾಗಿ ಒಳಗೊಂಡಿದ್ದಾರೆಂದು ಆರೋಪಿಸಲಾಗಿರುವ 2010ರ ವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂಬ ಕುರಿತು ನ್ಯಾಯ ಬದ್ಧ ಪುರಾವೆಗಳಿವೆಯೆಂದು ಇಟಲಿಯ ನ್ಯಾಯಾಲಯವೊಂದು ಹೇಳಿದೆ.
ನ್ಯಾಯಬಾಹಿರ ನಿಧಿಗಳ 10-15 ಮಿಲಿಯ ಡಾಲರ್‌ಗಳಷ್ಟು ಭಾಗವು ಭಾರತೀಯ ಅಧಿಕಾರಿಗಳಿಗೆ ತಲುಪಿದೆಯೆಂಬುದು ‘ಅರ್ಹವಾಗಿ ಸಾಬೀತಾಗಿದೆ’ ಎಂದು ಅದು ತಿಳಿಸಿದೆ.
ಮಿಲಾನ್ ಮೇಲ್ಮನವಿ ನ್ಯಾಯಾಲಯದ 225 ಪುಟಗಳ ತೀರ್ಪು, ಇಟಿಗೆ ಲಭ್ಯವಾಗಿದೆ. ಅದರಲ್ಲಿ ತ್ಯಾಗಿಯವರ ಬಗ್ಗೆ 17 ಪುಟಗಳ ಪ್ರತ್ಯೇಕ ಅಧ್ಯಾಯವೇ ಇದೆ. ಭಾರತದ ಸಾರ್ವಜನಿಕ ಅಧಿಕಾರಿಯ ಭ್ರಷ್ಟಾಚಾರದ ಕುರಿತು ಯಾವ ನೆಲೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆಯೆಂದು ಅದರಲ್ಲಿ ವಿವರಿಸಲಾಗಿದೆ.
ವಿವಿಐಪಿ ಹೆಲಿಕಾಪ್ಟರ್ ಖರೀದಿ ಟೆಂಡರ್‌ನಲ್ಲಿ, ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಪರವಾಗಿ ಮಧ್ಯಪ್ರವೇಶಿದುದಕ್ಕಾಗ ಮಾರ್ಶಲ್ ಶಶಿ ತ್ಯಾಗಿಯವರಿಗೆ ಲಂಚ ರೂಪದಲ್ಲಿ ಕನಿಷ್ಠ ಭಾಗಶಃ ಆದರೂ, ಕಾನೂನು ಬಾಹಿರ ನಿಧಿಯು ತಲುಪಿರುವುದು ಖಚಿತವಾಗಿ ಸಾಬೀತಾಗಿದೆಯೆಂದು ನ್ಯಾಯಾಲಯ ಹೇಳಿದೆ.
ಇಟಿ ಕಳುಹಿಸಿರುವ ವಿವರವಾದ ಪ್ರಶ್ನಾವಳಿಗೆ ತ್ಯಾಗಿ ಉತ್ತರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ತಾವು ಇಟಾಲಿಯನ್ ಮೂಲದಿಂದ ಸಂಪೂರ್ಣವಾಗಿ ಭಾಷಾಂತರಗೊಂಡ ದಾಖಲೆಯನ್ನು ಓದಬೇಕಾಗಿದೆಯೆಂದು ಅವರು ತಿಳಿಸಿದ್ದಾರೆ. ತಾನು ಈ ಪ್ರಕರಣದಲ್ಲಿ ಅಮಾಯಕನೆಂದು ತ್ಯಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ.
ಇಟಲಿಯ ನ್ಯಾಯಾಲಯದ ಮುಂದೆ ತ್ಯಾಗಿ ಹೇಳಿಕೆ ನೀಡಲ್ಲ. ಅವರೀಗ ಭಾರತದಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳೆರಡರಿಂದಲೂ ತನಿಖೆ ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿಲ್ಲವೆಂದು ಕೆಳ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಅದನ್ನು ತಳ್ಳಿ ಹಾಕಿದ, ಭಾರತದ ಹೈಕೋರ್ಟ್‌ಗೆ ಸಮನಾದ ಮಿಲಾನ್ ಮೇಲ್ಮನವಿ ನ್ಯಾಯಾಲಯವು, ರೂ. 3,565 ಕೋಟಿಗಳ ಆಗಸ್ಟಾವೆಸ್ಟ್‌ಲ್ಯಾಂಡ್ ಗುತ್ತಿಗೆಯಲ್ಲಿ ಭಾರತೀಯ ಅಧಿಕಾರಿಗಳಿಗೆ ನೀಡಿದ ಲಂಚದ ಮೊತ್ತವೂ ಸೇರಿದೆಯೆಂದು ಎ.8ರಂದು ತೀರ್ಪು ನೀಡಿತ್ತು.
ಪಿನ್ ಮೆಕಾನಿಕಾ ಹಾಗೂ ಬ್ಯೂನೊ ಸ್ಪಾಗ್ನೋಲನಿಗಳ ಬಲಿಷ್ಠ ಮಾಜಿ ಮುಖ್ಯಸ್ಥ, ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಹೆಲಿಕಾಪ್ಟರ್ ವಿಭಾಗಗಳ ಮುಖ್ಯಸ್ಥ ಗಿಸೆಟ್ ಓರ್ಸಿ, ಅಂತಾರಾಷ್ಟ್ರೀಯ ಭ್ರಷ್ಟಾಚಾರ ಹಾಗೂ ಹಣಚೆಲುವೆಯ ಅಪರಾಧಿಯೆಂದು ಅದು ಹೇಳಿತ್ತು.