×
Ad

ಮಹಾರಾಷ್ಟ್ರದಿಂದ ಎಲ್ಲ ಪಂದ್ಯಗಳು ಸ್ಥಳಾಂತರ ; ಬಾಂಬೆ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರಿಂ

Update: 2016-04-27 13:20 IST

ಮುಂಬೈ, ಎ.27: ಬರಗಾಲದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ಎಲ್ಲ ಐಪಿಎಲ್‌ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಬೆ  ಹೈಕೋರ್ಟ್‌ ನೀಡಿರುವ ಆದೇಶವನ್ನು  ಸುಪ್ರೀಂ ಕೋರ್ಟ್‌ ಇಂದು ಎತ್ತಿ ಹಿಡಿದಿದೆ.
ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಬಾಂಬೈ ಹೈಕೋರ್ಟ್‌‌  ಎಪ್ರಿಲ್‌ 30ರ ನಂತರ ಮಹಾರಾಷ್ಟ್ರದಲ್ಲಿ ನಡೆಯಲಿರುವ   ಎಲ್ಲ ಐಪಿಎಲ್‌ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು  ಪ್ರಶ್ನಿಸಿ ಮುಂಬೈ ಕ್ರಿಕೆಟ್‌ ಅಸೋಸಿಯೇಶನ್‌ ಸುಪ್ರೀಂ ಕೋರ್ಟ್‌ ಮೆಟ್ಟಲೇರಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌  ಹೈಕೋರ್ಟ್‌‌ ಪಂದ್ಯದ ಸ್ಥಳಾಂತರಿಸುವಂತೆ ನೀಡಿರುವ  ಆದೇಶ ಸರಿಯಾಗಿದೆ ಎಂದು ಹೇಳಿ  ಮುಂಬೈ ಕ್ರಿಕೆಟ್‌ ಅಸೊಸಿಯೇಶನ್ ಮನವಿಯನ್ನು ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News