×
Ad

ನಾನು ಯಾರಿಗೂ ಹೆದರುವುದಿಲ್ಲ..ನನ್ನ ವಿರುದ್ಧದ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ.: ಸೋನಿಯಾ ಗಾಂಧಿ

Update: 2016-04-27 14:29 IST

ಹೊಸದಿಲ್ಲಿ, ಎ.27: ನಾನು ಯಾರಿಗೂ ಹೆದರುವುದಿಲ್ಲ..ನನ್ನ ವಿರುದ್ಧದ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷೆ  ಸೋನಿಯಾ  ಗಾಂಧಿ ಗುಡುಗಿದ್ದಾರೆ.
ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿ  ಇಂದು ಸಂಸತ್ತಿನಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿರುವ ಬಿಜೆಪಿಗೆ ತಿರುಗೇಟು ನೀಡಿರುವ ಸೋನಿಯಾ ಗಾಂಧಿ . ಹಿಂದಿನ ಯುಪಿಎ ಸರಕಾರದ
ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಮುಚ್ಚಿಟ್ಟುಕೊಳ್ಳುವಂತಹುದು ಏನೂ ಇಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ.
 ಹಿಂದಿನ ಯುಪಿಎ ಸರಕಾರದ  ಅವಧಿಯಲ್ಲಿ ಗಣ್ಯರ ಸಂಚಾರಕ್ಕಾಗಿ ಇಟಲಿಯ ಫಿನ್‌ಮೆಕಾನಿಕಾ ಕಂಪೆನಿಯಿಂದ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿಸಲು 3,600 ಕೋಟಿ ರೂ.ಗಳ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈ ಯೋಜನೆಯಲ್ಲಿ ಭ್ರಷ್ಟಾಚಾರ ಸುಳಿವುಗಳು ಕಂಡ ಬಂದ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿತ್ತು
ಈ ಒಪ್ಪಂದ ಹಿನ್ನೆಲೆಯಲ್ಲಿ  ಕಂಪೆನಿಯು ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಕೋಟ್ಯಂತರ ರೂ.ಗಳ ಲಂಚ ನೀಡಿರುವುದು ಸಾಬೀತಾಗಿದೆ ಎಂದು ಇಟಲಿಯ ನ್ಯಾಯಾಲಯ ತೀರ್ಪು ನೀಡಿದೆ.  ತೀರ್ಪಿನ 193 ಮತ್ತು 204ನೇ ಪುಟಗಳಲ್ಲಿ ಸೋನಿಯಾ ಹೆಸರು ಉಲ್ಲೇಖವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News