×
Ad

ವಿದೇಶಿ ಕಂಪೆನಿಗಳನ್ನು ಗಂಟು ಮೂಟೆ ಕಟ್ಟಿಸುತ್ತೇನೆ: ರಾಮ್ ದೇವ್

Update: 2016-04-27 15:10 IST

ಹೊಸದಿಲ್ಲಿ, ಎಪ್ರಿಲ್ 27: ಕೆಲವೇ ವರ್ಷಗಳಲ್ಲಿ ಐದು ಸಾವಿರ ಕೋಟಿ ವ್ಯವಹಾರ ದಾಖಲಿಸಿದ ಸಂಸ್ಥೆಯಾಗಿ ತನ್ನ ಆಹಾರೋತ್ಪನ್ನ-ಔಷಧ ಉತ್ಪಾದನೆ ಶೃಂಖಲೆ ಮುಂದಿನ ವರ್ಷ ಹತ್ತು ಸಾವಿರ ಕೋಟಿ ವ್ಯವಹಾರ ಕುದುರಿಸಲಿದೆ ಎಂದು ರಾಮ್ ದೇವ್ ಹೇಳಿದ್ದಾರೆ. ವಿದೇಶಿ ಬೃಹತ್ ಕಂಪೆನಿಗಳನ್ನು ಗಂಟು ಮೂಟೆ ಕಟ್ಟಿಸುವುದು ತನ್ನ ಗುರಿಯಾಗಿದೆ ಎಂದು ಲಕ್ಷಗಟ್ಟಲೆ ಜನರಿಗೆ ಕೆಲಸ ಕೊಡಲು ತನ್ನಿಂದ ಸಾಧ್ಯವಿದೆ ಎಂದೂ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಮ್ ದೇವ್ ಹೇಳಿದ್ದಾರೆಂದು ವರದಿಯಾಗಿದೆ.

ಪ್ರಮುಖ ವಿದೇಶಿ ಕಂಪೆನಿಗಳಿಂದ ದೇಶಭಕ್ತರಾದ ಅನುಭವಿ ಉದ್ಯೋಗಿಗಳು ತನ್ನ ಸಂಸ್ಥೆಗೆ ಬಂದಿದ್ದಾರೆ. ಒಂದು ವರ್ಷದೊಳಗೆ ಕೋಲ್ಗೇಟ್‌ನ ಗೇಟ್ ಕೆಳಗೆ ಬೀಳಲಿದೆ. ನೆಸ್ಲೆ ಹಕ್ಕಿ ಹೋಗಲಿವೆ. ಬರ ಅನುಭವಿಸುತ್ತಿರುವ ವಿದರ್ಭ, ಬುಂದೇಲ್‌ಖಂಡ ಕ್ಷೇತ್ರಗಳಲ್ಲಿ ಜನರಿಗೆ ಲಾಭಕರವಾದ ಕೃಷಿ ಮಾಡಲು ಸೌಕರ್ಯ ಮಾಡಿಕೊಡಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಭಾರತ ಮಾತಾ ವಿವಾದದಲ್ಲಿ ತಲೆಕತ್ತರಿಸುವೆ ಎಂದು ಗ್ರಾಮೀಣ ಭಾಷೆಯಲ್ಲಿ ಹೇಳಿದ್ದೆ. ಅಹಿಂಸೆ ಮತ್ತು ಸಹವರ್ತಿತ್ವಕ್ಕೆ ಆದ್ಯತೆ ನೀಡಿ ಮಾತ್ರವೇ ಕಾರ್ಯವೆಸಗುತ್ತೇನೆ ಎಂದೂ ರಾಂದೇವ್ ಹೇಳಿದ್ದಾರೆ.

ಕಪ್ಪುಹಣದ ಕುರಿತ ಪ್ರಶ್ನೆಗೆ ಆಹೊಣೆಯನ್ನು ನರೇಂದ್ರ ಮೋದಿಗೆ ವಹಿಸಿಕೊಟ್ಟಿದ್ದೇನೆ. ಸ್ವದೇಶಿ ಅಭಿವೃದ್ಧಿ ಮತ್ತು ಯೋಗದಲ್ಲಿ ಮುಂದುವರಿಯುವತ್ತ ಗಮನಹರಿಸುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಜಾರಿಗೆ ತಂದ ಪಾನನಿರೋಧ ಮತ್ತು ದಿಲ್ಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನಡೆಸುವ ವಾಹನ ನಿಯಂತ್ರಣವನ್ನು ರಾಮ್ ದೇವ್ ಶ್ಲಾಘಿಸಿದ್ದಾರೆ. ಉತ್ತರಾಖಂಡದ ಸರಕಾರದ ಬುಡಮೇಲು ಕೃತ್ಯದಲ್ಲಿ ತನ್ನಪಾಲಿಲ್ಲ ಎಂದ ಅವರು ತಾನು ಎಲ್ಲವನ್ನೂ ನೇರವಾಗಿ ಮಾಡುವ ವ್ಯಕ್ತಿಯಾಗಿದ್ದೇನೆ ಎಂದು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News