ಟರ್ಕಿಯ ನೂತನ ಸಂವಿಧಾನ ಜಾತ್ಯತೀತ: ಪ್ರಧಾನಿ
Update: 2016-04-27 23:58 IST
ಅಂಕಾರ, ಎ. 27: ಟರ್ಕಿಯ ನೂತನ ಸಂವಿಧಾನವು ಜಾತ್ಯತೀತತೆಯನ್ನು ಉಳಿಸಿಕೊಳ್ಳಲಿದೆ ಎಂದು ದೇಶದ ಪ್ರಧಾನಿ ಅಹ್ಮದ್ ಡವುಟೊಗ್ಲು ಬುಧವಾರ ಹೇಳಿದ್ದಾರೆ. ಮುಸ್ಲಿಮ್ ಬಾಹುಳ್ಯದ ದೇಶಕ್ಕೆ ಧಾರ್ಮಿಕ ಸಂವಿಧಾನದ ಅಗತ್ಯವಿದೆ ಎಂದು ಹೇಳುವ ಮೂಲಕ ಸ್ಪೀಕರ್ ಇಸ್ಮಾಯೀಲ್ ಕಹ್ರಮನ್ ಈ ವಾರ ವಿವಾದದ ಕಿಡಿ ಹೊತ್ತಿಸಿರುವುದನ್ನು ಸ್ಮರಿಸಬಹುದಾಗಿದೆ.
ಆದಾಗ್ಯೂ, ತನ್ನ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಎಂಬುದಾಗಿ ಬಳಿಕ ಅವರು ಹೇಳಿದ್ದರು ಹಾಗೂ ನೂತನ ಸಂವಿಧಾನವು ಧಾರ್ಮಿಕ ಸ್ವಾತಂತ್ರವನ್ನು ನೀಡಬೇಕೆಂದು ಕರೆ ನೀಡಿದ್ದರು.