×
Ad

ಕೋಟ್ಯಾಧೀಶರಾಗಬೇಕೆ? ಬಾಳೆ ಕೃಷಿ ಮಾಡಿ

Update: 2016-04-29 16:03 IST

ಜಲಗಾಂವ್,ಎಪ್ರಿಲ್ 29: ವರ್ಷದಲ್ಲಿ ಯಾವುದೇ ರೈತ ಕೋಟಿರೂಪಾಯಿ ಸಂಪಾದಿಸುತ್ತಾನೆ ಎಂದರೆ ನೀವು ವ್ಯಂಗ್ಯ ಎನ್ನಬಹದು. ಆದರೆ ಮಹಾರಾಷ್ಟ್ರದ ಬಾಳೆಹಣ್ಣು ರಾಜಧಾನಿ ಜಲಗಾಂವ್‌ನಲ್ಲಿ ಕೆಲವು ರೈತರು ಕೊಟ್ಯಧೀಶರೇ ಆಗಿದ್ದಾರೆ. 62 ವರ್ಷದ ಟೆನೂ ಡೊಂಗಾರ್ ಬೊರೊಲೆ ಮತ್ತು 64 ವರ್ಷದ ಲಕ್ಷ್ಮಣ್ ಓಂಕಾರ್ ಚೌಧರಿ ಇಂತಹ ಕೋಟ್ಯಧೀಶ ರೈತರಾಗಿದ್ದಾರೆ. ಮೊದಲು ಇವರಲ್ಲಿ ಒಬ್ಬ ಚಾ ಮಾರುತ್ತಿದ್ದರು. ಹಳ್ಳಿಗರು ಇವರನ್ನು ಟನ್ಯಾ ಎಂದು ಕರೆಯುತ್ತಿದ್ದರು. ಈಗ ಟೆನು ಸೇಠ್ ಆಗಿದ್ದಾರೆ. ಆದರೆ ಲಕ್ಷ್ಮಣ್ ಮೇಸ್ಟ್ರು ಆಗಿದ್ದರು. ನೀರಾವರಿ ಕೊರತೆ, ಬಾಳೆಹಣ್ಣು ಗಿಡ ನೆಟ್ಟು ಬೆಳೆಸುವ ಸೌಕರ್ಯ ಮತ್ತು ಮಾರುಕಟ್ಟೆಗೆ ತಲುಪಿಸುವುದರೊಂದಿಗೆ ಇವರ ಅದೃಷ್ಟ ಬದಲಾಗಿದೆ. ಚೌಧರಿ 1974ರಿಂದ ಬಾಳೆಕೃಷಿ ಮಾಡುತ್ತಿದ್ದರು.ಆಗ ಅವರು ಸಾಂಪ್ರದಾಯಿಕ ಬಾಳೆಕೃಷಿ ಮಾಡುತ್ತಿದ್ದರು. ಇದರಲ್ಲಿ ಹದಿನೆಂಟು ತಿಂಗಳಲ್ಲಿಒಂದು ಸಲ ಫಲ ಬರುತ್ತಿತ್ತು. ಕೃಷಿ ಮಾಡುವ ವೇಳೆ ಅವರ ಬಳಿ ನಾಲ್ಕು ಎಕರೆ ಜಾಗ ಇತ್ತು. ಈಗ ಅವರ ಬಳಿ ಐವತ್ತು ಸಾವಿರಕ್ಕೂ ಅಧಿಕ ಬಾಳೆಮರ ಇದೆ ಇದು ನಲ್ವತ್ತು ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಅವು ವರ್ಷದಲ್ಲಿ12,500 ಕ್ವಿಂಟಲ್ ಬಾಳೆ ನೀಡುತ್ತವೆ.

ಕಳೆದ ವರ್ಷಬಾಳೆಗೆ ಬೆಲೆ ಕ್ವಿಂಟಲ್‌ಗೆ 900 ರೂಪಾಯಿತ್ತು.ಈ ವರ್ಷ 1200 ರೂಪಾಯಿ ಕ್ವಿಂಟಲ್‌ಗೆ ಆಗಿದೆ.

ಟೆನು ಬೊರೊಲೆ ಕೂಡಾ ಕೆಲವು ಎಕರೆಗಳಲ್ಲಿ ಬಾಳೆಗಿಡ ಹಾಕಿದ್ದಾರೆ. ಇಬ್ಬರೂ ರೈತರು ಅದೃಷ್ಟವಂತರು. ಯಾಕೆಂದರೆ ಅವರಿಗೆ ನೀರಾವರಿ ಸೌಕರ್ಯ ಒದಗಿದೆ. ಪ್ರೊಮೋಟರ್ ಕಂಪೆನಿ ಹನಿ ನೀರಾವರಿ ನೆರವು ನೀಡಿದ್ದರು. ಭಂವರ್‌ಲಾಲ್ ಜೈನ್ ಈ ಕಂಪೆನಿಯನ್ನು ಸ್ಥಾಪಿಸಿದ್ದರು. ಅವರು 78ವಯಸ್ಸಿನಲ್ಲಿ ನಿಧನರಾಗಿದ್ದರು. ರೈತರಿಗೆ ಲಾಭಕೊಟ್ಟರೆ ರೈತರು ತನ್ನ ಉತ್ಪಾದನೆ ಸ್ಫ್ರಿಂಕ್ಲರ್‌ನ್ನು ಖರೀದಿಸುವರು ಎಂದು ಅವರ ಯೋಚನೆಯಾಗಿತ್ತು.

ಜೈನ್ ಮಹಾರಾಷ್ಟ್ರದ ಸಿವಿಲ್ ಸೇವಾ ಪರೀಕ್ಷೆ ಪಾಸು ಮಾಡಿದ್ದರು. ಆದರೆ ಅವರು ಉದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದರು. ಮೊತ್ತಮೊದಲು ಕೃಷಿಯ ಪೈಪ್ ತಯಾರಿಸಲು ಆರಂಭಿಸಿದರು. ಆನಂತರ ಅಮೆರಿಕನ್ ತಂತ್ರಜ್ಞಾನದ ಬಿಂದು ಬಿಂದು ನೀರು ಹನಿಸುವ ನೀರಾವರಿ ವಿಧಾನವನ್ನು ತಂದರು. 1980ರಲ್ಲಿ ನೀರು ಉಳಿತಾಯ ಜಲವಾಯು ಪರಿವರ್ತನೆಯ ವಿಷಯ ಅಷ್ಟು ಚರ್ಚಾ ವಿಷಯವಾಗಿರಲಿಲ್ಲ. ಆಗ ಆ ತಂತ್ರಜ್ಞಾನವನ್ನು ಹಣ ಉಳಿತಾಯಕ್ಕಾಗಿ ಮಾಡುತ್ತಿದ್ದರು. ಅವರ ಕಂಪೆನಿ 1980ರಲ್ಲಿ ಪ್ರತಿ ವರ್ಷ ಫಲಕೊಡುವ ಒಂದು ಜಾತಿಯ ಬಾಳೆಗಿಡವನ್ನು ಅಭಿವೃದ್ಧಿ ಪಡಿಸಿದರು. ಇದರ ಮುಖ್ಯ ಬಾಳೆಗಿಡದಲ್ಲಿ ಮೂರು ಬಾರಿ ಫಲದೊರಕುತ್ತಿತ್ತು. ಹೀಗೆ ಪರಂಪರಾಗತ ಬಾಳೆ ಬೆಳೆಯಲ್ಲಿ ಆಗುತ್ತಿರಲಿಲ್ಲ. ಇನ್ನೊಂದು ಸಂಶೋಧನೆಯೆಂದರೆ ಟೆಸ್ಟ್‌ಟ್ಯೂಬ್‌ನಲ್ಲಿ ಬಾಳೆಗಿಡವನ್ನು ತಯಾರಿಸಿ ನರ್ಸರಿಗೆ ತಲುಪಿಸಿದರು.

ಬಾಳೆಗಿಡ ಸೆಖೆ ಮತ್ತು ನೀರಿನ ಪಸೆಯಿರುವ ಗಾಳಿಯಿಂದ ಉತ್ತಮ ಬೆಳವಣಿಗೆ ಕಾಣುತ್ತದೆ. ಜಲಗಾಂವ್ ತಾಪವಿರುವ ಪ್ರದೇಶವಾಗಿದೆ. ಇಲ್ಲಿ ಬಿಸಿ 47 ಡಿಗ್ರಿ ಸೆಲ್ಸಿಯಸ್ ವರೆಗೂ ಹೆಚ್ಚುತ್ತಾ ಹೋಗುತ್ತದೆ. ಇದು ಬಾಳೆಬೆಳೆಗೆ ಉಪಯುಕ್ತ ವಾತಾವರಣವಂತೆ. ಈಗ ಮಹಾರಾಷ್ಟ್ರದ ಒಟ್ಟು ಬಾಳೆ ಉತ್ಪಾದನೆಯಲ್ಲಿ ಶೇ. 71ರಷ್ಟು ಜಲಗಾಂವ್‌ನಲ್ಲಿದೆ. ತಮಿಳ್ನಾಡು ಆಂಧ್ರಪ್ರದೇಶ ಕರ್ನಾಟಕದಿಂದ ಜಲಗಾಂವ್ ಬಾಳೆ ಉತ್ಪಾದನೆಯಲ್ಲಿ ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News