ಪೆಟ್ರೋಲ್, ಡೀಸೆಲ್‌ಗೆ ಐದುರೂಪಾಯಿ ಜಾಸ್ತಿಯಾಗಬಹುದಂತೆ!
Update: 2016-04-30 11:29 IST
ಹೊಸದಿಲ್ಲಿ, ಎಪ್ರಿಲ್ 30: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಭಾರೀ ವೇಗೋತ್ಕರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಆಂತರಿಕ ಮಾರುಕಟ್ಟೆಯ ಮಾರಾಟ ಕಂಪೆನಿಗಳು ಪೆಟ್ರೋಲ್ ಡಿಸೇಲ್‌ಗಳಿಗೆ ಐದು ಹೆಚ್ಚಿಸುವ ಸಾಧ್ಯತೆಗಳು ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಒಂದು ವಾರದ ಮೊದಲು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್‌ನ ಬೆಲೆ ಬ್ಯಾರೆಲ್ ಒಂದಕ್ಕೆ 43 ಡಾಲರ್ ಇತ್ತು. ಇದೀಗ ಅದು 48ಡಾಲರ್ ಆಗಿದೆ. ಈ ತಿಂಗಳು ಏಳು ವರ್ಷಗಳಲ್ಲೇ ತಿಂಗಳ ವೇಗೋತ್ಕರ್ಷವನ್ನು ತೈಲ ಬೆಲೆಯೇರಿಕೆಯು ಪಡೆಯಿತು ಎಂದು ವರದಿಗಳು ಸೂಚಿಸುವೆ. ಒಂದು ತಿಂಗಳಲ್ಲಿ ಇಷ್ಟು ಮೊತ್ತ ಏರಿಕೆ ಆಗಿದ್ದು ಅಪರೂಪವಾಗಿದೆ. ಕಳೆದ ಸಮೀಕ್ಷೆಯ ಸಮಯದಲ್ಲಿ ತೈಲ ಮಾರಾಟ ಕಂಪೆನಿಗಳು ಪೆಟ್ಟೋಲ್‌ನ ಬೆಲೆ 74 ಪೈಸೆ ಮತ್ತು ಡೀಸೆಲ್‌ನ ಬೆಲೆಯನ್ನು 1.30 ರೂಪಾಯಿಯಷ್ಟು ಕಡಿಮೆ ಮಾಡಿತ್ತು ಎಂದು ವರದಿಗಳು ವಿವರಿಸಿವೆ.