ಲಾತೂರ್‌ನ ಮತೀನ್ ಭಾಯಿ ದಿನಾಲೂ ಮುನ್ನೂರು ಕುಟುಂಬಗಳಿಗೆ ಹತ್ತುಸಾವಿರ ಲೀಟರ್ ಉಚಿತ ನೀರು ಕೊಡುತ್ತಿದ್ದಾರೆ!
ಹೊಸದಿಲ್ಲಿ, ಎಪ್ರಿಲ್ 30: ಬರಗಾಲದಿಂದಾಗಿ ದೇಶದ ಹಲವಾರು ರಾಜ್ಯಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಭಯಂಕರ ನೀರಿಲ್ಲದ ಸಮಸ್ಯೆಯಿಂದ ತತ್ತರಿಸಿದ್ದು ನೀರಿಲ್ಲದ್ದಕ್ಕಾಗಿ ಮನೆಮಠ ತೊರೆದು ಹೋಗಬೇಕಾದ, ಹೊಟ್ಟೆಪಾಡಿಗಾಗಿ ಇನ್ನೆಲ್ಲಾದರೂ ಕೆಲಸ ಹುಡುಕಬೇಕಾದ ಜಂಜಾಟದಲ್ಲಿ ಬಿದ್ದಿದಾರೆ. ಇಂತಿರುವಾಗಲೇ ಲಾತೂರ್‌ನ ಶೈಕ್ ಮತೀನ್ ಮೂಸಾ ಮುನ್ನೂರು ಕುಟುಂಬಗಳಿಗೆ ಉಚಿತ ನೀರು ನೀಡುತ್ತಿದ್ದಾರೆಂದು ವರದಿಯಾಗಿದೆ.
ಶೈಕ್ ಮತೀನ್ ಮೂಸಾರ ಮನೆಯಲ್ಲಿ ಪ್ರತಿದಿನಾವೂ ಈಗ ಬಾಲ್ದಿಯ ಉದ್ದದ ಲೈನ್ ತುಂಬಿರುತ್ತದೆ. ವರದಿಗಳ ಪ್ರಕಾರ ಲಾತೂರ್‌ನ ಮತೀನ್ ಯಾವುದೇ ದೇವಚರರಿಗೆ ಕಮ್ಮಿಯಿಲ್ಲ. ನೀರಿಲ್ಲದ ಈ ಸುಡುಗಾಲದ ಮುನ್ನೂರು ಕುಟುಂಬಗಳಿಗೆ 10,000 ಲೀಟರ್ ನೀರು ನೀಡುವುದೆಂದರೆ ಸುಲಭದ ವಿಚಾರವೇ?. ಮತೀನ್ ನಿರ್ಲಿಪ್ತವಾಗಿ ಈ ಕೆಲಸವನ್ನು ಮಾಡುತ್ತಿದ್ದಾರೆ. ಜನರು ಮತೀನ್ ಭಾಯಿ ಜನರಿಗೆ ಫ್ರೀ ನೀರು ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಈಗ ಸುದ್ದಿಯ ಪುಟಗಳಲ್ಲಿ ಮತೀನ್ ಭಾಯಿ ರಾರಾಜಿಸುತ್ತಿದ್ದಾರೆ. ರಾಮ್‌ನಾಮ್ ಎಂಬ ಫೇಸ್‌ಬುಕ್ ಬಳಕೆಗಾರ ಮತೀನ್‌ರ ಕುರಿತು ಬರೆದಿದ್ದ. ಆನಂತರ ಬಹಳಷ್ಟು ಮಂದಿ ಅದನ್ನು ಶೇರ್ ಮಾಡಿದ್ದಾರೆ. ಜನರು ಮತೀನ್‌ರ ಕೆಲಸಕ್ಕೆ ಬಹಳಷ್ಟು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಧರ್ವ ರಾಜಕೀಯಕ್ಕಿಂತ ಮೇಲೆದ್ದು ಜನರಿಗಾಗಿ ನಿಸ್ವಾರ್ಥ ಭಾವದಲ್ಲಿ ಸೇವೆ ಮಾಡುತ್ತಿದ್ದಾರೆ. ನಮ್ಮ ರಾಜಕೀಯ ನಾಯಕರು ಮತೀನ್ ಭಾಯಿಯವರಂತಹವರಿಂದ ಪಾಠ ಕಲಿಯಬೇಕಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.