×
Ad

ಮುಂಬೈನಲ್ಲಿ ಕಟ್ಟಡ ಕುಸಿತ ; 6 ಸಾವು

Update: 2016-04-30 17:29 IST

ಮುಂಬೈ, ಎ.30: ಇಲ್ಲಿನ ಕಾಮಾಟಿಪುರ ಪ್ರದೇಶದಲ್ಲಿರುವ ಗ್ರಾಂಟ್‌ ರೋಡ್ ಪಕ್ಕದ ಮೂರು ಅಂತಸ್ತಿನ ಕಟ್ಟಡವೊಂದು ಶನಿವಾರ ಅಪರಾಹ್ನ ಕುಸಿದ ಪರಿಣಾಮವಾಗಿ ಆರು ಮಂದಿ ಸಾವಿಗೀಡಾಗಿದ್ದಾರೆ.
ಸುಮಾರು ಎರಡು ಗಂಟೆಯ ಹೊತ್ತಿಗೆ ಕಟ್ಟಡ ಕುಸಿದ ಪರಿಣಾಮವಾಗಿ ಆರು ಮಂದಿ ಮೃತಪಟ್ಟರು. ಇಬ್ಬರು ಗಾಯಗೊಂಡಿದ್ದಾರೆ. ಐವರನ್ನು ರಕ್ಷಿಸಲಾಗಿದ್ದು, ಹಲವು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡ ಬಗ್ಗೆ ವರದಿಯಾಗಿದೆ.

ಗಾಯಗೊಂಡವನ್ನು ಜೆ.ಜೆ.  ಹಾಗೂ ನಾಯರ್‌ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News