×
Ad

ಇಂದಿನಿಂದ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್, ಪೆಟ್ರೋಲ್, ಟ್ಯಾಕ್ಸಿ ನಿಷೇಧ

Update: 2016-05-01 00:35 IST

ಹೊಸದಿಲ್ಲಿ, ಎ.30: ರವಿವಾರದಿಂದ ರಾಷ್ಟ್ರ ರಾಜಧಾನಿ ವಲಯದಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಚಾಲಿತ ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶವಿಲ್ಲವೆಂದು ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.
 ಅಖಿಲ ಭಾರತ ಪರವಾನಿಗೆಯ ಕ್ಯಾಬ್‌ಗಳಿಗೆ ಸಿಎನ್-ಜಿ-ಚಾಲಿತ ಕಾರುಗಳಾಗಿ ಪರಿವರ್ತಿಸಿಕೊಳ್ಳುವುದಕ್ಕಾಗಿ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ ಎಂದಿರುವ ನ್ಯಾಯಾಲಯ, ಟ್ಯಾಕ್ಸಿಗಳನ್ನು ಸಿಎನ್-ಜಿ-ಚಾಲಿತವಾಗಿ ಪರಿವರ್ತಸುವುದಕ್ಕೆ ನೀಡಿರುವ ಎ.30ರ ಗಡುವನ್ನು ವಿಸ್ತರಿಸಲು ನಿರಾಕರಿಸಿದೆ.
ಡೀಸೆಲ್ ಟ್ಯಾಕ್ಸಿಗಳನ್ನು ಸಿಎನ್‌ಜಿ ಪರಿವರ್ತಿಸುವ ಯಾವುದೇ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಲಭ್ಯವಿಲ್ಲವೆಂದು ಟ್ಯಾಕ್ಸಿ ಮಾಲಕರು ವಾದಿಸಿದರು. ಆದರೆ, ಖಾಸಗಿ ಟ್ಯಾಕ್ಸಿಗಳನ್ನು ಸಿಎನ್‌ಜಿಗೆ ಪರಿವರ್ತಿಸಲು ತಾವು ಸಾಕಷ್ಟು ಸಮಯ ನೀಡಿದ್ದೇವೆ. ಆದುದರಿಂದ ಗಡುವನ್ನು ವಿಸ್ತರಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News