×
Ad

ತ್ರಿಪುರ ಕಾಂಗ್ರೆಸ್ ಶಾಸಕನ ಹತ್ಯೆ: 12 ಮಂದಿಗೆ ಜೀವಾವಧಿ

Update: 2016-05-01 00:38 IST

ಅಗರ್ತಲಾ,ಎ.30: ತ್ರಿಪುರಾದ ಪ್ರತಿಪಕ್ಷ ಕಾಂಗ್ರೆಸ್ ಶಾಸಕ ಪರಿಮಳ್ ಶಹಾ ಹತ್ಯೆ ನಡೆದ 33 ವರ್ಷಗಳ ಬಳಿಕ ಸ್ಥಳೀಯ ನ್ಯಾಯಾಲಯವೊಂದು ಪ್ರಕರಣದ 12 ಮಂದಿ ಆರೋಪಿಗಳನ್ನು ದೋಷಿಗಳೆಂದು ಪರಿಗಣಿಸಿದ್ದು,ಶನಿವಾರ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.ಉಳಿದ ಐವರನ್ನ್ನು ಸೂಕ್ತ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದೆ.
  ಭಾರತೀಯ ದಂಡಸಂಹಿತೆಯ 120 ಬಿ (ಕ್ರಿಮಿನಲ್ ಸಂಚು) ಹಾಗೂ 302 (ಕೊಲೆ) ಸೆಕ್ಷನ್‌ಗಳಡಿ ಈ 12 ಮಂದಿ ಆರೋಪಿಗಳನ್ನು ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶ ಎಸ್.ಬಿ.ದತ್ತಾ ದೋಷಿಗಳೆಂದು ಘೋಷಿಸಿದ್ದಾರೆ.
ಚಾರಿಲಾಮ್ ಕ್ಷೇತ್ರದ ಶಾಸಕರಾಗಿದ್ದ ಪರಿಮಳ್ ಸಾಹಾ ಹಾಗೂ ಅವರ ಜೊತೆಗಾರ ಜಿತೇನ್ ಸಾಹಾ ಅವರನ್ನು 1983ರ ಎಪ್ರಿಲ್ 7ರಂದು ಬಿಶಾಲ್‌ಘರ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಲಾ ಪ್ರದೇಶದಲ್ಲಿರುವ ಅವರ ಕಚೇರಿಯಲ್ಲಿ 1983ರ ಎಪ್ರಿಲ್ 7ರಂದು ಹತ್ಯೆಗೈಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News