ಭಾರತ ಮಾತೆಯ ಕೈಯಿಂದ ತ್ರಿವರ್ಣ ಧ್ವಜ ಕಿತ್ತು ಭಗವಾಧ್ವಜ ಹೇರುವ ಯತ್ನ ನಡೆಯುತ್ತಿದೆ: ಕನ್ಹಯ್ಯಾ ಕುಮಾರ್

Update: 2016-05-01 05:06 GMT

ಪಾಟ್ನಾ, ಮೇ 1: ಜೆಎನ್‌ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಶನಿವಾರ ಮೊದಲಬಾರಿ ತನ್ನ ಸ್ವಂತ ರಾಜ್ಯ ಬಿಹಾರಕ್ಕೆ ಹೋಗಿದ್ದು ಅವರನ್ನು ಜೆಡಿಯು ವಕ್ತಾಯ ನೀರಜ್‌ಕುಮಾರ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರೆಂದು ವರದಿಗಳು ತಿಳಿಸವೆ. ಕನ್ಹಯ್ಯಾರನ್ನು ಸ್ವಾಗತಿಸಲಿಕ್ಕಾಗಿ ವಿಮಾನನಿಲ್ದಾಣದ ಹೊರಗೆ ಭಾರೀ ಸಂಖ್ಯೆಯಲ್ಲಿ ಯುವಕರು ಕಾದು ನಿಂತಿದ್ದರು. ಕನ್ಹಯ್ಯೆ ಪಾಟ್ನದಲ್ಲಿ ಮಹಾಪುರುಷರ ಪ್ರತಿಮೆಗಳಿಗೆ ಹಾರ ಹಾಕಿದ ನಂತರ ಮಾತಾನಾಡಿ ಕನ್ಹಯ್ಯಾ ನಾನು ಇಲ್ಲಿಯವನೇ ಇಲ್ಲಿಯೇ ಹುಟ್ಟಿದ್ದೇನೆ ಎಂದಿದ್ದಾರೆ.

"ನಾನು ಯಾವುದೇ ರಾಜಕೀಯ ಮಾತುಕತೆ ಅಥವಾ ಬೈಠಕ್‌ಗಾಗಿ ಬಂದಿಲ್ಲ ಬದಲಾಗಿ ನಮ್ಮ ಮಾತುಗಳನ್ನು ಜನರೆಡೆಗೆ ತಲುಪಿಸಲು ಬಂದಿದ್ದೇನೆ. ಭಾರತ ಮಾತೆಯ ಕೈಯಿಂದ ರಾಷ್ಟ್ರಧ್ವಜವನ್ನು ಕಿತ್ತು ಭಗವಾ ಧ್ವಜವನ್ನು ಹಿಡಿಸುವ ಪ್ರಯತ್ನ ನಡೆಯುತ್ತಿದೆ. ಈ ಅಪಾಯವನ್ನು ಎದುರಿಸಲು ಎಲ್ಲ ವಿಚಾರಧಾರೆಯವರು ಮುಂದೆ ಬರಬೇಕು" ಎಂದು ಕನ್ಹಯ್ಯಿ ಹೇಳಿದ್ದಾರೆ.

ಇಲ್ಲಿನ ಭೂಮಿಯೊಂದಿಗೆ ನನ್ನ ಸಂಬಂಧ ಬೆಸೆದು ಕೊಂಡಿದೆ ಎಂದು ಹೇಳಿದ್ದಾರೆಂದು ವರದಿಗಳು ತಿಳಿಸಿವೆ.

ಆನಂತರ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ರನ್ನು ಭೇಟಿದರು. ಇಬ್ಬರೂ ಕೋಣೆಯೊಂದರಲ್ಲಿ ಏಕಾಂತದಲ್ಲಿ ಸಂಭಾಷಿದ್ದು ತದನಂತರ ಮಾತಾಡಿದ ಲಾಲು ಪ್ರಸಾದ್‌ಯಾದವ್‌ರು ದೇಶದ ಸುಪುತ್ರನಾಗಿದ್ದಾರೆ ಬ್ರಹ್ಮರ್ಷಿ ಸಮಾಜದಲ್ಲಿ ಹುಟ್ಟಿದ್ದರೂ ನಮ್ಮ ಭಾಷೆಯನ್ನೇ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ. ಲಾಲೂರ ಭೇಟಿಯ ನಂತರ ಕನ್ಹಯ್ಯಾ ದೇಶದ ಸದ್ಯದ ಪರಿಸ್ಥಿತಿಯ ಕುರಿತು ಚರ್ಚಿಸಿದ್ದೇವೆ. ಲಾಲೂ ಸಾಮಾಜಿಕ ನ್ಯಾಂದ ಹೋರಾಟವನ್ನು ಗುರಿಯೆಡೆಗೆ ತಲುಪಿಸಲು ಯಶಸ್ವಿಯಾಗಿದ್ದಾರೆ ಎಂದರು.

ಕನ್ಹಯ್ಯ ಬಿಹಾರದಲ್ಲಿ ನಾನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News