ದಿಲ್ಲಿ ಪೂರ್ಣ ರಾಜ್ಯ ವಿಧೇಯಕ ರೆಡಿ: ಕೇಜ್ರಿವಾಲ್
ಹೊಸದಿಲ್ಲಿ ಮೇ 1: ದಿಲ್ಲಿ ಮುಖ್ಯಂತ್ರಿ ಅರವಿಂದ್ ಕೇಜ್ರಿವಾಲ್ ದಿಲ್ಲಿಗೆ ಪೂರ್ಣರಾಜ್ಯಸ್ಥಾನ ಮಾನ ನೀಡುವ ಕುರಿತ ವಿಧೇಯಕ ತಯಾರಾಗಿದೆ. ಅದನ್ನು ಜನರ ಅಭಿಪ್ರಾಯವನ್ನು ತಿಳಿದು ಕೊಳ್ಳುವುದಕ್ಕಾಗಿ ಶೀಘ್ರ ವೆಬ್‌ಸೈಟ್‌ಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ಆದರೆ ಬಿಜೆಪಿಯು ಈ ಆದೇಶವನ್ನು ಆಮ್ ಆದ್ಮಿ ಪಾರ್ಟಿಯ ಘರ್ಷಣಾ ರಾಜಕೀಯ ಫಲಶ್ರುತಿ ಎಂದಿರುವುದಾಗಿ ವರದಿಯಾಗಿದೆ.
ಕೇಜ್ರಿವಾಲ್ ಟ್ವೀಟ್ ಮಾಡಿ ಪೂರ್ಣರಾಜ್ಯದ ವಿಧೇಯಕ ರೆಡಿಯಾಗಿದ್ದು ಜನರ ಅಭಿಪ್ರಾಯಕ್ಕೆ ಅದನ್ನು ಶೀಘ್ರ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿ ಕೇಜ್ರಿವಾಲ್‌ರ ಟ್ವೀಟ್‌ನ ನಂತರ ಇದು ಆಮ್‌ಆದ್ಮಿಯ ಪವಿತ್ರ ಘರ್ಷಣಾ ರಾಜಕೀಯ ಎಂದು ಟೀಕಿಸಿದೆ. ಬಿಜೆಪಿ ಸಂಸದ ವಿಜೇಂದ್ರ ಗುಪ್ತ ಸರಕಾರದ ವೈಫಲ್ಯಗಳನ್ನು ಜನರಿಂದ ಮುಚ್ಚಿಡುವ ಯತ್ನ ವಿಧೇಯಕವಾಗಿದೆ ಎಂದು ಕಿಡಿಕಾರಿದ್ದಾರೆ. ನಾವೂ ದಿಲ್ಲಿ ಪೂರ್ಣ ರಾಜ್ಯ ಎಂಬ ಅಕಾಡಮಿಕ್ ಚರ್ಚೆಯನ್ನು ಬೆಂಬಲಿಸುವವರೇ. ಆದರೆ ಕೇಜ್ರಿವಾಲ್ ತನ್ನ ಬೆಂಬಲಿಗರನ್ನು ಹೆಚ್ಚಿಸಲು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಗುಪ್ತ ಟೀಕಿಸಿದ್ದಾರೆ.
ಕೇಜ್ರಿವಾಲ್ ದಿಲ್ಲಿ ಪೂರ್ಣ ರಾಜ್ಯ ಬೇಡಿಕೆಯನ್ನು ಇಡುತ್ತಾ ಬಂದಿದ್ದಾರೆ ಮತ್ತು ಪೂರ್ಣ ರಾಜ್ಯ ಅದರ ಚುನಾವಣಾ ಭರವಸೆಯೂ ಆಗಿದೆ. ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಅಧಿಕಾರವಿಲ್ಲದಿದ್ದರೆ ಸರಕಾರ ನಡೆಸುವುದು ತೀರಾ ಕಷ್ಟ ಎಂದು ಆಮ್ ಆದ್ಮಿಯ ವಾದವೆಂದು ವರದಿಗಳು ತಿಳಿಸಿವೆ.