×
Ad

ಕೇರಳ ವಿಧಾನ ಸಭಾ ಚುನಾವಣಾ ಸಮೀಕ್ಷೆ: ಎಲ್‌ಡಿಎಫ್ 79,ಯುಡಿಎಫ್ 57, ಎನ್‌ಡಿಎಗೆ 4 ಸ್ಥಾನ

Update: 2016-05-01 20:19 IST

ತಿರುವನಂತಪುರಂ, ಮೆ 1: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಲಭಿಸಬಹುದು ಎಂಬ ಬಗ್ಗೆ ಸಮೀಕ್ಷೆಯೊಂದು ಹೊರಬಂದಿದ್ದು ಕೇರಳದ ಒಟ್ಟು 140 ವಿಧಾನಸಭಾ ಸ್ಥಾನಗಳಲ್ಲಿ 79 ಸ್ಥಾನಗಳನ್ನು ಎಲ್‌ಡಿಎಫ್ ಮತ್ತು 57 ಸ್ಥಾನಗಳನ್ನು ಯುಡಿಎಫ್ ಮತ್ತು ಎನ್‌ಡಿಎ ಕೇವಲ ನಾಲ್ಕು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

 ಕೊನೆಯ ಘಟ್ಟದ ಸರ್ವೇ ನಡೆದ ಪತ್ತನತಿಟ್ಟ, ಕೊಲ್ಲಂ, ತಿರುವನಂತಪುರಂ ಜಿಲ್ಲೆಗಳ ಮೂವತ್ತು ಸ್ಥಾನಗಳಲ್ಲಿ ಬಹುತೇಕ ಸ್ಥಾನಗಳನ್ನು ಎಡಪಕ್ಷಗಳೇ ಬಾಚಿಕೊಳ್ಳಲಿವೆ. ಇಲ್ಲಿ ಯುಡಿಎಫ್ ಕೇವಲ ಐದು ಸ್ಥಾನಗಳನ್ನು ಮತ್ತು ಎನ್‌ಡಿಎ ಎರಡು ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಭಾರೀ ಸ್ಪರ್ಧೆ ಇರುವ ನೇಮತ್ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಬಿಜೆಪಿ ನಾಯಕ ಒ.ರಾಜಗೋಪಾಲ್ ಮತ್ತು ವಟ್ಟಿಯೂರ್‌ಕಾವಿಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕಮ್ಮನ ರಾಜಶೇಖರನ್ ವಿಜಯಿಯಾಗುವ ಸಾಧ್ಯತೆಗಳಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News