ಕಾರ್ಮಿಕರಿಗೆ 10 ರೂಪಾಯಿಗೆ ಫುಲ್ ಊಟ !
Update: 2016-05-01 20:27 IST
ಲಕ್ನೋ , ಮೇ 1: ಉತ್ತರ ಪ್ರದೇಶ ಸರಕಾರ ಲಕ್ನೋದಲ್ಲಿ ಹೊಸ ಕ್ಯಾಂಟೀನ್ ಒಂದನ್ನು ಕಾರ್ಮಿಕ ದಿನಾಚರಣೆಯಂದು ತೆರೆದಿದ್ದು ಇದರಲ್ಲಿ ಕಾರ್ಮಿಕರಿಗೆ ಕೇವಲ 10 ರೂಪಾಯಿಗೆ ಒಂದು ಥಾಲಿ ( ಫುಲ್ ಊಟ ) ಸಿಗಲಿದೆ.
ಕಾರ್ಮಿಕ ದಿನಾಚರಣೆಯಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಈ ಹೊಸ ಕ್ಯಾಂಟೀನ್ ಅನ್ನು ರಾಜ್ಯ ಸಚಿವಾಲಯ ಕಟ್ಟಡದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಮಾಸಿಕ ಒಂದು ಸಾವಿರ ರೂಪಾಯಿ ಪಿಂಚಣಿ ನೀಡಲಾಗುವುದು ಎಂದೂ ಅವರು ಹೇಳಿದರು.