×
Ad

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಾಪ್ಟರ್ ಖರೀದಿ ಹಗರಣ; ಸಿಬಿಐಯಿಂದ ವಾಯುಸೇನೆಯ ಮಾಜಿ ಮುಖ್ಯಸ್ಥ ತ್ಯಾಗಿ ವಿಚಾರಣೆ

Update: 2016-05-02 11:37 IST

ಹೊಸದಿಲ್ಲಿ, ಮೇ  2: ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಯ ಬಹುಕೋಟಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿ  ಮಾಜಿ ಏರ್‌ ಚೀಪ್‌ ಮಾರ್ಷಲ್‌ ಎಸ್‌.ಪಿ. ತ್ಯಾಗಿ ಅವರನ್ನು ಸಿಬಿಐ ಇಂದು ವಿಚಾರಣೆಗೊಳಪಡಿಸಿದೆ.
ಸಿಬಿಐ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲು ನಿರ್ಧರಿಸಿದೆ.  ತ್ಯಾಗಿ ಹೆಲಿಕಾಪ್ಟರ್‌  ಒದಗಿಸಲು ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಗೆ ಸಹಾಯ ಮಾಡಿದ್ದರು ಎನ್ನಲಾಗಿದೆ. ಹಗರಣದಲ್ಲಿ ತ್ಯಾಗಿ ಸಹೋದರರಾದ ಸಂಜೀವ್‌, ರಾಜೀವ್‌ ಮತ್ತು ಸಂದೀಪ್‌ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಜಿ ಡೆಪ್ಯುಟಿ ಏರ್‌ ಚೀಪ್‌ ಜೆ.ಎಸ್‌ .ಗುಜ್ರಾಲ್‌ ಅವರನ್ನು ಸಿಬಿಐ ವಿಚರಣೆಯನ್ನು ಮುಂದುವರಿಸಿದೆ. 
ಇದೇ ವೇಳೆ ಜಾರಿ ನಿರ್ದೇಶನಾಲಯವು ಎಸ್‌.ಪಿ. ತ್ಯಾಗಿ ಅವರಿಗೆ  ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಹಾಜರಾಗಲು ಸಮನ್ಸ್‌ ಜಾರಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News