×
Ad

ಮದುವೆ ದಿಬ್ಬಣದ ಟ್ರಕ್ ಮೇಲೆ ಹೈಟೆನ್ಶನ್ ವೈರ್ ಬಿದ್ದ ಪರಿಣಾಮ 8 ಸಾವು

Update: 2016-05-02 12:17 IST

ಹೈದರಾಬಾದ್ , ಮೇ 2:  ಮದುವೆ ದಿಬ್ಬಣದ ಟ್ರಕ್ ಮೇಲೆ ಹೈಟೆನ್ಶನ್ ವೈರ್ ಬಿದ್ದ ಪರಿಣಾಮ 8 ಮಂದಿ  ಸ್ಥಳದಲ್ಲೆ ಮೃತಪಟ್ಟು, 15 ಜನರು ಗಂಭೀರವಾಗಿ ಗಾಯಗೊಂಡ ಘಟನೆ ನಾರಾಯಣಖೇಡ ತಾಲೂಕಿನ ದೇಗುಲ್‌ವಾಡಿವಾಡಿ ತಾಂಡದಲ್ಲಿ  ನಡೆದಿದೆ.
ಮದುವೆ ಮುಗಿಸಿಕೊಂಡು ಜನರು ಟ್ರಕ್​ನಲ್ಲಿ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. 
ಟ್ರಿಕ್​ನಲ್ಲಿ ತೆರಳುತ್ತಿದ್ದವರು ಕೋಲುಗಳಿಗೆ ಬ್ಯಾಟರಿ ಚಾಲಿತ ಲೈಟ್​ಗಳನ್ನು ಅಳವಡಿಸಿಕೊಂಡು ಕೈಯಲ್ಲಿ ಹಿಡಿದಿದ್ದರು. ಆಕಸ್ಮಿಕವಾಗಿ ಈ ಕೋಲುಗಳಿಗೆ ಹೈ ಟೆನ್ಶನ್ ವೈರ್ ತಗುಲಿದ ಪರಿಣಾಮ ವೈರ್ ಲಾರಿಯ ಮೇಲೆ ಬಿದ್ದಿದೆ. ಲಾರಿಯಲ್ಲಿ 40 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು  ಬಂದಿದೆ.
ಗಾಯಗೊಂಡವರನ್ನು  ಹೈದರಾಬಾದ್‌ನ ನಿಝಾಮ್‌    ಮೆಡಿಕಲ್‌ ಕಾಲೇಜು ಆಸ್ಪತ್ರೆ, ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News