×
Ad

ದಿವಾಳಿ ಘೋಷಿಸಿದ ಜನರು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ತಡೆ!

Update: 2016-05-02 13:14 IST

ಹೊಸದಿಲ್ಲಿ,ಮೆ 2: ಶರಾಬು ಉದ್ಯಮಿ ವಿಜಯ್ ಮಲ್ಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ಮೋಸ ಮಾಡಿ ವಿದೇಶಕ್ಕೆ ಹಾರಿದ ಪ್ರಕರಣವು ಸಂಸತ್ತನ್ನು ಯೋಚಿಸುವಂತೆ ಮಾಡಿದೆ. ಇನ್ನು ಮುಂದೆ ಇಂತಹ ಪ್ರಕರಣಕ್ಕೆ ಲಗಾಮು ಹಾಕಲಿಕ್ಕಾಗಿ ಸಂಸತ್‌ನ ನೀತಿ ಸಮಿತಿ ಕೆಲವು ಹೆಜ್ಜೆಗಳನ್ನು ಮುಂದಿಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯ ವರದಿ ಪ್ರಕಾರ ಬಿಜೆಪಿ ಸಂಸದ ಭೂಪೇಂದ್ರ ಯಾದವ್ ಅಧ್ಯಕ್ಷತೆಯ ದಿವಾಳಿಮತ್ತು ದಿವಾಳಿಗೆ ಯಾಚನೆ ಕುರಿತ ಸಮಿತಿ ಈ ಕುರಿತು ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ಅದು ಶಿಫಾರಸು ಮಾಡಿರುವ ಪ್ರಕಾರಇಂತಹ ವ್ಯಕ್ತಿಗಳುಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಇಂತಹವರು ಆಮೊದಲು ಚುನಾಯಿತರಾಗಿದ್ದರೆ ತಮ್ಮ ಸ್ಥಾನಗಳನ್ನು ಕಳಕೊಳ್ಳಲಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಈ ಶಿಫಾರಸು ಸ್ವೀಕಾರಗೊಂಡರೆ ಸಂಸತ್‌ನ ಈಗಿನ ಅಧಿವೇಶನದಲ್ಲಿ ಅದು ಸ್ವೀಕಾರಗೊಂಡರೆ ಬ್ಯಾಂಕ್‌ಗೆ ಹಣ ಪಾವತಿಸದ ಡಿಫೋಲ್ಟರ್ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭೆ ಮತ್ತು ಸಂಸತ್ತಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅಯೋಗ್ಯ ಎಂದು ಘೋಷಿಸಲಾಗುವುದು ಎಂದು ವರದಿಗಳು ತಿಳಿಸಿವೆ.

ಈಗ ಸಂವಿಧಾನದ ಪರಿಚ್ಛೇದ 102(ಸಿ)ಪ್ರಕಾರ ದಿವಾಳಿ ವ್ಯಕ್ತಿಗೆ ಲೋಕಸಭಾ ರಾಜ್ಯಸಭಾ ಚುನಾವಣೆ ಸ್ಪರ್ಧಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News