ಗೊಂದಲ ಹೆಚ್ಚಿಸಿದ ಪ್ರಧಾನಿ ಮೋದಿಯ ಗುಜರಾತ್ ವಿವಿಯ ದಾಖಲೆ ಬಹಿರಂಗ
ಅಹಮದಾಬಾದ್, ಮೇ 2 : ಪ್ರಧಾನಿ ನರೇಂದ್ರ ಮೋದಿ ಸ್ನಾತಕೋತ್ತರ ಪದವೀಧರರೆಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಗುಜರಾತ್ ವಿಶ್ವವಿದ್ಯಾಲಯ ಸೋರಿಕೆ ಮಾಡಿದೆಯೆನ್ನಲಾದ ಮೊಧಿಯ ಡಿಗ್ರಿ ಸರ್ಟಿಫಿಕೇಟ್ ಹಲವಾರು ಸಂಶಯಗಳನ್ನು ಸೃಷ್ಟಿಸಿದೆ.
ಅಹಮದಾಬಾದ್ ಮಿರರ್ ಪ್ರಕಟಿಸಿದ ಒಂದು ದಾಖಲೆಯಲ್ಲಿ ಮೋದಿ ಜನ್ಮ ದಿನಾಂಕ 29 ಆಗಸ್ಟ್ 1949 ಎಂದು ಹೇಳಿದ್ದರೆ, ಮೋದಿ ಅಧಿಕೃತ ವೆಬ್ ಸೈಟಿನಲ್ಲಿ ಅವರ ಜನ್ಮ ದಿನಾಂಕ 17 ಸೆಪ್ಟೆಂಬರ್ 1950 ಆಗಿದೆ.
ಪ್ರಧಾನಿಗೆ ಮುಜುಗರ ತಪ್ಪಿಸಲು ವಿಶ್ವವಿದ್ಯಾಲಯ ದಾಖಲೆಗಳನ್ನು ತಿದ್ದಿದೆಯೆಂದು ಆರೋಪಿಸುವ ಆರ್ಟಿಐ ಕಾರ್ಯಕರ್ತ ರೋಶನ್ ಶಾ ಹೀಗೆಂದು ಹೇಳುತ್ತಾರೆ. ‘‘ಭಕ್ತ್ ಪ್ರಿನ್ಸಿಪಾಲ್ ಕೆ ಎಂ ಜೋಶಿ ಮೊದಲು ತಮ್ಮ ಸಂಸ್ಥೆ 5 ವರ್ಷಕ್ಕಿಂತ ಹಳೆಯ ದಾಖಲೆಗಳನ್ನು ಇಡುವುದಿಲ್ಲವೆಂದು ಹೇಳಿದ್ದರೆ, ಈಗಈ ದಾಖಲೆಗಳನ್ನು ದೃಢೀಕರಿಸಿದ್ದಾರೆ. ತರುವಾಯ ಬಿ ಎನ್ ಸ್ಕೂಲ್ಪ್ರಸ್ತುತ ಪಡಿಸಿದ ದಾಖಲೆಗಳಲ್ಲಿಜನ್ಮ ದಿನಾಂಕ ಅಂಕಿಗಳಲ್ಲಿ ಹಾಗೂ ಅಕ್ಷರಗಳಲ್ಲಿ 29.08.1949 ಎಂದು ತಿಳಿಸುತ್ತದೆ.’’
ಮೋದಿ 1967ರಲ್ಲಿ ಒಂದು ವರ್ಷದ ತನಕ ವಿದ್ಯಾಭ್ಯಾಸ ಪಡೆದ ಎಂ ಎನ್ ಸಾಯನ್ಸ್ ಕಾಲೇಜಿನ ಪ್ರಿನ್ಸಿಪಾಲ್ ಜನ್ಮ ದಿನಾಂಕದಲ್ಲಿರುವ ವ್ಯತ್ಯಾಸಕ್ಕೆ ಕಾಲೇಜಿನ ಸಿಬ್ಬಂದಿಯನ್ನುದೂರಿದ್ದಾರೆ. ‘‘ದಾಖಲೆಗಳು ಹಳೆಯದ್ದಾಗಿದ್ದರಿಂದ ಹಾಗೂ ಕೈಬರಹದಲ್ಲಿದ್ದುದರಿಂದ ಅದನ್ನು ಮತ್ತೆ ತಯಾರಿಸಿದ ಸಿಬ್ಬಂದಿ ತಪ್ಪು ಮಾಡಿರಬಹುದು,’’ಎಂದಿದ್ದಾರೆ.
ಜೋಶಿಯವರ ಪ್ರಕಾರ ಬಿ ಎನ್ ಸ್ಕೂಲ್ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿಕೂಡ ಸೆಪ್ಟೆಂಬರ್ 17,1950 ಇದೆಎಂದಿದ್ದಾರೆ. ಆದರೆ ವಾಸ್ತವವಾಗಿ ಬಿ ಎನ್ ದಾಖಲೆಗಳಲ್ಲಿಮೋದಿಯವರ ಜನ್ಮ ದಿನಾಂಕ ಆಗಸ್ಟ್ 29, 1949 ಎಂದಿದೆ.
ಪ್ರಧಾನಿಯ ಸಹೋದರ ಪ್ರಹ್ಲಾದ ಮೋದಿಯವರು ಕೂಡ ನರೇಂದ್ರ ಮೋದಿಯವರ ಜನ್ಮ ದಿನಾಂಕ ಸೆಪ್ಟೆಂಬರ್ 17,1950 ಎಂದು ಹೇಳುತ್ತಾರೆ.
ಈ ಹಿಂದೆಪ್ರಧಾನಿ ಕಾರ್ಯಾಲಯ, ಚುನಾವಣಾ ಆಯೋಗ ಹಾಗ ದೆಹಲಿ ವಿಶ್ವವಿದ್ಯಾಲಯ ಮೋದಿಯ ಶೈಕ್ಷಣಿಕ ಅರ್ಹತೆಯ ಬಗ್ಗೆವಿವರಗಳನ್ನು ಬಹಿರಂಗ ಪಡಿಸಲು ಒಪ್ಪಿರಲಿಲ್ಲ.
ಕಳೆದ ವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯಂತೆ ಮುಖ್ಯ ಚುನಾವಣಾಆಯುಕ್ತರುಗುಜರಾತ್ ಹಾಗೂ ದೆಹಲಿ ವಿಶ್ವವಿದ್ಯಾಲಯಗಳಿಗೆ ಮೋದಿಯವರಶೈಕ್ಷಣಿಕಅರ್ಹತೆ ಬಹಿರಂಗ ಪಡಿಸಲು ಹೇಳಿದ್ದರು.