ರಾಹುಲ್,ಅಥವಾ ಪ್ರಿಯಾಂಕರನ್ನು ಉ.ಪ್ರ ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿಸಲು ಬಯಸುತ್ತಿರುವ ಪ್ರಶಾಂತ್ ಕಿಶೋರ್
ಉತ್ತರ ಪ್ರದೇಶ. ಮೇ 2:ಉತ್ತರ ಪ್ರದೇಶದಲ್ಲಿ ಕಳೆದು ಹೋಗಿರುವ ರಾಜಕೀಯ ಯಶಸ್ಸನ್ನು ಮತ್ತೆ ಪಡೆದುಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಅಥವಾ ರಾಹುಲ್ ಗಾಂಧಿಯನ್ನು ಚುನಾವಣಾ ಕಣಕ್ಕಿಳಿಸುವ ಚಿಂತನೆಯನ್ನು ಚುನಾವಣಾ ತಂತ್ರಗಾರಿಕೆ ನಡೆಸುತ್ತಿರುವವರು ಬಯಸಿದ್ದಾರೆ ಎಂದು ವರದಿಯಾಗಿದೆ. ಆದರೆ ಪಕ್ಷ ಈವರೆಗೂ ಈ ಕುರಿತು ಯಾವುದೇ ಸೂಚನೆಯನ್ನಯ ನೀಡಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಚುನಾವಣಾ ತಂತ್ರಗಾರಿಕೆ ರೂಪಿಸುತ್ತಿರುವ ಪ್ರಶಾಂತ್ ಕಿಶೋರ್ ಕೂಡಾ ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿಯನ್ನು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯನ್ನಾಗಿ ಹೆಸರಿಸಬೇಕೆಂಬ ಅಭಿಪ್ರಾಯದಲ್ಲಿ ಸಹಮತವನ್ನು ಹೊಂದಿದ್ದಾರೆ. ಇದರಿಂದರಾಜ್ಯದ ಬ್ರಾಹ್ಮಣರಿಗೆ ಉತ್ತಮ ಸಂದೇಶ ಹೋಗಲಿದೆ ಮತ್ತು ಅವರು ಪಕ್ಷದಲ್ಲಿ ಮತ್ತೆ ಭರವಸೆಯನ್ನು ಇರಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾದೀಕ್ಷಿತ್‌ರು ಕೂಡಾ ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ. ಅವರ ಹೆಸರ ಕುರಿತು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಪಕ್ಷದೆ ಮೂಲಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ತಂತ್ರಗಾರಿಕೆಗಳಲ್ಲಿ ಬದಲಾವಣೆ ನಡೆಯಬೇಕಿದೆ ಆದರೆ ಅದನ್ನು ಮೆ 19ರ ನಂತರವೇ ಘೋಷಿಸಲಾಗುವುದು. ಮೇ ಹತ್ತೊಂಬತ್ತಕ್ಕೆ ಅಸ್ಸಾಮ್ ಕೇರಳ ತಮಿಳ್ನಾಡು ಮತ್ತು ಪಶ್ಚಿಮ ಬಂಗಾಳ ಹಾಗು ಪಾಂಡಿಚೇರಿಯ ಫಲಿತಾಂಶ ಪ್ರಕಟಗೊಳ್ಳಲಿದೆ. ಹಾಗೆಯೇ ಉತ್ತರಪ್ರದೇಶದಲ್ಲಿ ವ್ಯಾಪಕ ಬದಲಾವಣೆ ಪ್ರಕ್ರಿಯೆಯು ನಡೆಯುತ್ತಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ವ್ಯಾಪಕ ಯಶಸ್ವಿ ತಂತ್ರಗಾರಿಕೆ ಮಾಡಿದ್ದ ಪ್ರಶಾಂತ ಕಿಶೋರ್ ಕಾಂಗ್ರೆಸ್ ನಾಯಕರ ಜೊತೆ ಉತ್ತರ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿ ಬಂದಿದ್ದಾರೆ. ಅವರಿಗೆ ಉತ್ತರ ಪ್ರದೇಶದಲ್ಲಿ ಕೇವಲ ಬ್ರಾಹ್ಮಣರು ಮಾತ್ರ ಕಾಂಗ್ರೆಸ್‌ನ್ನು ಗೆಲ್ಲಿಸಲು ಸಾಧ್ಯ ಎಂದು ಅನಿಸಿದೆಯೆಂದು ವರದಿಯಾಗಿದೆ.