ರಜನಿಕಾಂತ್ ಅಭಿನಯದ ’ಕಬಾಲಿ’ ಚಿತ್ರದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್‌;

Update: 2016-05-03 07:13 GMT

ಚೆನ್ನೈ, ಮೇ 3: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ’ಕಬಾಲಿ’ ಸಾಮಾಜಿಕ ತಾಣಗಳಲ್ಲಿ ಹಿಟ್‌ ಆಗಿದೆ.  ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ  ಎರಡು ದಿನಗಳ ಒಳಗಾಗಿ  80 ಲಕ್ಷ ಮಂದಿ ವೀಕ್ಷಿಸಿದ್ದಾರೆ.
 ಕಬಾಲಿ ಚಿತ್ರದ ಟೀಸರ್ ರವಿವಾರ 11 ಗಂಟೆಗೆ   ಬಿಡುಗಡೆಯಾಗಿತ್ತು. ಬಿಡುಗಡೆಯಾದ ಬೆನ್ನಲ್ಲೆ  ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದಾದ್ಯಂತ ವೈರಲ್ ಆಗಿದೆ. ಬಿಡುಗಡೆಯಾದ ಒಂದು ಗಂಟೆಯೊಳಗೆ ಒಂದು ಲಕ್ಷ ಲೈಕ್ ಪಡೆದು ಹೊಸ ದಾಖಲೆ ಬರೆದಿತ್ತು.
ರಜನಿ ಅಭಿನಯದ ಈ ಚಿತ್ರದಲ್ಲಿ ಕನ್ನಡದ ಕಿಶೋರ್, ರಾಧಿಕ ಆಪ್ಟೆ, ದನ್ಷಿಕ, ಕಲೈರಸನ್‌, ದಿನೇಶ್ ರವಿ  ಮತ್ತಿತರು ನಟಿಸಿದ್ದಾರೆ. ಈ ಚಿತ್ರ ಮೇ 27 ರಂದು  ಚಿತ್ರ ಮಂದಿರಗಳ ಬೆಳ್ಳಿ  ತೆರೆಯಲ್ಲಿ ಮೂಡಿ ಬರಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News