×
Ad

ಔಷಧಿಯ ಅಡ್ಡಪರಿಣಾಮ: ʼದಂಗಲ್‌ʼ ಖ್ಯಾತಿಯ ಯುವ ನಟಿ ಸುಹಾನಿ ಭಟ್ನಾಗರ್‌ ನಿಧನ

Update: 2024-02-17 16:23 IST

ಸುಹಾನಿ ಭಟ್ನಾಗರ್‌ (Photo credit: indiatoday.in)

ಹೊಸದಿಲ್ಲಿ: ಆಮಿರ್‌ ಖಾನ್‌ ಅವರ ʼದಂಗಲ್‌ʼ ಸಿನಿಮಾದಲ್ಲಿ ಬಾಲಕಿ ಬಬಿತಾ ಕುಮಾರಿ ಫೋಗಟ್‌ ಪಾತ್ರದಲ್ಲಿ ಮಿಂಚಿದ್ದ ಸುಹಾನಿ ಭಟ್ನಾಗರ್‌ ತಮ್ಮ 19ನೇ ವಯಸ್ಸಿನಲ್ಲಿ ಇಂದು ರಾಜಧಾನಿಯಲ್ಲಿ ನಿಧನರಾಗಿದ್ದಾರೆ.

ಕಾಲಿನ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಸುಹಾನಿ ಅವರಿಗೆ ಔಷಧಿಯ ಅಡ್ಡಪರಿಣಾಮದಿಂದ ಆರೋಗ್ಯ ಸಮಸ್ಯೆ ಉಲ್ಬಣಿಸಿ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಆಕೆ ಕೆಲ ಸಮಯದಿಂದ ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಂಗಲ್‌ ಸಿನಿಮಾದ ನಂತರ ಆಕೆ ಕೆಲವೊಂದು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದರು. 2019ರಲ್ಲಿ ಸುಹಾನಿ ತಮ್ಮ ಶಿಕ್ಷಣದತ್ತ ಗಮನಹರಿಸಲು ನಟನೆಯಿಂದ ವಿರಾಮ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News