ಗಾಯಕಿ ಮಲೈಕಾ ರಜಪೂತ್ ಅನುಮಾನಾಸ್ಪದ ಸಾವು
Update: 2024-02-14 16:24 IST
ಮಲೈಕಾ ರಜಪೂತ್ (Photo source: PTI)
ಸುಲ್ತಾನ್‌ಪುರ್ (ಉತ್ತರ ಪ್ರದೇಶ): ಗಾಯಕಿ ವಿಜಯ್ ಲಕ್ಷ್ಮಿ ಅಲಿಯಾಸ್ ಮಲೈಕಾ ರಜಪೂತ್ ಮಂಗಳವಾರ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀತಾಕುಂಡ್ ಪ್ರದೇಶದಲ್ಲಿರುವ ತಮ್ಮ ನಿವಾಸದ ಕೋಣೆಯೊಂದರಲ್ಲಿ 35 ವರ್ಷದ ಗಾಯಕಿಯು ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಶ್ರೀರಾಮ್ ಪಾಂಡೆ, ಮೇಲ್ನೋಟಕ್ಕೆ ಈ ಘಟನೆಯು ಆತ್ಮಹತ್ಯೆಯಂತೆ ಕಂಡು ಬರುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದೂ ಅವರು ಹೇಳಿದ್ದಾರೆ.