ಹಿರಿಯ ಚಿತ್ರ ನಿರ್ದೇಶಕ ಕುಮಾರ್ ಸಹಾನಿ ಇನ್ನಿಲ್ಲ

Update: 2024-02-26 03:10 GMT

ಕುಮಾರ್ ಸಹಾನಿ (Photo: Instagram/@mubiindia)

ಕೊಲ್ಕತ್ತಾ: ಅತ್ಯಂತ ಸಂಕೀರ್ಣ ಮತ್ತು ಅಪರೂಪದ ಚಿತ್ರಗಳಾದ ಮಾಯಾ ದರ್ಪಣ, ತರಂಗ, ಖಾಯಲ್ ಗಾಥಾ, ಚಾರ್ ಅಧ್ಯಾಯ್ ಮೂಲಕ ಭಾರತ ಚಿತ್ರರಂಗವನ್ನು ಸಮೃದ್ಧಗೊಳಿಸಿದ ಹಿರಿಯ ನಿರ್ದೇಶಕ ಶನಿವಾರ ರಾತ್ರಿ ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು.

ಬೌದ್ಧಿಕವಾಗಿ ಹಾಗೂ ತಾಂತ್ರಿಕವಾಗಿ ಈ ಕಲಾಮಾಧ್ಯಮದ ಮಾಸ್ಟರ್ ಎನಿಸಿಕೊಂಡಿದ್ದ ಸಹಾನಿಯವರ ಸಿನಿಮಾ ದೃಷ್ಟಿ ಅತ್ಯಂತ ಪರಿಶುದ್ಧವಾಗಿತ್ತು.

"ಅವರ ಚಿತ್ರಗಳು ಲೇಬಲ್ ಗಳನ್ನು ಧಿಕ್ಕರಿಸುವಂಥವು. ಅವರ ಕಲೆ ಮತ್ತು ಸೌಂದರ್ಯಶಾಸ್ತ್ರದ ಜಗತ್ತು ಅನಂತವಾಗಿತ್ತು. ಅದಕ್ಕೆ ಎಲ್ಲೆ ಕೂಡಾ ಇರಲಿಲ್ಲ. ಚಿತ್ರ ನಿರ್ಮಾಪಕರಾಗಿ ಅವರ ಕಲಾತ್ಮಕ ನಿಷ್ಠೆಯಲ್ಲಿ ಯಾವ ರಾಜಿಯೂ ಇರಲಿಲ್ಲ. ಅವರು ಸಮಯಕ್ಕಿಂತ ಸದಾ ಮುಂದಿದ್ದರು" ಎಂದು ಖಾಯಲ್ ಗಾಥಾ (1988) ಮತ್ತು ಕಸ್ಬಾ (1990) ಚಿತ್ರಗಳಲ್ಲಿ ಅವರ ಜತೆ ಕೆಲಸ ಮಾಡಿದ್ದ ನಟ ಮಿತಾ ವಸಿಷ್ಠ ಬಣ್ಣಿಸಿದ್ದಾರೆ.

"ಸೈದ್ಧಾಂತಿಕವಾಗಿಯೂ ಅವರು ಅಪ್ರತಿಮರು. ಅವರ ಚಿತ್ರಗಳಲ್ಲಿ ಪ್ರಲಾಪ ಇತ್ತು. ಆದರೆ ಅದು ಕೂಡಾ ಬಹುತೇಕ ಆಧ್ಯಾತ್ಮಿಕವಾಗಿತ್ತು" ಎಂದು ಚಿತ್ರ ನಿರ್ಮಾಪಕ ಸುಧೀರ್ ಮಿಶ್ರಾ ಹೇಳಿದ್ದಾರೆ.

ಸಿಂಧೂ ನದಿ ನಾಗರೀಕತೆಯ ಪ್ರಾಥಮಿಕ ತಾಣವಾಗದ ಮೊಹೆಂಜೊದಾರ ಬಳಿಯ, ಪ್ರಸ್ತುತ ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಸೇರುವ ಲರ್ಕಾನಾದಲ್ಲಿ ಜನಿಸಿದ ಸಹಾನಿ, ವಿಭಜನೆ ಬಳಿಕ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಪುಣೆ ಎಫ್ಟಿಐಐನಲ್ಲಿ ರಿತ್ವಿಕ್ ಘಾಟಕ್ ಅವರಿಂದ ಚಿತ್ರರಂಗದ ತರಬೇತಿ ಪಡೆದರು. ಅಂತರ್ಶಿಸ್ತೀಯ ಅಧ್ಯಯನದ ಪಿತಾಮಹ ಎನಿಸಿದ ಡಿ.ಡಿ.ಕೊಸಂಬಿಯವರ ಬಳಿಯೂ ಕಲಿತಿದ್ದರು. ಫ್ರಾನ್ಸ್ನಲ್ಲಿ ಸಿನಿಮಾ ಕ್ಷೇತ್ರದ ಬಗೆಗಿನ ಅಧ್ಯಯನ ವೇಳೆ ರಾಬರ್ಡ್ ಬ್ರೇಸನ್ ಅವರಿಂದ ಮಾರ್ಗದರ್ಶನ ಪಡೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News