"ದಿ ಕೇರಳ ಸ್ಟೋರಿ' ಚಲನಚಿತ್ರ ಪ್ರಸಾರ ಮಾಡುವ ತನ್ನ ನಿರ್ಧಾರವನ್ನು ದೂರದರ್ಶನ ಹಿಂಪಡೆಯಬೇಕು: ಪಿಣರಾಯಿ ವಿಜಯನ್

Update: 2024-04-05 09:47 GMT

ತಿರುವನಂತಪುರಂ: 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ಪ್ರಸಾರ ಮಾಡುವ ತನ್ನ ನಿರ್ಧಾರವನ್ನು ಸರಕಾರಿ ಸ್ವಾಮ್ಯದ ದೂರದರ್ಶನವು ಹಿಂಪಡೆಯಬೇಕು ಎಂದು ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ಈ ಚಿತ್ರದ ಪ್ರಸಾರದಿಂದ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಕೋಮು ಪ್ರಕ್ಷುಬ್ಧತೆ ಉಂಟಾಗುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಸಿದ್ದಾರೆ‌.

ಸುದೀಪ್ತೊ ಸೇನ್ ನಿರ್ದೇಶಿಸಿರುವ ಈ ಚಿತ್ರವು ಮೇ 5ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕೇರಳ ಮಹಿಳೆಯರನ್ನು ಮತಾಂತರಗೊಳಿಸಿ, ಅವರನ್ನು ಉಗ್ರಗಾಮಿ ಗುಂಪಿಗೆ ಹೇಗೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಚಿತ್ರ ನಿರ್ಮಾಪಕರು ಆರಂಭದಲ್ಲಿ ಕೇರಳದ 32,000 ಮಹಿಳೆಯರು ಇಸ್ಲಾಮಿಕ್ ಸ್ಟೇಟ್‌ಗೆ ಸೇರ್ಪಡೆಯಾಗಿದ್ದಾರೆ ಎಂದು ಪ್ರತಿಪಾದಿಸಿದ್ದರು. ಆದರೆ, ಈ ಕುರಿತು ಸಾಕ್ಷ್ಯಾಧಾರ ಒದಗಿಸುವಂತೆ ಕೇಳಿದಾಗ, ತಮ್ಮ ಚಿತ್ರದ ಟ್ರೇಲರ್ ಅನ್ನು ಬದಲಿಸಿದ್ದ ಚಿತ್ರ ತಂಡವು, "ಈ ಚಿತ್ರವು ಮೂವರು ಯುವತಿಯರ ನೈಜ ಕತೆಯನ್ನು ಒಳಗೊಂಡಿದೆ" ಎಂದು ಹೇಳಿಕೊಂಡಿತ್ತು.

ಎಪ್ರಿಲ್ 5ರಂದು 'ದಿ ಕೇರಳ ಸ್ಟೋರಿ'ಯನ್ನು ಪ್ರಸಾರ ಮಾಡುವುದಾಗಿ ಇದಕ್ಕೂ ದೂರದರ್ಶನ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News