ಆಮಿರ್ ಖಾನ್ ನೂತನ ಬೈಕ್‌ನಲ್ಲಿ ಐಎನ್‌ಎಸ್ ವಿಕ್ರಾಂತ್‌ನ ಲೋಹ
ಮುಂಬೈ,ಮೇ 3: ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಅವರು ಭಾರತದ ಪ್ರಪ್ರಥಮ ವಿಮಾನ ವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನ ಲೋಹವನ್ನೊಳಗೊಂಡಿರುವ 150 ಸಿಸಿಯ ಬಜಾಜ್ ವಿ15ನ ಬೈಕ್‌ನ ಹೆಮ್ಮೆಯ ಮಾಲಿಕರಾಗಿದ್ದಾರೆ.
ಸಾಮಾಜಿಕ ಮತ್ತು ರಾಷ್ಟ್ರೀಯ ಹೋರಾಟಗಳ ಬಗ್ಗೆ ಕಳಕಳಿ ಹೊಂದಿರುವ ಆಮಿರ್ ನೂತನ ಬಜಾಜ್ ಬೈಕ್ ಐಎನ್‌ಎಸ್ ವಿಕ್ರಾಂತ್‌ನ ಲೋಹವನ್ನು ಹೊಂದಿದೆ ಎಂದು ತಿಳಿದಾಗ ಅದನ್ನು ಖರೀದಿಸಲು ಉತ್ಸುಕರಾಗಿದ್ದರು.
ವಿ15 ವಿಶೇಷ ಬೈಕ್ ಆಗಿದೆ ಮತ್ತು ನಾನದನ್ನು ಬೇರೆ ಯಾವುದರೊಂದಿಗೂ ಹೋಲಿಸಲು ಬಯಸುವುದಿಲ್ಲ. ಅದು ತನ್ನೊಳಗೆ ಇತಿಹಾಸದ ತುಣುಕನ್ನು ಹೊಂದಿದೆ ಎಂದ ಅವರು, ದಶಕಗಳ ಕಾಲ ಭಾರತದ ಮಿಲಿಟರಿ ಹೆಮ್ಮೆಯಾಗಿದ್ದ ಐಎನ್‌ಎಸ್ ವಿಕ್ರಾಂತ್‌ನ ಲೋಹದ ತುಣುಕಿನ ಮಾಲಿಕನಾಗುವುದು ನನ್ನ ಪಾಲಿಗೆ ತುಂಬ ಹೆಮ್ಮೆಯದಾಗಿದೆ ಎಂದು ಆಮಿರ್ ಹೇಳಿಕೆಯೊಂದರಲ್ಲಿ ತಿಳಿಸಿದರು.
ಆಮಿರ್‌ಗಾಗಿ ತಯಾರಿಸಲಾಗಿರುವ ನೂತನ ವಿ15ನ ಪೆಟ್ರೋಲ್ ಟ್ಯಾಂಕಿನ ಮೇಲೆ ಅವರ ಹೆಸರಿನ ಆರಂಭದ ಅಕ್ಷರ ‘ಎ’ಯನ್ನು ಉಬ್ಬು ವಿನ್ಯಾಸದಲ್ಲಿ ಮೂಡಿಸಲಾಗಿದ್ದು, ಆಸನದ ಹಿಂಭಾಗದಲ್ಲಿ ‘ಛೋಟೆಲಾಲ್’ ಎಂದು ಬರೆಯಲಾಗಿದೆ.
ಐಎನ್‌ಎಸ್ ವಿಕ್ರಾಂತ್‌ನ್ನು ದಶಕಗಳ ಸ್ಮರಣೀಯ ಸೇವೆಯ ಬಳಿಕ 1997 ಜನವರಿಯಲ್ಲಿ ನಿವೃತ್ತಗೊಳಿಸಲಾಗಿತ್ತು.