ಮುಸ್ಲಿಮರು ಭಯೋತ್ಪಾದಕರಾಗಿರಬಹುದು, ಹಾಗಾಗಿ ಬೇಡ ಎಂದ 'ಸೋನಿ ನಿರ್ದೇಶಕಿ '
ಹೊಸದಿಲ್ಲಿ, ಮೇ 4: ತಮ್ಮ ವಾಹಿನಿಯ ಮುಸ್ಲಿಂ ಸಮುದಾಯದವರನ್ನು ರೂಪದರ್ಶಿಗಳಾಗಿ ನೇಮಿಸಿಕೊಳ್ಳುವುದಿಲ್ಲ, ಅವರು ಭಯೋತ್ಪಾದಕರಾಗಿರಬಹುದೆಂಬ ಅಂಜಿಕೆ ತಮಗಿದೆಯೆಂದು ಸೋನಿ ಮ್ಯೂಸಿಕ್ ಎಂಟರ್ಟೈನ್‌ಮೆಂಟ್‌ನ ಪ್ರತಿಭಾ ನಿರ್ದೇಶಕ ಹೇಳುವುದರೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆ ‘ಫೇಸ್‌ಬುಕ್’ ಬುಧವಾರ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಯಿತು.
ಬಿಜೆಪಿ ಸಂಸದ ಡಾ.ಸುಬ್ರಹ್ಮಣ್ಯನ್ ಸ್ವಾಮಿಯವರ ವಿಡಂನ ಖಾತೆ ಮೊದಲಿಗೆ ಈ ಸಂಭಾಷಣೆಯನ್ನು ಶೇರ್ ಮಾಡಿದೆ. ಖಾರೆ 2.5ಲಕ್ಷಕ್ಕೂ ಹೆಚ್ಚಿನ ಲೈಕ್‌ಗಳನ್ನು ಪಡೆದಿದೆ.
ಸಾಮಾಜಿಕ ಮಾಧ್ಯಮ ವೇದಿಕಯಲ್ಲಿ ಗಮನಾರ್ಹ ಟೀಕೆಗಳನ್ನೆದುರಿಸಿದ ರಾಧಿಕಾ ಸೈನಿ, ತನ್ನ ಖಾತೆಯನ್ನು ಮುಸ್ಲಿಂ ಸಮುದಾಯದ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆಂದು ಬಳಿಕ ಸ್ಪಷ್ಟೀಕರಣ ನೀಡಿದ್ದಾರೆ.
ಅರ್ಜಿದಾರನು ಖಾಸಗಿ ಸಂದೇಶದ ಮೂಲಕ ಫೇಸ್‌ಬುಕ್‌ನಲ್ಲಿ ಸಂಪರ್ಕಿಸಿ ‘‘ಹಲೋ ಮ್ಯಾಡಂ. ಶೂಟ್‌ಗಾಗಿ ರೂಪದರ್ಶಿಗಳು ಬೇಕಾಗಿದ್ದಾರೆಂಬ ಪೋಸ್ಟ್ ಒಂದನ್ನು ಓದಿ, ಆ ಬಗ್ಗೆ ಆಸಕ್ತನಾಗಿದ್ದೇನೆ’’ ಎಂದಿದ್ದರು.
ಸೋನಿ ಮ್ಯೂಸಿಕ್ ಎಂಟರ್ಟೈನ್‌ಮೆಂಟ್‌ನ ಸಹಾಯಕ ಪ್ರತಿಭಾ ಶೋಧ ನಿರ್ದೇಶಕಿ ಎಂಬ ಪದನಾಮ ಹೊಂದಿರುವ ಶೈನಿ, ‘‘ನಮಗೆ ಮುಸ್ಲಿಮರು ಬೇಕಾಗಿಲ್ಲಸ’’ ಎಂದುತ್ತರಿಸಿದ್ದರು.
ಅರ್ಜಿದಾರನು ಅದಕ್ಕೆ ನಿರ್ದಿಷ್ಟ ಕಾರಣವೇನೆಂದು ಕೇಳಿದಾಗ, ಏಕೆಂದರೆ ಅವರು ಭಯೋತ್ಪಾದಕರಾಗಲೂ ಬಹುದೆಂದು ಅವರು ಹೇಳಿದ್ದರು.
ಸಾಮಾಜಿಕ ಮಾಧ್ಯಮ ಬಳಕೆದಾರರು ತಡಮಾಡದೆ ಈ ಸಂಭಾಷಣೆಯನ್ನು ಶೇರ್ ಮಾಡಲಾರಂಭಿಸಿದರು. ಅದರಿಂದಾಗಿ ಶೈನಿ ಸ್ಪಷ್ಟೀಕರಣವೊಂದನ್ನು ಕೊಡಬೇಕಾಯಿತು.
ಕೆಲವು ಮುಸ್ಲಿಂ ಸಮುದಾಯದ ಹ್ಯಾಕರ್‌ಗಳು ತನ್ನ ಐಡಿಯನ್ನು ಹ್ಯಾಕ್ ಮಾಡಿದ್ದಾರೆ. ಹಾಗೂ ಈಗ ತನ್ನ ಐಡಿಯ ಮೂಲಕ ಆಟವಾಡುತ್ತಿದ್ದಾರೆಂದು ಅವರ ಬರೆದಿದ್ದಾರೆ.
ಆದರೆ, ಅವರು ಸ್ಪಷ್ಟೀಕರಣವನ್ನು ಪೋಸ್ಟ್ ಮಾಡುವ ಮೊದಲೇ, ನಿಗೂಢ ಕಾರಣಗಳಿಗಾಗಿ ಫೇಸ್‌ಬುಕ್‌ನಲ್ಲಿ ತನ್ನ ಪದನಾಮವನ್ನು ಬದಲಿಸಿದ್ದಾರೆ.
ಅವರ ಹೊಸ ಪದನಾಮ ‘ಸ್ವಉದ್ಯೋಗಿ’ ಎಂದು ಅವರನ್ನು ವಿವರಿಸಿದೆ. ಸೋನಿ ಎಂಟರ್ಟೈನ್‌ಮೆಂಟ್ ತನ್ನ ಹಿರಿಯ ಉದ್ಯೋಗಿಗಳಲ್ಲೊಬ್ಬರೆಂದು ಪ್ರತಿಪಾದಿಸಲ್ಪಟ್ಟಿರುವ ವ್ಯಕ್ತಿಯೋರ್ವಳು ಮಾಡಿರುವ ಜನಾಂಗೀಯ ಟೀಕೆಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.