ಆಡು ಕುರಿ ಸಾಕಣೆದಾರರ ಸಹಕಾರ ಮಹಾಮಂಡಳ

Update: 2016-05-04 18:11 GMT

ಕೃಷಿಗೆ ಕೈ ಹಚ್ಚಿದವ ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಹೊತ್ತಿನಲ್ಲಿ ವ್ಯವಸಾಯದ ಅವಿಭಾಜ್ಯ ಅಂಗವಾಗಿರುವ ಆಡು-ಕುರಿ ಸಾಕಣೆ ಬಗ್ಗೆ ಗಮನ ಸೆಳೆಯುವ ಸ್ಥಿತಿ ಬಂದಿರುವುದು ವಿಪರ್ಯಾಸ.

 ನೀವು ನೋಡಿರಬಹುದು. ಆಡು ಕುರಿಗಳು ಬರಗಾಲದ ಬೆಂಗಾಡುಗಳಲ್ಲಿ, ಗುಡ್ಡ, ಬೆಟ್ಟ, ದಿಣ್ಣೆಗಳ ಬಂಜರು ಭೂಮಿಯಲ್ಲಿ ಮೇಯ್ದುಕೊಂಡು ಪ್ರಕೃತಿಯ ಕನಿಷ್ಠ ಬಳಕೆಯಿಂದ, ಸರಕಾರದ ಯಾವ ಸೌಲಭ್ಯಗಳ ನಿರೀಕ್ಷೆಯೂ ಇಲ್ಲದೆ ಮಾನವನ ನಾಗರಿಕತೆಯ ಉಗಮದೊಂದಿಗೆ ಬೆಳೆದುಬಂದ ಸಾಕುಪ್ರಾಣಿಗಳು. ನೀರಾವರಿ, ರಾಸಾಯನಿಕ ಗೊಬ್ಬರ, ಔಷ, ಸಬ್ಸಿಡಿ- ಯಾವುದೊಂದು ಬೇಡದ ಆಡು-ಕುರಿಗಳು ತಳ ಸಮುದಾಯಗಳ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿವೆ. ತ್ತೊಂಬತ್ತಾರು ಲಕ್ಷ ಕುರಿಗಳು, ನಲವತ್ತೆಂಟು ಲಕ್ಷ ಆಡುಗಳು ಇಂದು ಕರ್ನಾಟಕದಲ್ಲಿ ಓಡಾಡಿಕೊಂಡು ಮೇಯುತ್ತಿವೆ. ರಾಜ್ಯದ 747 ಹೋಬಳಿಗಳಲ್ಲಿ 101 ಹೋಬಳಿಗಳನ್ನು ಬಿಟ್ಟರೆ 646 ಹೋಬಳಿಗಳಲ್ಲಿ ಕನಿಷ್ಠ 15,000 ಕ್ಕಿಂತ ಹೆಚ್ಚು ಆಡು-ಕುರಿಗಳಿವೆ. ಒಟ್ಟು 146 ಕುರಿ ಸಂತೆಗಳು ಕರ್ನಾಟಕದ 23 ಜಿಲ್ಲೆಗಳಲ್ಲಿ ವಾರಕ್ಕೊಮ್ಮೆ ಕೂಡುತ್ತಿವೆ. ಆ ವಾರದ ಸಂತೆಗಳಲ್ಲಿ ಸರಿಸುಮಾರು 2 ಲಕ್ಷ ಕುರಿ ಮೇಕೆಗಳು ಕೈ ಬದಲಾಗುತ್ತಿವೆ.

ಇಂತಹ ಆಗಾಧ ಆರ್ಥಿಕಶಕ್ತಿ ಸಂಪನ್ಮೂಲಗಳನ್ನು ಕಂಡ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಗಣಿಗಾರಿಕೆ ವಿರೋ ಆಂದೋಲನದಲ್ಲಿ ಹೇಳಿದ ಮಾತು ಇಲ್ಲಿ ಮುಖ್ಯ: ಒಂದು ವರ್ಷಕ್ಕೆ ಒಂದು ಆಡು ಅಥವಾ ಕುರಿ ಕರ್ನಾಟಕದ ಆರ್ಥಿಕತೆಗೆ 16,000 ರೂ.ಗಳನ್ನು ಅವುಗಳ ಮಾಂಸ, ಚರ್ಮ. ಉಣ್ಣೆ, ಹಾಲು, ಗೊಬ್ಬರ, ಮರಿಗಳ ರೂಪದಲ್ಲಿ ನೀಡುತ್ತಾ ಬಂದಿವೆ. ಪರಿಸರಪರ, ಪರ್ಯಾಯ ಅಭಿವೃದ್ಧಿ ಮಾದರಿಯನ್ನು ಆಡು-ಕುರಿ ಸಾಕಣೆಯಲ್ಲಿ ನಾವು ಕಂಡುಕೊಳ್ಳಬಹುದು ಎಂದಿದ್ದರು. ಆದರೆ ಇತ್ತೀಚಿನ ಅಭಿವೃದ್ಧಿ ಮಾದರಿಗಳು ಈ ಕಡೆ ನೋಡದೆ ಕುರಿ-ಆಡು ವಲಯವನ್ನು ದಿವ್ಯ ನಿರ್ಲಕ್ಷ್ಯಕ್ಕೆ ಈಡುಮಾಡಿವೆ. ಕಾಡು-ಮೇಡು, ಕೆರೆ-ಕುಂಟೆ, ಗೋಮಾಳ ಎಲ್ಲವೂ ಬಲಿಷ್ಠರಿಗೆ ಬಲಿಯಾಗಿವೆ. ಚಳ್ಳಕೆರೆ ಸುತ್ತಮುತ್ತಲಿನ ಆಡು-ಕುರಿಗಳಿಗೆ ಸೀಮಿತವಾಗಿದ್ದ ಸಾವಿರಾರು ಎಕರೆಗಳ ಹುಲ್ಲುಗಾವಲು, ಆಧುನಿಕ ಅಭಿವೃದ್ಧಿ ಮಾಂತ್ರಿಕರಿಂದ ‘ವೇಸ್ಟ್ ಲ್ಯಾಂಡ್’ ಎನ್ನಿಸಿಕೊಂಡು ರಕ್ಷಣಾ ತಂತ್ರಜ್ಞಾನ ಸಂಶೋಧನಾ ಸಂಸ್ಥೆಗಳ ಪಾಲಾಗಿದೆ.

ಮತ್ತೆ ಆಡು-ಕುರಿ ಕಾಯುವವನು ಮಧ್ಯವರ್ತಿ ಕೈಯಲ್ಲಿ ಸಿಕ್ಕು ಎಲ್ಲರಂತೆ ನರಳುತ್ತಿದ್ದಾನೆ. ಇಡೀ ಕರ್ನಾಟಕದಲ್ಲಿ ಒಂದೇ ಒಂದು ಚರ್ಮ ಸಂಸ್ಕರಣಾ ಘಟಕ ಇಲ್ಲದೆ ಚರ್ಮ ಬಿಸಾಕಿದ ರೇಟಿಗೆ ಮಾರಾಟವಾಗುತ್ತಿದೆ. ವೈಜ್ಞಾನಿಕ ನೆಲೆಯಲ್ಲಿ ಆಡು-ಕುರಿಗಳ ಮಾರಾಟ ವ್ಯವಸ್ಥೆಯಿಲ್ಲ. ಆರೋಗ್ಯಕರ ಮಾಂಸ ಟೌನ್, ಸಿಟಿಗಳ ಗ್ರಾಹಕರಿಗೂ ಸಿಗುತ್ತಿಲ್ಲ. ಉಣ್ಣೆ ಕೇಳುವವರೇ ಇಲ್ಲ. ತುಪ್ಪಟ ಕತ್ತರಿಸುವುದಕ್ಕೂ ದುಡ್ಡು ತೆರಬೇಕಾಗಿದೆ. ಇನ್ನು ಆರೋಗ್ಯ ಸೇವೆ, ರೋಗನಿಯಂತ್ರಣ ಕ್ರಮಗಳು, ಆಡು-ಕುರಿಗಳನ್ನು ಉಳಿಸುವ ಕೆಲಸದಲ್ಲಿ ಸಾಕಷ್ಟು ಒದಗಿಬರುತ್ತಿಲ್ಲ. ಇಲ್ಲಿಯವರೆಗೆ ಪಶುವೈದ್ಯ ಜ್ಞಾನ ಕುರಿ ಆಡು ಸಾಕಣೆಯತ್ತ ಅದರಲ್ಲೂ ಆರೊಗ್ಯ ಸೇವೆ, ರೋಗನಿಯಂತ್ರಣ ಕ್ರಮಗಳ ಸುತ್ತ ಗಿರಿಕಿ ಹೊಡೆಯುತ್ತಿದೆ.

ಆಡು-ಕುರಿಗಳ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆ ಪಶುಪಾಲನಾ ಜ್ಞಾನ ಶಾಖೆಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಎಲ್ಲ್ಲ ಹಿನ್ನೆಲೆಯಲ್ಲಿ ಈಗ ಅಸ್ತಿತ್ವದಲ್ಲಿದ್ದು ಕಾರ್ಯ ನಿರ್ವಹಿಸುತ್ತಿರುವ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸರಕಾರಿ ವ್ಯವಸ್ಥೆಯ ಅಡಿಯಲ್ಲಿರುವ ಕಾರಣಕ್ಕೆ ಈ ಎಲ್ಲ್ಲ ಸಮಸ್ಯೆಗಳನ್ನು ಸಮಗ್ರವಾಗಿ ನೋಡಲು, ಗ್ರಹಿಸಲು, ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಆಡು-ಕುರಿ ಸಾಕಣೆಗಾರರ ನಾಯಕತ್ವದ ಸಹಕಾರ ವ್ಯವಸ್ಥೆ ಮಾತ್ರ ಇದಕ್ಕೆ ಪರಿಹಾರ. ಈ ದಿಕ್ಕಿನಲ್ಲಿ ನಮಗೆ ಹೊಳೆಯುತ್ತಿರುವ ಉದಾಹರಣೆ ಒಂದೇ. ಅದು ಕರ್ನಾಟಕ ಹಾಲು ಒಕ್ಕೂಟ. ಯಾಕೆಂದರೆ ಇಂದು ಈ ಸಂಸ್ಥೆ ಏಳು ಸಾವಿರ ಕೋಟಿ ವಾರ್ಷಿಕ ವಹಿವಾಟು ನಡೆಸುತ್ತಿದ್ದು ಜಾಗತೀಕರಣದ ಈ ಕಾಲದಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ಭರವಸೆಯ ಬೆಳಕಾಗಿದೆ. ಹಾಲು ಒಕ್ಕೂಟಕ್ಕೆ ಹೋಲಿಸಿ ನೋಡಿದರೆ ಕುರಿ-ಆಡು ವಲಯದ ಅಪಾರ ಶಕ್ತಿ ಅರ್ಥವಾಗುತ್ತದೆ. ಸರಿಸುಮಾರು ಇಪ್ಪತ್ತು ಸಾವಿರ ಕೋಟಿ ರೂಪಾಯಿಗಳ ಆರ್ಥಿಕತೆಯ ಶಕ್ತಿ ಕುರಿ ಆಡು ವಲಯಕ್ಕಿದೆ ಎಂಬುದು ತಜ್ಞರ ಅಭಿಪ್ರಾಯ. ಹಾಲು ಎಂಬ ಒಂದೇ ಉತ್ಪನ್ನವನ್ನು ಸಂಘಟಿಸಿದೆ ಕೆಎಂಎ್. ಇಲ್ಲಿ ಹಾಲು, ಮಾಂಸ, ಚರ್ಮ, ಉಣ್ಣೆ, ಗೊಬ್ಬರ ಎಂಬ ಐದು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟದ ಸಾಧ್ಯತೆಗಳು ಆಗಾಧವಾಗಿವೆ.

ಹದಿನೈದು ಸಾವಿರ ಆಡು-ಕುರಿಗಳ ಸಾಕಣೆದಾರರ ಒಂದು ಪ್ರಾಥಮಿಕ ಸಹಕಾರ ಸಂಘ ಸ್ಥಾಪಿಸಿ ಅದು ಈ ಸಹಕಾರಿ ಆಂದೋಲನದ ಮೂಲ ಘಟಕವಾಗಬೇಕು. ತಜ್ಞರ ಪ್ರಕಾರ ಹದಿನೈದು ಸಾವಿರ ಆಡು ಕುರಿಗಳ ಉತ್ಪನ್ನಗಳ ಮಾರಾಟದಿಂದಲೇ ಸಂಘ ಸ್ವಾವಲಂಬನೆ ಸಾಸುತ್ತದೆ. ಈಗಿರುವ ಬೇರೆ ಸಹಕಾರ ಸಂಘಗಳ ರೀತಿ ಯಾವಾಗಲೂ ಸರಕಾರದ ಕಡೆಗೆ ಮಖಮಾಡಿ ನಿಂತಿರುವುದಿಲ್ಲ. ಯಾವಾಗ ಮೂಲ ಸಹಕಾರ ಸಂಘ ಸ್ವಾವಲಂಬನೆ ಸಾಸುತ್ತದೋ ಆಗ ಸರಕಾರದ ಹಸ್ತಕ್ಷೇಪ ಹೆಚ್ಚಿನ ಮಟ್ಟದಲ್ಲಿ ಇರುವುದಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಹಲವಾರು ಸಂಸ್ಥೆಗಳು ಸಹಕಾರಕ್ಕೆ ಧಾವಿಸಿ ಬರುತ್ತವೆ.
ನಂತರ ಜಿಲ್ಲಾ ಮಟ್ಟದಲ್ಲಿ ಆಡು ಕುರಿ ವಲಯಗಳ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟ ಸಂಬಂತ 10 ರಿಂದ 12 ಕೇಂದ್ರಗಳನ್ನು ಸ್ಥಾಪಿಸಬೇಕು. ಅಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ಮೇವು, ಮೇವಿನ ಮರಗಳ ಕುರಿತಾದ ಸಂಶೋಧನೆ, ಅಭಿವೃದ್ಧಿ, ವಿಸ್ತರಣಾ ಘಟಕಗಳು ಮುಖ್ಯವಾಗಿ ಇರಬೇಕು. ಮತ್ತೆ ಅಲ್ಲಿ ಅಂದರೆ ಜಿಲ್ಲಾ ಮಟ್ಟದಲ್ಲಿ ಈ ಕೇಂದ್ರಗಳ ಜೊತೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡಬಹುದಾದ ಪಶುಚಿಕಿತ್ಸಾ ಸಂಚಾರಿ ಘಟಕ ಮುಖ್ಯವಾದುದು. ಅಲ್ಲದೇ ತರಬೇತಿ, ವಿಸ್ತರಣೆ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳ ವಿವಿಧ ಕೇಂದ್ರಗಳು ಜಿಲ್ಲಾ ಆಡು-ಕುರಿ ಸಂಕೀರ್ಣದಲ್ಲಿ ತಲೆ ಎತ್ತಿ ನಿಲ್ಲಲಿವೆ.

  ನಂತರ ರಾಜ್ಯಮಟ್ಟದಲ್ಲಿ ಈ ಎಲ್ಲ್ಲ ಪ್ರತಿನಿಗಳನ್ನೊಳಗೊಂಡ ಆಡು-ಕುರಿ ಸಾಕಣೆದಾರರ ಸಹಕಾರಿ ಮಹಾಮಂಡಳ ಸರಕಾರಕ್ಕೆ ಪರ್ಯಾಯವಾಗಿದ್ದುಕ್ಕೊಂಡು ಕೆಲಸ ನಿರ್ವಹಿಸುತ್ತಾ ಹೋಗಬೇಕು. ಇಲ್ಲಿ ಆಡು-ಕುರಿ ವಲಯಗಳ ಅಭಿವೃದ್ಧಿಗೆ ಬೇಕಾದ ನೀತಿ ನಿರೂಪಣೆಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅಲ್ಲದೆ ಕುರಿ-ಆಡು ವಲಯಗಳ ಉತ್ಪನ್ನಗಳಿಗೆ ತನ್ನದೇ ಆದ ಬ್ರಾಂಡ್ ನಿರ್ಮಿಸಿ ಬೇರೆ ರಾಜ್ಯ, ದೇಶಗಳ ಜೊತೆ ವಾಣಿಜ್ಯ ನೀತಿಯನ್ನು ರೂಪಿಸಲಿದೆ. ಇಲ್ಲಿ ಆಧುನಿಕ ಕಾಲಕ್ಕೆ ತಕ್ಕಂತೆ ವೃತ್ತಿಪರತೆ ಮೆರೆಯಲು ವಿಷಯ ತಜ್ಞರ ಸೇವೆಯನ್ನು ಬಳಸಿಕೊಳ್ಳಲು ಚಿಂತಿಸಲಾಗಿದೆ.

ಅಂದಾಗ ಮಾತ್ರ ಈ ಕುರಿ-ಆಡು ವಲಯ ಸರಕಾರದ ಅಕಾರಿಶಾಹಿ ಬಿಗಿಹಿಡಿತದಿಂದ ಹೊರಬಂದು ನೇರವಾಗಿ ಆಡು-ಕುರಿ ಕಾಯುವವರ ನೇತೃತ್ವದಲ್ಲಿ ತನ್ನ ಅಭಿವೃದ್ಧಿ ದಿಕ್ಕನ್ನು ಕಂಡುಕೊಳ್ಳಲು, ತಾನೇ ನಿರ್ಣಯಿಸಿದ ತನ್ನ ವಿಕಾಸದ ಹೆಜ್ಜೆಗಳ ಮೇಲೆ ನಡೆಯುತ್ತಾ ಹೋಗಲು ಸಹಕಾರಿಯಾಗುತ್ತದೆ. ತಮ್ಮಲ್ಲಿರುವ ಬಹುಬೆಳೆಗಳು, ಸಿರಿಧಾನ್ಯಗಳು, ನಾಟಿತಳಿಯ ದನ-ಕರುಗಳು, ಆಡು-ಕುರಿ ಸಾಕುವ ಸಮುದಾಯಗಳನ್ನು ಆಧುನಿಕ ಕೃಷಿಯ ಕೆಟ್ಟಹೊಡೆತಗಳಿಗೆ ಸಿಲುಕಲು ಬಿಟ್ಟಿಲ್ಲ. ಈ ದೇಶಿ ಸಾವಯವ ಪರಂಪರೆಯನ್ನು ಗರ್ಭೀಕರಿಸಿಕೊಂಡ ಅಭಿವೃದ್ಧಿ ಮಾದರಿ ಆಡು-ಕುರಿ ಸಹಕಾರ ಚಳುವಳಿಯಲ್ಲಿ ಕಾಲಿಡಲು ಆರಂಭಿಸುತ್ತದೆ. ಕುರಿ-ಆಡು ಸಾಕಣೆಯಲ್ಲಿ ಜೀವಪರ ಸಂಸ್ಕೃತಿ, ಅನನ್ಯ ಜ್ಞಾನವಂತಿಕೆ, ಅಪಾರ ಆರ್ಥಿಕಶಕ್ತಿ ಅಡಗಿದೆ. ಆದ್ದರಿಂದ ಈ ಸರಕಾರ ಆಡು-ಕುರಿ ಸಾಕಣೆದಾರರ ಸಹಕಾರಿ ’ೆಡರೇಶನ್’ ಅನ್ನು ಸ್ಥಾಪಿಸುವ ನೀತಿಯನ್ನು ಈ ಸಾಲಿನ ಬಜೆಟಿನಲ್ಲಿ ಘೋಷಿಸಿರುವುದು ತಳಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಹೆಬ್ಬಾಗಿಲು ತೆರೆದಂತಾಗಿದೆ.
ಆದರೆ ಈ ಸುದ್ದಿ ನಮ್ಮ ಮಾಧ್ಯಮಗಳಲ್ಲಿ ಪರಿಣಾಮಕಾರಿಯಾಗಿ ವರದಿಯಾಗಿಲ್ಲ; ಮತ್ತೆ ಚರ್ಚೆಗೆ ಒಳಪಡುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿದೆ. ಮೊದಲಿನಿಂದಲೂ ಪಶುಪಾಲನಾ ಕ್ಷೇತ್ರ ವಿಶೇಷವಾಗಿ ಆಡು-ಕುರಿ ಕೃಷಿವಲಯ ಬಹುಪಾಲು ಧ್ವನಿ ಇಲ್ಲದ ಸಮುದಾಯಗಳ ಆರ್ಥಿಕ ಚಟುವಟಿಕೆಯಾಗಿರುವುದು ಮುಖ್ಯ ಕಾರಣ.

    ಈ ದೀರ್ಘಕಾಲಿನ ಯೋಜನೆ ತಳಸಮುದಾಯಗಳ ಅಭಿವೃ್ದ ಚರಿತ್ರೆಯಲ್ಲಿ ಮಹತ್ವ ಪಡೆದುಕೊಂಡಿದೆ. ಹೇಗೆಂದರೆ; *ಇದನ್ನು ಸಾಮಾಜಿಕ ನ್ಯಾಯವನ್ನು ಬಿತ್ತಿಬೆಳೆದ ದೇವರಾಜ್ ಅರಸುರವರ ಉಳುವವನೆ ನೆಲದೊಡೆಯ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯಂಥ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳ ಸಾಲಿನಲ್ಲಿ ಇದು ಇಂದಿನ ಹೆಜ್ಜೆ.
    *ಸಮಗ್ರ ಅಭಿವೃದ್ಧಿ ದೃಷ್ಟಿಕೋನವುಳ್ಳ ಕುರಿ ಮತ್ತು ಮೇಕೆ ಸಾಕಣೆದಾರರ ಸಹಕಾರ ಮಹಾಮಂಡಳದ ಸ್ಥಾಪನೆಯ ಪ್ರಯತ್ನ ದೇಶದಲ್ಲಿಯೇ ಮೊದಲ ಕಾರ್ಯಕ್ರಮ ಎಂದು ಹೇಳಲು ಹೆಮ್ಮೆಯೆನಿಸುತ್ತಿದೆ.
    
     *ಜಾಗತೀಕರಣದ ಸ್ಪರ್ಧಾಯುಗದಲ್ಲಿ ಆಡು ಕುರಿ ಕೃಷಿವಲಯವನ್ನು ಸಹಕಾರ ವ್ಯವಸ್ಥೆಯಡಿಯಲ್ಲಿ ಸಂಘಟಿಸುವ ಈ ಪ್ರಯತ್ನ ಕುರಿಯನ್ ಜಾರಿಗೊಳಿಸಿದ ಹಾಲಿನ ಕ್ರಾಂತಿಗೆ ಸರಿಸಮನಾಗಿ ನಿಲ್ಲುವ ಯೋಜನೆ, ಯೋಚನೆ ಈ ಕಾರ್ಯಕ್ರಮದಲ್ಲಿ ಅಡಗಿದೆ.

*ಜನರ ನಾಯಕತ್ವಕ್ಕೆ ಅಂದರೆ ಕುರಿ ಮತ್ತು ಮೇಕೆ ಸಾಕಣೆದಾರರ ಆಡಳಿತಕ್ಕೆ ನಿರ್ಲಕ್ಷಿತ ಆಡು ಕುರಿ ಕೃಷಿವಲಯವನ್ನು ಬಿಟ್ಟುಕೊಡುವ ಮೂಲಕ ಸಹಕಾರ ಆಂದೋಲನಕ್ಕೆ ಮತ್ತು ಅದರ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಟ್ಟಕೊಡುಗೆಯಾಗಿದೆ.
    
    *ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಚರ್ಚೆಗೆ ಒಳಪಡುತ್ತಿರುವ ಸಾವಯವ ಕೃಷಿ, ಸ್ವಾವಲಂಬನೆಯ ಕೃಷಿ, ಸುಸ್ಥಿರ ಕೃಷಿಗಳ ಬೀಜಮಂತ್ರ ಈ ಕಾರ್ಯಕ್ರಮದಲ್ಲಿ ಅಡಗಿದೆ.

*ಇದೊಂದು ಕರ್ನಾಟಕದ ಅತ್ಯಂತ ನಿರ್ಲಕ್ಷಿತ ಕೃಷಿವಲಯವನ್ನು ಮುಖ್ಯಧಾರೆಗೆ ತರುವ, ಆ ಮೂಲಕ ಇಡೀ ಕರ್ನಾಟಕವನ್ನು ಪುನರ್‌ಕಟ್ಟುವ ದಿಟ್ಟ, ಶಾಶ್ವತ, ದೂರದೃಷ್ಟಿಯ ಕ್ರಾಂತಿಕಾರಿ ಕ್ರಮವಾಗಿದೆ.

ಅಲ್ಲದೆ ಭವಿಷ್ಯದಲ್ಲಿ ಈ ಸಹಕಾರ ಮಂಡಳ ಹಲವು ಆಯಾಮಗಳಲ್ಲಿ ಚಾಚಿಕೊಳ್ಳುವ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಾಂದಿಯಾಗಲಿವೆ.

    * ಈಗಿರುವಂತೆ ಕುರಿ ಮತ್ತು ಮೇಕೆ ಸಾಕಣೆಯನ್ನಷ್ಟೆ ಅಲ್ಲದೇ ಇನ್ನು ಮುಂದೆ ಉತ್ಪನ್ನಗಳ ಸಂಸ್ಕರಣೆ, ವೌಲ್ಯವರ್ಧನೆ ಮತ್ತು ಮಾರಾಟಕ್ಕೆ ಆದ್ಯತೆ ನೀಡುವ ಆಯಾಮ ಹೊಂದಿದೆ.
      *ಕರ್ನಾಟಕ ರಾಜ್ಯದ 76 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ ಕುರಿ ಮತ್ತು ಮೇಕೆ ಸಾಕಣೆಯಲ್ಲಿ ತೊಡಗಿರುವ 15 ಲಕ್ಷ ಕುಟುಂಬಗಳ ಅಬ್ಯುಧಯ ಇದರಲ್ಲಿ ಅಡಗಿದೆ.

*ಕುರಿ-ಆಡು ಸಾಕಣೆದಾರರಲ್ಲದೇ ಹಾಲು, ಮಾಂಸ, ಚರ್ಮ, ಉಣ್ಣೆ ಸಂಬಂತ ಕುಶಲಕರ್ಮಿಗಳನ್ನು ಸಹಕಾರ ಮಹಾಮಂಡಳದ ಸದಸ್ಯರಾಗಿ ತಮ್ಮ ಅಭಿವೃದ್ಧ್ದಿ ನೀತಿಯನ್ನು ಇಲ್ಲಿ ಮಂಡಿಸಲಿದ್ದಾರೆ.

*ಅಲ್ಲದೆ ನಗರ ಪಟ್ಟಣದ ಗ್ರಾಹಕರಿಗೆ ಆರೋಗ್ಯಪೂರ್ಣ ಉತ್ಪನ್ನಗಳನ್ನು ಒದಗಿಸುವ ಮೂಲಕ ಅವರನ್ನು ಈ ಸಂಘಟನೆಯ ತೆಕ್ಕೆಗೆ ತರುವ ಕಾರ್ಯಕ್ರಮ ಇದಾಗಿದೆ.
    *ಕುರಿ ಮತ್ತು ಮೇಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟ ಜಾಲದಲ್ಲಿ ಕನಿಷ್ಠ ಇನ್ನೂ ಹದಿನೈದು ಲಕ್ಷ ಕುಟುಂಬಗಳಿಗೆ ಉದ್ಯೋಗ ಸೃಷ್ಟಿಸುವ ಅವಕಾಶವಿದೆ.
     
   *ಕರ್ನಾಟಕ ಹಾಲು ಒಕ್ಕೂಟ ಗ್ರಾಮೀಣ ಕರ್ನಾಟಕದಲ್ಲಿ ಹಣದ ಹರಿವು ಹೆಚ್ಚಿಸಿದಂತೆ ಈ ಸಹಕಾರ ಮಂಡಳದ ಮೂಲಕ ಕುರಿ ಮತ್ತು ಮೇಕೆ ಉತ್ಪನ್ನಗಳು ಹಳ್ಳಿಗಳಲ್ಲಿ ಸಣ್ಣ ಅತಿಸಣ್ಣ ರೈತರ, ಭೂಹೀನ ಕಾರ್ಮಿಕರ ಪಾಲಿಗೆ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿವೆ.

*ಈ ಕುರಿ ಮತ್ತು ಮೇಕೆ ಸಾಕಣೆದಾರರ ಸಹಕಾರಿ ಆಂದೋಲನದಲ್ಲಿ ಕುರಿ ಮತ್ತು ಮೇಕೆ ಸಾಕಣೆ, ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಜ್ಞಾನವನ್ನು ನಮ್ಮ ನಿರುದ್ಯೋಗಿ ಯುವಕ ಯುವತಿಯರಿಗೆ ತಲಪಿಸಿ ಅವರನ್ನು ಈ ಯೋಜನೆಯೊಳಗೆ ಉದ್ಯೋಗ ನೀಡುವ ಮೂಲಕ ಒಳಗೊಳ್ಳಲು ಹಲವಾರು ಸರ್ಟಿಫಿಕೇಟ್ ಕೋರ್ಸ್‌ಗಳು, ಡಿಪ್ಲೋಮ ಕೋರ್ಸ್‌ಗಳನ್ನು ಈ ಮಹಾಮಂಡಳದಲ್ಲಿ ಆರಂಭಿಸಲು ಯೋಜಿಸಲಾಗಿದೆ.

*ಅಲ್ಲದೆ ಈ ಸಹಕಾರಿ ಆಂದೋಲನದಲ್ಲಿ ದೇಶಿಯ ತಳಿಗಳು, ನೆಲ ಮೂಲದ ಸಾಕಣೆ ಜ್ಞಾನಪರಂಪರೆ ಮತ್ತು ತಳಸಮುದಾಯಗಳ ಕೌಶಲ್ಯಗಳಿಗೆ ಆದ್ಯತೆಕೊಟ್ಟು, ಮುನ್ನಡೆಸುವ ಆಕಾಂಕ್ಷೆಯನ್ನು ಈ ಕಾರ್ಯಕ್ರಮ ಹೊಂದಿದೆ.
    *ಬಂಜರುಭೂಮಿ, ಗೋಮಾಳ ಮತ್ತು ಅರಣ್ಯಗಳಲ್ಲಿ ಹುಲ್ಲು, ಮೇವಿನ ಮರಗಳ ಕೃಷಿ ಅರಣ್ಯವನ್ನು ಸೃಷ್ಟಿಸುವ ಒಂದು ಜನಾಂದೋಲನವನ್ನು ಸಂಘಟಿಸುವ ಮೂಲಕ ಪರಿಸರಕ್ಕೆ ದೊಡ್ಡ ಕೊಡುಗೆಯನ್ನು ಕೊಡುವ ಪ್ರಯತ್ನವನ್ನು ಇಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ

ಈ ಎಲ್ಲ್ಲ ಸಶಕ್ತ ಕಾರಣಗಳಿಂದಾಗಿ ಹಲವು ದಶಕಗಳ ನಂತರ ಕರ್ನಾಟಕ ಕಂಡ ದೀರ್ಘಕಾಲೀನ ದೂರದೃಷ್ಟ್ಠಿಯ, ವಿಷನರಿ ಯೋಜನೆ ಇದಾಗಿದೆ. 

Writer - ಡಾ.ರಘುಪತಿ. ಸಿ.ಎಸ್.

contributor

Editor - ಡಾ.ರಘುಪತಿ. ಸಿ.ಎಸ್.

contributor

Similar News