ಬೀರಬಲ್‌ನ ಕೋಲಿಗೆ ನಾವು ಏಳು ಗಂಟೆ ನಂತರ ಕೂತುಕೊಳ್ಳುವುದಿಲ್ಲ! : ರಾಜ್ಯಸಭೆಯಲ್ಲಿ ರೇಣುಕಾ ಚೌಧರಿ

Update: 2016-05-05 10:27 GMT

ಹೊಸದಿಲ್ಲಿ, ಮೇ.5: ಆಗಸ್ಟಾ ವೆಸ್ಟ್‌ಲ್ಯಾಂಡ್ ವಿವಾದ ಕುರಿತು ರಾಜ್ಯಸಭೆಯಲ್ಲಿ ಬುಧವಾರ ನಡೆದ ಚರ್ಚೆಯ ನಡುವೆ ಸುಬ್ರಮಣಿಯನ್ ಸ್ವಾಮಿ ಮತ್ತು ಕಾಂಗ್ರೆಸ್ ನಡುವೆ ಆರೋಪ- ಪ್ರತ್ಯಾರೋಪ ನಡೆಯಿತು. ಆದರೆ ಐದು ಗಂಟೆಗಿಂತ ಹೆಚ್ಚು ಸಮಯ ಚರ್ಚೆ ಸಾಗಿದಾಗ ರಕ್ಷಣಾ ಮಂತ್ರಿ ಮನೋಹರ್ ಪಾರಿಕ್ಕರ್ ಹೇಳಿಕೆ ಬೀರಬಲ್‌ನ ಕೋಲು ಎಂಬ ರೀತಿಯಲ್ಲಿ ಸಾಗತೊಡಗಿ ಸದಸ್ಯರಲ್ಲಿ ಬೋರ್ ಹೊಡೆಸಿತ್ತು.

ಪಾರಿಕ್ಕರ್ ಅಕ್ಬರ್-ಬೀರಬಲ್ ಕತೆ ಜೊತೆಗೆ ತಮ್ಮ ಮಾತನ್ನು ಆರಂಭಿಸಿದ್ದರು. ಬೀರಬಲ್ ಯಾವುದೋ ಕಳ್ಳನನ್ನು ಹಿಡಿದ ಕುರಿತು ಹೇಳತೊಡಗಿದ್ದರು. ಕೆಲವೇ ಸಮಯದಲ್ಲಿ ಅವರ ಮಾತಿನಲ್ಲಿ ಯಾರಿಗೂ ಉತ್ಸಾಹ ಉಳಿದಿರಲಿಲ್ಲ. ಭಾಷಣ ಮಾಡುತ್ತಿದ್ದಾಗ ಕಾಂಗ್ರೆಸ್ 65 ಸದಸ್ಯರಲ್ಲಿ 48 ಮಂದಿ ಉಪಸ್ಥಿತರಿದ್ದರು. ಅವರ ಕತೆ ಮುಂದುವರಿಯುತ್ತಿದ್ದಂತೆ ಸಂಖ್ಯೆಯಲ್ಲಿ ಇಳಿಮುಖವಾಗುತ್ತಾ ಹೋಗಿತ್ತು.

ಅಷ್ಟರಲ್ಲಿ ಕಾಂಗ್ರೆಸ್‌ನ ರೇಣುಕಾ ಚೌಧರಿ ಸ್ಪಷ್ಟ ಪಡಿಸಿದರು. ಹೀಗೆ ನಡೆಯಲಿಕ್ಕಿಲ್ಲ. ನಾವು ಏಳು ಗಂಟೆಯ ನಂತರ ಕೂತು ಕೊಳ್ಳುವುದಿಲ್ಲ. ಮತ್ತು ಈ ಸಮಸ್ಯೆಯ ಮಿತಿಯ ಹತ್ತು ನಿಮಿಷ ಮೊದಲು ಕಾಂಗ್ರೆಸ್ ಸದಸ್ಯರು ಸದನದಿಂದ ಹೊರ ನಡೆದರು. ರೇಣುಕಾ ಚೌಧರಿ ಮತ್ತು ಇತರ ಹನ್ನೊಂದು ಮಂದಿ ಆರುಗಂಟೆಯ ಮೊದಲೇ ಸದನದಿಂದ ಹೊರ ಹೋಗಿದ್ದರು. ಆದರೆ ಅವರು ಕಾಂಗ್ರೆಸ್‌ನ ಅಹ್ಮದ್ ಪಟೇಲ್ ಮಾತಾಡಲು ತೊಡಗಿದಾಗ ಮರಳಿ ಬಂದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News