×
Ad

ಸುಬ್ರತಾ ರಾಯ್ ಗೆ 4 ವಾರಗಳ ಪೆರೋಲ್

Update: 2016-05-06 17:06 IST

ಹೊಸದಿಲ್ಲಿ, ಮೇ 6: ಬಹುಕೋಟಿ ಹಗರಣ ಆರೋಪದಲ್ಲಿ  ಜೈಲುಪಾಲಾಗಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್  ಅವರಿಗೆ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ 4 ವಾರಗಳ ಕಾಲ ಶರತ್ತು ಬದ್ಧ ಪೆರೋಲ್  ಮೇಲೆ ಬಿಡುಗಡೆಗೆ  ಸುಪ್ರೀಂಕೋರ್ಟ್ ಆದೇಶಿಸಿದೆ. 
67ರ ಹರೆಯದ ಸುಬ್ರತಾ ರಾಯ್‌ 2014 ಮಾರ್ಚ್‌‌ನಲ್ಲಿ ಜೈಲು ಸೇರಿದ್ದರು. ಅವರ ತಾಯಿ ಛಬಿ ರಾಯ್‌ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದರು. ತಾಯಿಯ ಅಂತ್ಯಕ್ರಿಯೆ ನಡೆಸಲು ಪೆರೋಲ್‌ ಮೂಲಕ ಬಿಡುಗಡೆಗೆ ಸುಬ್ರತಾ ರಾಯ್‌ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಅವರಿಗೆ ತಾತ್ಕಾಲಿಕ ಪೆರೋಲ್ ಮಾನವೀಯ ನೆಲೆಯಲ್ಲಿ ಲಭಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News