ಕುಸಿಯುತ್ತಿರುವ ಕನ್ಹಯ್ಯ ಆರೋಗ್ಯ, ಸ್ಮ್ರತಿ ವಿರುದ್ಧ ಆಕ್ರೋಶ

Update: 2016-05-06 12:49 GMT

ನವದೆಹಲಿ : ಜೆ ಎನ್ ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಆರೋಗ್ಯ ಸ್ಥಿತಿ ಕುಸಿಯುತ್ತಿದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕ ಸಮಾಜದ ಪ್ರಮುಖ ಸದಸ್ಯರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆದು ಕೂಡಲೇ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಫೆಬ್ರವರಿ 9 ರಂದು ಆಯೋಜಿಸಲಾದ ವಿವಾದಿತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾಲಯ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕನ್ಹಯ್ಯ ಸೇರಿದಂತೆ ಕೆಲವು ವಿದ್ಯಾರ್ಥಿಗಳು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಗುರುವಾರದಂದು ಕನ್ಹಯ್ಯ ಸ್ಮತಿ ತಪ್ಪಿ ಬಿದ್ದ ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಷ್ಟ್ರಪತಿಗಳಿಗೆ ಸಲ್ಲಿಸಲಾದ ಪತ್ರಕ್ಕೆ ಸಹಿ ಹಾಕಿದವರಲ್ಲಿಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ಟ್ ಕೂಡ ಸೇರಿದ್ದುಸ್ಮತಿ ಇರಾನಿಯವರನ್ನು ಟೀಕಿಸುತ್ತಾರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಲ್ಲಿ ಸಂಸತ್ತಿನಲ್ಲಿ ಭಾರೀ ಭಾವೋದ್ವೇಗಭರಿತ ಭಾಷಣ ಮಾಡಿದ್ದ ಸಚಿವ ಈಗಜೆ ಎನ್ ಯು ವಿನಲ್ಲಿರುವ ಅವರ ‘ಮಕ್ಕಳು’ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಮೌನವಾಗಿದ್ದಾರೆ,’’ಎಂದು ಹೇಳಿದ್ದಾರೆ.

ಪ್ರಹಾರ್ (ಪೀಪಲ್ಸ್ ರೆಸಿಸ್ಟೆನ್ಸ್ ಅಗೇನ್ಸ್ಟ್ ಹೇಟ್ರೆಡ್ ಎಂಡ್ ಅಥಾರಿಟೇರಿಯನ್ ರಿಪ್ರೆಶನ್) ಎಂಬ ಹೆಸರಿನಡಿಯಲ್ಲಿ ಒಂದಾಗಿರುವ ನಾಗರಿಕರ ಒಂದು ಗುಂಪು ತನ್ನ ಪತ್ರದಲ್ಲಿ ವಿದ್ಯಾಥಿಗಳ ವಿರುದ್ಧ ಶಿಸು ್ತಕ್ರಮ ಸರಿಯಲ್ಲ ಹಾಗೂ ಅದು ದುರುದ್ದೇಶಪೂರ್ವಕ ಎಂದು ಹೇಳಿದೆ.

ಅಸಮ್ಮತಿಯ ಧ್ವನಿಗಳನ್ನು ಅಮುಕಲು ಯತ್ನಿಸುತ್ತಿರುವ ಸರಕಾರ ತನ್ನ ಯುವಕರ ವಿರುದ್ಧವೇ ಕಾರ್ಯಾಚರಿಸುತ್ತಿದೆ, ಎಂದೂ ಪತ್ರ ಹೇಳಿದೆಯಲ್ಲದೆ ವಿಶ್ವವಿದ್ಯಾಲಯಗಳು ಸ್ವತಂತ್ರ ಯೋಚನೆ ಹಾಗ ಹೊಸ ಐಡಿಯಾಗಳನ್ನು ಉತ್ತೇಜಿಸಬೇಕಿದ್ದರೆ ಇದೀಗ ಈ ಸಂಸ್ಥೆಗಳಲ್ಲಿಯೇ ಸಂವಿಧಾನವು ನಮಗೆ ನೀಡಿದ ಸ್ವಾತಂತ್ರ್ಯವನ್ನು ಅಮುಕಲು ಯತ್ನಿಸಲಾಗುತ್ತಿದೆ, ಎಂದೂ ಪತ್ರ ತಿಳಿಸಿದೆ.

ಜೆ ಎನ್ ಯು ವಿದ್ಯಾರ್ಥಿಗಳು ದೇಶದ ಭವಿಷ್ಯವಾಗಿದ್ದು ಅವರು ರಾಜಕೀಯ ವೈಷಮ್ಯ ಹಾಗೂ ಸರ್ವಾಧಿಕಾರಿ ನೀತಿಯಿಂದ ತೊಂದರೆಗೊಳಗಾಗದಂತೆ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕೆಂದು ವಿನಂತಿಸಲಾಗಿದೆ.

ಪತ್ರಕ್ಕೆ ಸಂಜೀವ್ ಭಟ್ಟ್ ಹೊರತು ಪಡಿಸಿ ಕೃಷ್ಣ ಗರ್ಗ್,ಚಂದ್ರಶೇಖರನ್ ಸುಬ್ರಹ್ಮಣ್ಯನ್, ಶ್ವೇತಾ ಸಂಜೀವ್ ಭಟ್ಟ, ಅಮಿತಾಭ್ ಬಸು, ರಾಜೀವ್ ತ್ಯಾಗಿ, ಸೀಮಾ ತ್ಯಾಗಿ, ಅನಿರ್ಬನ್ ಮುಖರ್ಜಿ, ಹರಿ ಕೃಷ್ಣ ಪ್ರಹ್ಲಾದ್, ಅಭಿಷೇಕ್ ಸಿಂಗ್ ಮೊದಲಾದವರು ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News