ಸಾಲಪಡೆದ ಗೆಳೆಯರಿಂದಲೇ ಕಲಾಭವನ್ ಮಣಿಯ ಹತ್ಯೆ!
ಕೊಚ್ಚಿ, ಮೇ 6: ಒಂದು ತಿಂಗಳ ಹಿಂದೆಯಷ್ಟೇ ಬಹಳ ಚರ್ಚೆಗೆ ಗ್ರಾಸವಾದ ಕಲಾಭವನ್ ಮಣಿಯ ಅಕಾಲಿಕ ಮರಣದ ಸುದ್ದಿ ನಂತರ ತಣ್ಣಾಗಾಯಿತು. ಆದರೆ ಮಣಿಯ ಅನೀರೀಕ್ಷಿತ ಮತ್ತು ನಿಗೂಢ ಸಾವು ಹಾಗೇ ತಣ್ಣಗಾಗಿ ಹೋಗಬೇಕಾದ ವಿಚಾರವೇ?. ಮಣಿಯ ಸಹೋದರ ಮಣಿ ರಾಮಕೃಷ್ಣನ್ ತನ್ನ ಕುಟುಂಬ ಎದುರಿಸುತ್ತಿರುವ ಮಾನಸಿಕ ಸಂಘರ್ಷ ಮತ್ತು ಬೆದರಿಕೆಗಳನ್ನು ವೆಬ್ ಪೋರ್ಟಲ್ ಒಂದರಲ್ಲಿ ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಇದೀಗೆ ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಕೋಲಾಹಲದಿಂದಾಗಿ ಮಣಿ ಸಾವಿನ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ರಾಮಕೃಷ್ಣನ್ ಆತಂಕವನ್ನು ವ್ಯಕ್ತಪಡಿಸಿದ್ದು ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಸರಿಯಾದ ಪ್ರಯತ್ನವನ್ನೇ ನಡೆಸಿಲ್ಲ ಎಂದು ಆರೋಪಿಸಿದ್ದಾರೆ. "ನಮಗೆ ತನಿಖೆಯ ಪ್ರಗತಿಯ ಕುರಿತು ಪೊಲೀಸರಿಂದ ಯಾವುದೇ ಮಾಹಿತಿ ದೊರಕಿಲ್ಲ. ಕೇರಳದಲ್ಲಿ ಚುನಾವಣೆಯ ಕಾವೇರಿರುವುದರಿಂದಾಗಿ ಈ ಕುರಿತು ಅವಸರಿಸಿಯೂ ಪ್ರಯೋಜನ ಇಲ್ಲವಲ್ಲ. ಸಿನೆಮಾ ರಂಗದ ಜನರಿಂದಲೂ ಹೇಳತಕ್ಕ ನೆರವು ದೊರಕಿಲ್ಲ" ಎಂದು ಅವರು ಹೇಳಿದ್ದಾರೆ.
ಸಿನೆಮಾರಂಗದಿಂದ ತನಿಖೆಯನ್ನು ಕೂಡ ತ್ವರಿತಗೊಳಿಸಲು ಕೂಡಾ ನೆರವು ಸಿಕ್ಕಿಲ್ಲ. ಅವರು ಎಲ್ಲವನ್ನೂ ಎಲ್ಲವನ್ನೂ ಸರಿಮಾಡೋಣ ಎನ್ನುತ್ತಿದ್ದಾರೆ. ಆದರೆ ನಿಜವಾಗಿಯೂ ಅವರಿಂದ ನೆರವು ಸಿಕ್ಕಿಲ್ಲ ಎಂದು ರಾಮಕೃಷ್ಣನ್ ಆರೋಪಿಸಿದ್ದಾರೆ. ವಾಸ್ತವದಲ್ಲಿ ನಾವಿಂದು ನಮ್ಮೊಂದಿಗೆ ಯಾರೂ ಇಲ್ಲದ ಸ್ಥಿತಿ ಎದುರಿಸುತ್ತಿದ್ದೇವೆ ಎಂದಅವರು ಅಣ್ಣನ ಸಾವಿನಲ್ಲಿ ಅವರ ಪತ್ನಿಯ ಹಸ್ತವಿದೆ ಎಂಬ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ." ಅವೆಲ್ಲವೂ ಸುಳ್ಳು ಮತ್ತು ಅಪಪ್ರಚಾರ" ಎಂದು ರಾಮಕೃಷ್ಣನ್ ಹೇಳಿದ್ದಾರೆ.
ಇಂತಹ ಬೋಗಸ್ ಸುದ್ದಿಗಳನ್ನು ಅಣ್ಣನ ಸಾವಿಗೆ ಕಾರಣರಾದವರೇ ಹುಟ್ಟುಹಾಕುತ್ತಿದ್ದಾರೆ ಎಂದು ರಾಮಕೃಷ್ಣನ್ ಹೇಳಿದ್ದಾರೆ. ಇಂತಹ ಸುದ್ದಿಗಳನ್ನು ಅವರು ಸೃಷ್ಟಿಸುತ್ತಿದ್ದಾರೆ. ಇವು ಪೊಲೀಸ್ ಮೂಲಗಳಿಂದ ಬಂದಿರುವ ಸುದ್ದಿಗಳಲ್ಲ. ನಿಜಕ್ಕೂ ಕಲಾಭವನ್ ಮಣಿಯ ಕೊಲೆಯನ್ನು ಜೊತೆಯಲ್ಲಿ ನಡೆದಾಡಿದವರಲ್ಲಿಯೇ ಯಾರೋ ಮಾಡಿದ್ದಾರೆ ಎಂದು ತನಗನಿಸುತ್ತಿದೆ ಎಂದು ರಾಮಕೃಷ್ಣನ್ ಹೇಳಿದ್ದಾರೆ. ಮಣಿಯ ಗೆಳೆಯರಲ್ಲಿಯೇ ತನಗೆ ಸಂದೇಹಗಳಿವೆ. ಸ್ವಲ್ಪ ಜಮೀನನ್ನು ಅಣ್ಣ ಖರೀದಿಸಲು ನಿರ್ಧರಿಸಿದ್ದರು ಆದ್ದರಿಂದ ಸಾಲ ಕೊಟ್ಟವರಿಂದ ಮರಳಿ ಕೇಳುವ ಸಮಯವೂ ಆಗಿತ್ತು. ಇಂತಹವರು ಅಣ್ಣನನ್ನು ಕೊಂದಿದ್ದಾರೆ ಎಂದ ಅವರು ಕೊಟ್ಟ ಸಾಲವನ್ನು ಮರಳಿ ಕೇಳಿದಾಗ ಗೆಳೆಯರೇ ಅಣ್ಣನಿಗೊಂದು ಗತಿ ತೋರಿಸಿದ್ದಾರೆಂದು ರಾಮಕೃಷ್ಣನ್ ಆರೋಪಿಸಿದ್ದಾರೆ. ಮಣಿಗೆ ಸಿನೆಮಾದಲ್ಲಿ ಅವಕಾಶ ಕಡಿಮೆಯಾದ್ದದ್ದಲ್ಲ. ಆದರೆ ಅಣ್ಣನ ಜೊತೆ ಅಡ್ಡಾಡುವವರೇ ನಿರ್ದೇಶಕರನ್ನು ಅಣ್ಣನ ಹತ್ತಿರ ಮಾತಾಡದಂತೆ ಮಾಡುತ್ತಿದ್ದರೆಂದು ಎಂದ ರಾಮಕೃಷ್ಣನ್ ಸಿನೆಮಾ ಕಡಿಮೆಯಾದ್ದರಿಂದ ಮಣಿ ನೊಂದುಕೊಂಡಿದ್ದರೆಂಬುದು ಸರಿಯಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಮಣಿಯಣ್ಣ ಯಾವತ್ತೂ ಆತ್ಮಹತ್ಯೆ ಮಾಡುವ ವ್ಯಕ್ತಿಯೇ ಅಲ್ಲ. ಬಹಳಷ್ಟು ನಿರೀಕ್ಷೆ ಮಹಾತ್ವಾಕಾಂಕ್ಷೆಗಳಿರುವ ವ್ಯಕ್ತಿಯಾಗಿದ್ದರು. ಶೇ. ನೂರರಷ್ಟು ಅವರನ್ನು ಕೊಲೆ ಮಾಡಲಾಗಿದೆ ಎಂದು ರಾಮಕೃಷ್ಣನ್ ಭರವಸೆಯಲಲ್ಲಿ ಹೇಳಿದ್ದಾರೆ. ಕುಟುಂಬಕ್ಕೆ ನೇರವಾಗಿ ಯಾವುದೇ ಬೆದರಿಕೆಗಳು ಇಲ್ಲದಿದ್ದರೂ ಪೊಲೀಸರು ಮದ್ಯಪಾನದಿಂದ ಮಣಿ ಮೃತರಾದರದ್ದಲ್ಲವೇ? ಇನ್ನೆಂಥ ತನಿಖೆ ಮಾಡುವುದು ಎಂಬ ನಿರ್ಲಕ್ಷ್ಯದ ಧ್ವನಿಯಲ್ಲಿ ಮಾತಾಡಿದ್ದಾರೆ. ಪೊಲೀಸರ ಮೇಲೆ ಪ್ರಭಾವ ಬೀರಿ ಕೇಸಿನ ಹಾದಿ ತಪ್ಪಿಸುವ ಪ್ರಯತ್ನಗಳಾಗಿವೆ. ಕೊಲೆಪಾತಕ ಬೆಳಕಿಗೆ ಬರಬಾರದು ಎಂದು ಬಯಸುವವರೇ ಇದರ ಹಿಂದೆ ಇರುವುದು ಎಂದು ರಾಮಕೃಷ್ಣ ದೃಢವಾಗಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.