×
Ad

ಒಮನ್‌ನಲ್ಲಿ ಸೋಮವಾರ ಬುಧಗ್ರಹ ಪ್ರತ್ಯಕ್ಷ!

Update: 2016-05-07 15:27 IST

ಮಸ್ಕತ್, ಮೇ 7: ಸೌರಪಥದಲ್ಲಿ ಅತ್ಯಂತ ಚಿಕ್ಕ ಗ್ರಹವಾದ ಬುಧ ಈ ತಿಂಗಳು ಒಂಬತ್ತಕ್ಕೆ ಮಧ್ಯಾಹ್ನದಿಂದ ಸೂರ್ಯನ ಎದುರುಬದುರು ಹಾದು ಹೋಗಲಿದೆ. ಒಂದು ಶತಮಾನದಲ್ಲಿ ಹನ್ನೆರಡು ಬಾರಿ ಮಾತ್ರ ಹೀಗೆ ಸಂಭವಿಸುತ್ತದೆ. ಭೂಮಿಗೂ ಸೂರ್ಯನಿಗೂ ನಡುವೆ ಬುಧ ಹಾದು ಹೋಗುವಾಗ ಒಂದು ಬೊಟ್ಟು ಎಂಬಂತೆ ಕಾಣಲು ಸಾಧ್ಯವಿದೆ. 2006ರ ನವೆಂಬರ್ ತಿಂಗಳಲ್ಲಿ ಕೊನೆಯದಾಗಿ ಹೀಗಾಗಿತ್ತು. ಈಸಲ ಬುಧಗ್ರಹ ಹಾದು ಹೋಗುವ ಆರಂಭ ಒಮನ್‌ನಲ್ಲಿ ಆಗಲಿದೆ. ಸಂಜೆ ಮೂರುಮೂವತ್ತಕ್ಕೆ ಗ್ರಹ ಸೂರ್ಯನ ಎದುರುಭಾಗವನ್ನು ಪ್ರತ್ಯಕ್ಷಗೊಳ್ಳಲಿದೆ. ರಾತ್ರೆ ಹತ್ತು ಗಂಟೆ ನಲ್ವತ್ತೆರಡು ನಿಮಿಷವಾಗುವಾಗ ದೃಶ್ಯ ಕೊನೆಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಆದರೆಒಮನ್‌ನಲ್ಲಿ ಸೂರ್ಯ 6.39ಕ್ಕೆ ಸೂರ್ಯ ಅಸ್ತಮಿಸುವುದರಿಂದ ಆನಂತರ ಬುಧಗ್ರಹದ ದೃಶ್ಯವನ್ನು ಕಾಣಲು ಸಾಧ್ಯವಿಲ್ಲ. ಮಧ್ಯಪ್ರಾಚ್ಯದ ಎಲ್ಲ ದೇಶಗಳಲ್ಲಿಯೂ ಆರಂಭಘಟ್ಟದಲ್ಲಿ ಬುಧನ ದೃಶ್ಯ ಕಾಣಿಸಲಿದೆ. ಸೂರ್ಯಾಸ್ತಮಾನದವರೆಗೂ ನೋಡಬಹುದು ಎಂದು ಹೇಳಲಾಗಿದೆ. ಆದರೆ ಬುಧಗ್ರಹದಿಂದಾಗಿ ಸೂರ್ಯ ಪ್ರಕಾಶಕ್ಕೆ ಅಡ್ಡಿ ಅಥವಾ ಕಡಿಮೆಯಾಗುವುದಿಲ್ಲ. ಎಲ್ಲವೂ ಸರಿಯಾಗಿ ನಡೆದರೆ ಸೂರ್ಯನಲ್ಲಿ ಸಣ್ಣ ಬೊಟ್ಟು ಹಾದುಹೋಗುವುದನ್ನು ನೋಡಬಹುದು.

ಆದರೆ ಇದನ್ನು ಬರೀ ಕಣ್ಣಿನಿಂದ ನೋಡಬಾರದು. ಕಣ್ಣಿನ ದೃಷ್ಟಿ ಹೋಗುವ ಸಾಧ್ಯತೆಇದೆಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. 2006ರಲ್ಲಿ ಆಕಾಶದಲ್ಲಿ ಬರೀ ಕಣ್ಣಿನಿಂದ ನೋಡಿದವರಿಗೆ ದೃಷ್ಟಿದೋಷವಾಗಿದೆ. ಕಳೆದಬಾರಿ ಒಮನ್‌ನಲಿ ಬುಧಗ್ರಹ ಕೆಲವೇ ಸಮಯ ಕಂಡು ಬಂದಿತ್ತು ಎಂದು ವರದಿಯಾಗಿದೆ. ಈ ಸಲ ಒಮನ್‌ನಲ್ಲಿ ಮೂರು ಗಂಟೆಗೂಹೆಚ್ಚುಕಾಲ ಒಮನ್‌ನಲ್ಲಿ ಬುಧಗ್ರಹ ಕಾಣಿಸಿಕೊಳ್ಳಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸೂರ್ಯಗ್ರಹಣವನ್ನು ವೀಕ್ಷಿಸುವಾಗ ಪಾಲಿಸುವ ಎಲ್ಲ ವಿಧಿವಿಧಾನಗಳನ್ನೇ ಅನುಸರಿಸಬೇಕೆಂದು ಎಚ್ಚರಿಸಲಾಗಿದೆ. ಇಂಟರ್‌ನೆಟ್‌ನಲ್ಲಿ ನೇರವಾಗಿ ಬುಧಗ್ರಹವನ್ನು ವೀಕ್ಷಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News