×
Ad

ಜಿಶಾರ ಕೊಲೆ ಪ್ರಕರಣ: ತನಿಖೆಯಲ್ಲಿ ಪೊಲೀಸರಿಂದ ನಿರ್ಲಕ್ಷ್ಯವಾಗಿದೆ, ಗೃಹ ಸಚಿವರಿಗೆ ಡಿಜಿಪಿ ವರದಿ

Update: 2016-05-07 15:30 IST

ಪೆರುಂಬಾವೂರ್, ಮೇ7: ಕಾನೂನು ವಿದ್ಯಾರ್ಥಿನಿ ಜಿಶಾ ಕ್ರೂರ ಹತ್ಯಾ ಘಟನೆಯ ಸಾಕ್ಷ್ಯಸಂಗ್ರಹದಲ್ಲಿ ಮತ್ತು ತನಿಖೆ ಆರಂಭಿಸಿರುವುದರಲ್ಲಿ ಸ್ಥಳೀಯ ಪೊಲೀಸ್‌ನಿಂದ ನಿರ್ಲಕ್ಷ್ಯ ಸಂಭವಿಸಿದೆ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ. ಆದರೆ ಪೊಲೀಸರಿಂದ ಪ್ರಮಾದವಾಗಿಲ್ಲ ಕೆಲವು ಕೇಸುಗಳಲ್ಲಿ ಆರೋಪಿಗಳ ಪತ್ತೆಗೆ ಸಮಯ ಹಿಡಿಯುತ್ತದೆಯೆಂದು ಗೃಹಸಚಿವರೂ ತನಿಖೆ ನಡೆಸುವ ಹೊಣೆಯಿರುವ ಐಜಿಯು ಹೇಳಿಕೆ ನೀಡಿದ ಬೆನ್ನಿಗೆ ಡಿಜಿಪಿ ಸೆನ್‌ಕುಮಾರ್ ಗೃಹ ಸಚಿವ ರಮೇಶ್ ಚೆನ್ನಿತ್ತಲಗೆ ಸಲ್ಲಿಸಿದ ವರದಿಯಲ್ಲಿ ಪೊಲೀಸರಿಂದ ಆರಂಭಿಕ ನಿರ್ಲಕ್ಷ್ಯ ಆಗಿದೆ ಎಂಬುದನ್ನು ದೃಢೀಕರಿಸಿರುವುದಾಗಿ ವರದಿಗಳು ತಿಳಿಸಿವೆ.

 ಗೃಹಇಲಾಖೆ ಮತ್ತು ಪೊಲೀಸರ ವಿರುದ್ಧ ಆರೋಪ ಎದ್ದು ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಆಗುತ್ತಿರುವ ವಿಳಂಬವನ್ನು ಗಣನೆಗೆತೆಗೆದುಕೊಂಡು ಗೃಹಸಚಿವ ರಮೇಶ್ ಚೆನ್ನಿತ್ತಲ ಉನ್ನತ ಮಟ್ಟ ವರದಿಯನ್ನು ಕೇಳಿದ್ದರು. ಸ್ಪೆಶಲ್ ಬ್ರಾಂಚ್ ಮೂಲಕ ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಡಿಜಿಪಿ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ

  ರಾಜಕೀಯ-ಆಡಳಿತ ಪಕ್ಷದ ಹಿತಾಸಕ್ತಿಯಿಲ್ಲದಿದ್ದೂ ತೆಗಳಿಕೆಯನ್ನು ಕೇಳಬೇಕಾಗಿ ಬಂದದ್ದೂ ಆರೋಪಿಗಳನ್ನು ಹಿಡಿಯಲು ವಿಳಂಬವಾಗುವುದು ಯುಡಿಎಫ್‌ಗೆ ದೋಷಕರವಾಗಿ ಪರಿಣಮಿಸಲಿದೆ ಎಂದು ಅಂದಾಜಿಸಿ ತುರ್ತು ವರದಿಯನ್ನು ಗೃಹಸಚಿವರು ಕೇಳಿದ್ದರು. ಪೊಲೀಸರಿಂದ ನಿರ್ಲಕ್ಷ್ಯವಾಗಿದೆ ಎಂಬ ನಿಟ್ಟಿನಲ್ಲಿ ವರದಿ ಇರುವುದರಿಂದಾಗಿ ವರದಿಯನ್ನು ಸದ್ಯ ಹೊರಗೆ ಬಿಡದೆಆರೋಪಿಗಳನ್ನು ಬಂಧಿಸಿದ ಬಳಿಕ ಡಿಪಾರ್ಟ್‌ಮೆಂಟ್ ಮಟ್ಟದ ತನೀಖೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದುಎಂದು ಸಚಿವರು ತಿಳಿಸಿರುವುದಾಗಿ ಸೂಚನೆಗಳು ಲಭಿಸಿವೆ. ಕಾಂಗ್ರೆಸ್ ಸಹಿತ ಯುಡಿಎಫ್ ನಾಯಕರಲ್ಲಿ ಯಾರೂ ತನಿಖೆಯಲ್ಲಿ ಹಸ್ತಕ್ಷೇಪ ನಡೆಸಲಿಕ್ಕೋಅಥವಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಲಿಕ್ಕೋ ಶ್ರಮಿಸಿಲ್ಲ ಎಂದು ಮಾಹಿತಿಗಳು ಲಭಿಸಿವೆ. ಕ್ರಮಕೈಗೊಳ್ಳುವುದರಲ್ಲಿ ಸಣ್ಣಪುಟ್ಟ ನಿರ್ಲಕ್ಷ್ಯ ನಡೆದಿದೆ ಆದರೆ ಅದು ಮನಪೂರ್ವಕವಲ್ಲ ಎಂದು ಡಿಜಿಪಿ ಸಚಿವರಿಗೆ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜೀಷಾರ ತಾಯಿ ರಾಜೇಶ್ವರಿ ಖಾಯಂ ದೂರುದಾರಳು ಎಂಬ ನೆಲೆಯಲ್ಲಿ ಸ್ಥಳೀಯ ಪೊಲೀಸರು ಅತೃಪ್ತಿ ವಹಿಸಿದ್ದರು ಎಂದು ಶಂಕಿಸಲಾಗಿದೆ. ರಾಜೇಶ್ವರಿ ಸಿಪಿಎಂ ಬೆಂಬಲಿಗರಾಗಿದ್ದರೂ ಎಲ್ಲ ಎಡ ಪಕ್ಷಗಳ ನಾಯಕರನ್ನು ಅವರು ಇಷ್ಟಪಟ್ಟಿರಲಿಲ್ಲ. ಸ್ಟೇಶನ್‌ನಿಂದ ದೂರಿನ ಮೇಲೆ ಕ್ರಮ ನಡೆಯದಿರುವುದು ಈ ಅಸಮಾಧಾನದಿಂದಾಗಿದೆಯೇ ಎಂದು ಶಂಕಿಸಲಾಗಿದೆ ಎಂದು ಸ್ಪೆಶಲ್ ಬ್ರಾಂಚ್ ವರದಿಯಲ್ಲಿ ಸೂಚಿಸಲಾಗಿದೆ.

ತನಿಖೆಯಲ್ಲಿ ಅಗತ್ಯವಿರುವ ನಿಷ್ಠುರತೆಯನ್ನು ಕೈಗೊಳ್ಳಬೇಕೆಂದು ಗೃಹಸಚಿವರು ನಿರ್ದೇಶನ ನೀಡಿದ್ದಾರೆ. ಇನ್ನುಮೇಲೆ ನಿರ್ಲಕ್ಷ್ಯ ದುಡುಕತನ ಆಗಬಾರದೆಂದು ವೈಜ್ಞಾನಿಕ ಸಾಕ್ಷ್ಯಗಳನ್ನು ಖಚಿತವಾದ ಮೇಲೆಯೇ ಬಂಧಿಸಬೇಕೆಂದು ಡಿಜಿಪಿ ಆಗ್ರಹಿಸಿದ್ಧಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News