30 ಸಾವಿರ ರೂ. ದಾಟಿದ ಚಿನ್ನದ ಬೆಲೆ
ಮುಂಬೈ, ಮೇ 7: ಚಿನ್ನದ ಬೆಲೆ ಗಗನಕ್ಕೇರಿದ್ದು, ಪ್ರತಿ 10 ಗ್ರಾಂ ಗೆ 30 ಸಾವಿರ ರೂ. ದಾಟಿದೆ. ಇದರ ಜೊತೆಗೆ ಶೇ. 1 ರಷ್ಟು ಸುಂಕ ವಿರೋಧಿಸಿ ಚಿನ್ನ ವ್ಯಪಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಜನರು ದೊಡ್ಡ ದೊಡ್ಡ ಆಭರಣ ಖರೀದಿಸುವ ಬದಲು ಸಣ್ಣ ಪುಟ್ಟ ಆಭರಣ ಖರೀದಿಯಲ್ಲಿ ತೃಪ್ತಿಪಡುತ್ತಿದ್ದಾರೆ. ಇದರಿಂದ ವಹಿವಾಟು ತಗ್ಗುತ್ತಿದೆ.
ಇದರಿಂದ ಚಿನ್ನ ಖರೀದಿಸುವವರ ಸಂಖ್ಯೆ ತಗ್ಗದೇ ಇದ್ದರೂ ಚಿನ್ನ ಖರೀದಿಸುವ ಪ್ರಮಾಣ ಖಂಡಿತವಾಗಿಯೂ ತಗ್ಗಲಿದೆ.
ಫೆಬ್ರವರಿಯಲ್ಲಿ 10 ಗ್ರಾಂ ಗೆ 26930 ರೂ ದರ ಇದ್ದು, ಪ್ರಸ್ತುತ 30 ಸಾವಿರ ಗಡಿ ದಾಟಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಾಲಿನಲ್ಲಿ ಸಾಧಾರಣ ವಹಿವಾಟು ನಡೆಯಲಿದೆ ಎಂದು ಅಖಿಲ ಭಾರತ ಆಭರಣ ವ್ಯಾಪಾರಿಗಳ ಮಹಾ ಮಂಡಳ ಅಧ್ಯಕ್ಷ ಜೆ.ವಿ. ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ.
ಚಿನ್ನ ಆಮದು ಶೇ. 10ರಷ್ಟು ಕುಸಿತ
ಆಭರಣ ವ್ಯಾಪಾರಿಗಳ ಮುಷ್ಕರದ ಹಿನ್ನೆಲೆಯಲ್ಲಿ ದೇಶೀಯ ಖರೀದಿ ತಗ್ಗಿದ ಪರಿಣಾಮ 2015-16ರಲ್ಲಿ ಚಿನ್ನದ ಆಮದು ಪ್ರಮಾಣ 950 ಟನ್ ಗೆ ಇಳಿದಿದೆ. ಕಳೆದ ವರ್ಷ 1050 ಟನ್ ಆಮದು ಮಾಡಿಕೊಳ್ಳಲಾಗಿತ್ತು. ಆಮದು ಸುಂಕ ವಿರೋಧಿಸಿ ಆಭರಣ ವ್ಯಾಪಾರಿಗಳು ಮುಷ್ಕರ ನಡೆಸಿದ್ದರಿಂದ ಚಿನ್ನದ ಆಭರಣ ಮಾರಾಟ ತಗ್ಗಿದೆ. ಹೀಗಾಗಿ ಆಮದು ಪ್ರಮಾಣ ತಗ್ಗಿದೆ ಎಂದು ಎಂಎಂಟಿಸಿ ಸಿಎಂಡಿ ವೇದ್ ಪ್ರಕಾಶ್ ತಿಳಿಸಿದ್ದಾರೆ.