×
Ad

ಸಾಲ ಮಾಡಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಆರ್ ಬಿ ಐ ಗವರ್ನರ್ ಎಚ್ಚರಿಕೆ

Update: 2016-05-07 15:55 IST

ಮುಂಬೈ :ಶಿಕ್ಷಣಕ್ಕಾಗಿ ಸಾಲ ಪಡೆಯುವ ವಿದ್ಯಾರ್ಥಿಗಳಿಗೆ ಎಚ್ಚರಿಕೆಯ ಮಾತುಗಳನ್ನಾಡಿರುವ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ಕೆಲವೊಂದು ಕೆಲಸಕ್ಕೆ ಬಾರದ ಪದವಿ ನೀಡುವಶಿಕ್ಷಣ ಸಂಸ್ಥೆಗಳ ಬಗ್ಗೆ ಜಾಗರೂಕರಾಗಿರುವಂತೆ ಹೇಳಿದ್ದಾರೆ.

ಸದ್ಯೋಭವಿಷ್ಯದಲ್ಲಿಉನ್ನತ ಮಟ್ಟದಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಬಹಳಷ್ಟು ದುಬಾರಿಯಾಗಲಿದೆಯೆಂದು ಹೇಳಿದ ಅವರು ಪದವಿ ಶಿಕ್ಷಣ ಎಲ್ಲರ ಕೈಗೆಟಕುವಂತಿರಬೇಕೆಂದು ಹೇಳಿದರು.

ಶಿವನಾಡರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ ಮಾಡಿದ ರಾಜನ್ ‘‘ಶಿಕ್ಷಣಕ್ಕಾಗಿ ಸಾಲ ಪಡೆದ ವಿದ್ಯಾರ್ಥಿಗಳು ಮುಂದೆ ಅವುಗಳನ್ನು ಸಂಪೂರ್ಣವಾಗಿ ಮರುಪಾವತಿಸುವಂತೆ ನೋಡಿಕೊಳ್ಳಬೇಕೆಂದರು.ಆದರೂ ಸಂಕಷ್ಟದಲ್ಲಿರುವ ಕೆಲವರ ಸಾಲಗಳನ್ನು ಮನ್ನಾ ಮಾಡಲಾಗುವುದಾದರೆ, ಕಡಿಮೆ ಸಂಬಳ ತರುವ ನೌಕರಿ ಮಾಡುವವರು ಭಾಗಶಃ ಸಾಲದ ಮೊತ್ತ ಮರುಪಾವತಿಸಬೇಕಾಗುತ್ತದೆ,’’ ಎಂದರು.

ಕೆಲವೊಂದು ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕ ಸಂಗ್ರಹಿಸಿ ನಿರುಪಯುಕ್ತ ಪದವಿಗಳನ್ನು ನೀಡುತ್ತವೆ, ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದರಲ್ಲದೆ ಇಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದರೆ ಸಾಲ ಮೊತ್ತ ಹೆಚ್ಚಾಗುವುದಷ್ಟೇ ಅಲ್ಲದೆ ಬೇರೇನೂ ಪ್ರಯೋಜನವಿಲ್ಲವೆಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News