ಹೊರರಾಜ್ಯದ ಯಾವ ಗೆಳೆಯನೂ ನನಗಿಲ್ಲ, ತನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ: ಜಿಶಾ ಸಹೋದರಿ ದೀಪಾ
ಕೊಚ್ಚಿ,ಮೇ 8: ತನಗೆ ಹೊರರಾಜ್ಯದ ಯಾರೊಂದಿಗೂ ತನಗೆ ಗೆಳೆತನವಿಲ್ಲ ಎಂದು ಕೊಲೆಯಾದ ಜಿಶಾರ ಸಹೋದರಿ ದೀಪಾ ಹೇಳಿರುವುದಾಗಿ ವರದಿಯಾಗಿದೆ. ತನ್ನ ಬಗ್ಗೆ ಕೆಲವು ದಿನಗಳಿಂದ ತುಂಬ ಕೆಟ್ಟದಾಗಿ ಅಪಪ್ರಚಾರ ನಡೆಯುತ್ತಿದೆ. ಹಿಂದಿ ಮಾತಾಡಲು ತಿಳಿಯದ ತನಗೆ ಹೊರರಾಜ್ಯದ ಗೆಳೆಯನಿದ್ದಾನೆ ಎಂಬ ವಾದ ಆಧಾರರಹಿತವಾದುದು ಎಂದು ದೀಪಾ ಸ್ಪಷ್ಟಪಡಿಸಿದ್ದಾರೆ. ತನ್ನ ಗೆಳೆಯರಲ್ಲಿ ಯಾರಿಗೂ ಜಿಶಾಳ ಪರಿಚಯವಿಲ್ಲ. ಮನೆ ಕೆಲಸಕ್ಕೆ ಬಂದ ಇಬ್ಬರು ಜಿಶಾರಿಗೆ ಬೆದರಿಕೆ ಹಾಕಿದ್ದರು. ಆದರೆ ಇವರು ಮಳೆಯಾಳಿಗಳು. ಈ ವಿಷಯಗಳನ್ನೆಲ್ಲ ತಾನು ಪೊಲೀಸರೊಂದಿಗೆ ಹೇಳಿದ್ದೇನೆ ಎಂದು ದೀಪಾ ಹೇಳಿದ್ದಾರೆ. ಜಿಶಾ ತನ್ನದೇ ರಕ್ತ ಅವಳನ್ನು ಕೊಲೆಮಾಡಿಸಲು ತನಗೆ ಸಾಧ್ಯವಿಲ್ಲ.
ತಾನು ಅಮ್ಮನ ತಾಯಿ ಮನೆಯಲ್ಲಿ ವಾಸಿಸುತ್ತಿದ್ದೇನೆ. ಕಳೆದ ಒಂದೂವರೆ ವರ್ಷಗಳಿಂದ ತಾನು ಪೆರುಂಬಾವೂರ್‌ಗೆ ಬಂದಿಲ್ಲ.ಆದ್ದರಿಂದ ತನಗೆ ಅಮ್ಮನಿಗೋ ಜಿಶಾಳಿಗೋ ಯಾರಾದರೂ ತೊಂದರೆ ನೀಡಿದ್ದಾರೆಯೇ ಎಂದು ತನಗೆ ತಿಳಿದಿಲ್ಲ ಎಂದು ದೀಪಾ ಹೇಳಿದ್ದಾರೆ. ನೆರೆಕರೆಯವರೊಂದಿಗೆ ಕೆಲವರಲ್ಲಿ ಮನಸ್ತಾಪವಿತ್ತು. ಆದರೆ ಬೆದರಿಕೆ ಇದೆ ಎಂದು ಜಿಶಾ ಹೇಳಿಲ್ಲ.
ಪತಿಯ ಆಧಾರ ಇಲ್ಲದಿದ್ದರಿಂದ ರಜೆ ಮಾಡದೆ ಪ್ರತಿ ದಿನಾಲೂ ಕೆಲಸಮಾಡಿ ಜೀವಿಸುತ್ತಿದ್ದೇನೆ. ಅಪಪ್ರಚಾರಗಳನ್ನು ಕೊನೆಗೊಳಿಸಬೇಕು. ತನಗೂ ಮಕ್ಕಳಿಗೂ ಇಲ್ಲಿಯೇ ಜೀವಿಸಬೇಕಾಗಿದೆ. ತಮ್ಮ ಕುಟುಂಬವನ್ನು ನಾಶಮಾಡಲು ಯೋಜನಾಬದ್ಧ ಪ್ರಯತ್ನ ನಡೆಯುತ್ತಿದೆ ಎಂದು ದೀಪಾ ಆರೋಪಿಸಿದ್ದಾರೆ.