×
Ad

ಆಗಸ್ಟಾ ವೆಸ್ಟ್‌ಲ್ಯಾಂಡ್‌ನಲ್ಲಿ ಆ್ಯಂಟನಿ ಹಣ ಪಡೆದಿಲ್ಲ: ವಿ.ಕೆ. ಸಿಂಗ್

Update: 2016-05-09 13:20 IST

ಕೋಟ್ಟಯಂ, ಮೇ 9: ಆಗಸ್ಟಾ ವೆಸ್ಟ್‌ಲ್ಯಾಂಡ್ ಭ್ರಷ್ಟಾಚಾರ ಹಗರಣದಲ್ಲಿ ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಹಣ ಪಡೆದಿಲ್ಲ ಎಂದು ಕೇಂದ್ರ ವಿದೇಶಾಂಗ ಸಹಾಯಕ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ. ಈ ವ್ಯವಹಾರದಲ್ಲಿ ಆ್ಯಂಟನಿ ಹಣಪಡೆದಿದ್ದಾರೆ ಎಂದರೆ ಯಾರು ನಂಬುವುದಿಲ್ಲ. ಆದರೆ ಅದಕ್ಕೆ ಅವಕಾಶ ಮಾಡಿಕೊಡುವುದು ಭ್ರಷ್ಟಾಚಾರಕ್ಕೆ ಸಮಾನವಾಗಿದೆ. ಅವರ ಜೊತೆ ಕೆಲಸ ಮಾಡಿರುವ ತನಗೆ ಅವರಲ್ಲಿ ಗೌರವವಿದೆ ಎಂದು ವಿಕೆ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ.

ಆದರೆ ಸುತ್ತಮುತ್ತ ಇರುವವರು ಹಣ ಅಪಹರಿಸುವುದನ್ನು ಯಾಕೆ ಕೈಕಟ್ಟಿ ನೋಡುತ್ತಾ ನಿಂತರು ಎಂದು ಸುದ್ದಿಗೋಷ್ಠಿಯಲ್ಲಿ ಸಿಂಗ್ ಪ್ರಶ್ನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಣ ಎಲ್ಲಿಗೆ ಹೋಯಿತೆಂಬ ಪ್ರಶ್ನೆ ಈಗಲೂ ಬಾಕಿ ಉಳಿದಿದೆ ಎಂದುಸಿಂಗ್ ಹೇಳಿದ್ದಾರೆ. ಇದರ ಕುರಿತ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕಾಗಿದೆ. ಎಲ್ಲ ತಪ್ಪಿತಸ್ಥರನ್ನು ಬಹಿರಂಗಕ್ಕೆ ತರಬೇಕು. ಆದರೆ ಕರ್ನಲ್ ಎ.ಎಸ್. ಪಿ. ತ್ಯಾಗಿ ಮಾತ್ರವೇ ಹಣ ಪಡೆದಿದ್ದಾರೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News